ಮೈಸೂರು, ಕರ್ನಾಟಕ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನೋಡಿ ಬಿಜೆಪಿಯವರು ಗಾಬರಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ. ಅಲ್ಲದೇ, ಬಜರಂಗದಳ, ಪಿಎಫ್ಐ ನಿಷೇಧ ಪ್ರಸ್ತಾಪ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಅವರು, ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ(Karnataka Election 2023).
ಮೈಸೂರಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಕ್ಕೆ ಬಂದಿರುವ ದುಃಖ ದೂರು ಮಾಡುವಂತೆ ಚಾಮುಂಡಿ ದೇವಿಯನ್ನು ಬೇಡಿದ್ದೇನೆ. ಯಶಸ್ಸು ನಮಗೆ ಖಂಡಿತ ಸಿಗುತ್ತದೆ. ದುಷ್ಟರನ್ನು ದೂರ ಮಾಡಿ ಈ ರಾಜ್ಯಕ್ಕೆ ತಾಯಿ ಒಳ್ಳೆಯದು ಮಾಡುತ್ತಾಳೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿ ಅವರು ಗಾಬರಿ ಆಗಿದ್ದಾರೆ. ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ? ಬಜರಂಗದಳ ಒಂದು ರಾಜಕೀಯ ಪಕ್ಷದ ವಿಭಾಗ. ಹುಟ್ಟುವವೆಲ್ಲಾ ಬಸವ ಆಗೋಕೆ ಆಗುತ್ತಾ? ಹನುಮಂತನ ಹೆಸರು ಇಟ್ಟು ಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯನಾ ಎಂದು ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದರು.
ಬಜರಂಗದಳದವರು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ. ಬಜರಂಗ ಬಲಿಯ ಭಕ್ತರು ನಾವು. ನೋಡಿ ಬಜರಂಗಬಲಿ ಕುಂಕುಮ ಇಟ್ಟು ಕೊಂಡಿದ್ದೇನೆ. ಆಂಜನೇಯನ ಭಕ್ತರು ನಾವು. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ. ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುತ್ತೇವೆ. ದೇವರ ಹೆಸರನ್ನು ರಾಜಕೀಯವಾಗಿ ಬಳಸಲು ಪ್ರಧಾನಿ ಹಾಗೂ ಬಿಜೆಪಿ ಯತ್ನಿಸುತ್ತಿದೆ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ಇದನ್ನೂ ಓದಿ: dk shivakumar : ಹೆಲಿಕಾಪ್ಟರ್ ಅಪಘಾತ; ಡಿ ಕೆ ಶಿವಕುಮಾರ್ ಸ್ವಲ್ಪದರಲ್ಲಿಯೇ ಪಾರು
ಒಂದು ಆಂಜನೇಯನ ದೇವಾಲಯವನ್ನು ಬಿಜೆಪಿ ಅವರು ಕಟ್ಟಿದ್ದಾರಾ? ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ಮಾಡುತ್ತೇವೆ. ಪ್ರತಿ ತಾಲೂಕಿನಲ್ಲೂ ಆಂಜನೇಯನ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ. ಏನೂ ಹೊಟ್ಟೆ ತುಂಬಿಸಿದೆ, ಯಾರಿಗೆ ಏನೂ ಸಹಾಯ ಮಾಡ್ದೆ ಅಂತಾ ಪ್ರಧಾನಿಗಳು ಹೇಳುತ್ತಿಲ್ಲ. ಬಿಜೆಪಿ ಅವರು ಈಶ್ವರಪ್ಪನನ್ನೆ ಸುಟ್ಟು ಹಾಕಿದ್ದಾರೆ. ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಈಶ್ವರಪ್ಪನನ್ನೆ ಸುಟ್ಟು ಹಾಕಿದರು. ದೇವರನ್ನು ನಾನು ನಂಬಿದ್ದೇನೆ. ವೈಯುಕ್ತಿಕವಾಗಿಯೂ ನನಗೆ ಫಲ ಸಿಗುತ್ತೆ, ರಾಜ್ಯಕ್ಕೂ ಫಲ ಸಿಗುತ್ತದೆ ಎಂದು ಹೇಳಿದರು.