ಬೆಂಗಳೂರು: ಮೋಸ್ಟ್ ವಾಂಟೆಡ್ ಉಗ್ರ ಅರಾಫತ್ ಅಲಿ (ISIS Terrorist Arafat Ali) ಬಂಧನದ ಬಳಿಕ ಎನ್‌ಐಎ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲಾಗಿದ್ದು, ಇವರು ತೀರ್ಥಹಳ್ಳಿಯನ್ನು ಭಟ್ಕಳದಂತೆ ಉಗ್ರರ ನೆಲೆಯಾಗಿಸಬೇಕು ಎಂದು ಬಯಸಿದ್ದರು ಎಂದು ಗೊತ್ತಾಗಿದೆ.
ರಾಜ್ಯದ ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ ಹಾಗೂ ಇಕ್ಬಾಲ್‌ರಿಂದ ಭಟ್ಕಳ ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇಂಡಿಯನ್ ಮುಜಾಹಿದ್ದೀನ್ ಎಂಬ ಕುಖ್ಯಾತ ಉಗ್ರ ಸಂಘಟನೆ ಸ್ಥಾಪನೆಯಲ್ಲಿ ಈ ಮೂವರ ಪಾತ್ರವಿತ್ತು. ಅದರಂತೆಯೇ ತೀರ್ಥಹಳ್ಳಿಯ ಹೆಸರೂ ಆಗಬೇಕು; ʼತೀರ್ಥಹಳ್ಳಿ ಬ್ರದರ್ಸ್ʼ ಎಂದು ತಾವು ಹೆಸರರಾಗಬೇಕು ಎಂದುಕೊಂಡಿದ್ದರು ಈ ಪರಮಪಾಪಿಗಳು ಎಂಬುದು ತಿಳಿದುಬಂದಿದೆ.
ಇದನ್ನ ಪದೇ ಪದೆ ಮಾಜ್ ಹಾಗೂ ಶಾರೀಕ್‌ಗೆ ಆರೋಪಿ ಅರಾಫತ್ ಅಲಿ ಒತ್ತಿ ಹೇಳುತ್ತಾ ಇದ್ದ. ಅರಾಫತ್ ಅಲಿಗೆ ಈ ಸೂಚನೆ ಕೊಡುತ್ತಾ ಇದ್ದವನು ಅಬ್ದುಲ್ ಮತೀನ್. ಎನ್‌ಐಎ ವಾಂಟೆಡ್ ಟೆರರಿಸ್ಟ್ ಆಗಿರುವ ಅಬ್ದುಲ್ ಮತೀನ್ ಹಾಗೂ ಮಾಜ್ ಮುನೀರ್, ಶಾರೀಕ್, ಅರಾಫತ್ ಅಲಿ ನಾಲ್ವರೂ ತೀರ್ಥಹಳ್ಳಿ ಮೂಲದವರೇ ಆಗಿದ್ದಾರೆ. ಸದ್ಯ ಮೂವರ ಬಂಧನ ಆಗಿದ್ದು ಅಬ್ದುಲ್ ಮತೀನ್ ಬಂಧನ ಆಗಬೇಕಿದೆ.
ತೀರ್ಥಹಳ್ಳಿ ಬ್ರದರ್ಸ್ ಕಾನ್ಸೆಪ್ಟ್ ಹುಟ್ಟು ಹಾಕಿದ್ದೇ ಅಬ್ದುಲ್ ಮತೀನ್ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಅಬ್ದುಲ್ ಮತೀನ್ 2014ರಲ್ಲೇ ಉಗ್ರವಾದದ ನಂಟು ಅಂಟಿಸಿಕೊಂಡಿದ್ದ. ಈ ವೇಳೆ 2020ರಲ್ಲಿ ಮಾಜ್ ಮುನೀರ್, ಶಾರೀಕ್ ಹಾಗೂ ಅರಾಫತ್ ಅಲಿ ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಇವರನ್ನು ಕಾಂಟ್ಯಾಕ್ಟ್ ಮಾಡಿದ್ದ ಅಬ್ದುಲ್ ಮತೀನ್, ಶಾರೀಕ್ ಹಾಗೂ ಮಾಜ್ ಮುನೀರ್‌ಗೆ ಉಗ್ರವಾದದ ಪಾಠ ಮಾಡುತ್ತಿದ್ದ. ಅಬ್ದುಲ್ ಮತೀನ್ ಸೂಚನೆಯಂತೆ ಅರಾಫತ್ ಅಲಿಯೂ ವಿದೇಶಕ್ಕೆ ಎಸ್ಕೇಪ್ ಆಗಿದ್ದ.
ಮೊದಲು ಟ್ರೈನಿಂಗ್ ಆಗಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದ. ಬಳಿಕ ನೀಡಿದ ಮೊದಲ ಟಾರ್ಗೇಟ್ ಕದ್ರಿ ದೇವಸ್ಥಾನದಲ್ಲಿ ಸ್ಫೋಟ ನಡೆಸುವುದಾಗಿತ್ತು. ಆದರೆ ಮೊದಲ ಯತ್ನವೇ ವಿಫಲವಾಗಿತ್ತು. ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಆರಂಭದಲ್ಲಿಯೇ ತೀರ್ಥಹಳ್ಳಿ ಬ್ರದರ್ಸ್ ಆಗುವ ಕನಸು ದಾರಿ ತಪ್ಪಿತ್ತು. ಹೀಗಾಗಿಯೇ ವಾಪಸ್ಸು ಇಂಡಿಯಾಗೆ ಬಂದಿದ್ದ ಅರಾಫತ್ ಅಲಿ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: ISIS Terrorist : ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರ ಅರಾಫತ್ ಅಲಿ ಸೆರೆ