ಬೆಂಗಳೂರು, ಕರ್ನಾಟಕ: ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಜಮಖಂಡಿಯಲ್ಲಿ ಮಾತ್ರ ಬಿಜೆಪಿ ಗೆದ್ದಿದ್ದೆ. ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಅವರು ಗೆಲುವಿನ ನಗೆ ಬೀರಿದ್ದಾರೆ. ಹಾಲಿ ಶಾಸಕರಾಗಿದ್ದ ಕಾಂಗ್ರೆಸ್‌ನ ಆನಂದ ನ್ಯಾಮಗೌಡ ಅವರನ್ನು ಗುಡಗುಂಟಿ ಅವರನ್ನು ಸೋಲಿಸಿದ್ದಾರೆ. ಆನಂದ್ ನ್ಯಾಮಗೌಡ ಅವರಿಗೆ 76466 ಮತಗಳು ಬಿದ್ದರೆ, ಗುಡಗುಂಟಿ ಅವರು 81063 ಮತಗಳನ್ನು ಪಡೆದುಕೊಂಡಿದ್ದಾರೆ. ಗೆಲುವಿನ ಅಂತರ 4597 ಮತಗಳಾಗಿವೆ(Jamkhandi Election Results).
2023ರ ಅಭ್ಯರ್ಥಿಗಳು ಯಾರು?
ಕಾಂಗ್ರೆಸ್‌ನ ಹಾಲಿ ಶಾಸಕರಾಗಿದ್ದ ಆನಂದ್ ನ್ಯಾಮಗೌಡ ಅವರು ಮತ್ತೆ ಕಣದಲ್ಲಿದ್ದರು. ಬಿಜೆಪಿಯಿಂದ ಜಗದೀಶ್ ಗುಡುಗಂಟಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಜೆಡಿಎಸ್‌ನಿಂದ ಯಾಕೂಬ್ ಕಪಡೇವಾಲೆ ಅವರು ಸ್ಪರ್ಧಿಸಿದ್ದರು.
ಇದನ್ನೂ ಓದಿ: Vijayapura City Election Results: ವಿಜಯಪುರ ನಗರ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಮತ್ತೆ ಗೆಲುವು
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಜಮಖಂಡಿ ಬಾಗಲಕೋಟೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಮೊದಲಿನಿಂದಲೂ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರವಾಗಿದೆ. ಹಾಲಿ ಶಾಸಕ ಆನಂದ ನ್ಯಾಮಗೌಡ ಅವರು 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇವರ ತಂದೆ ಸಿದ್ದು ನ್ಯಾಮಗೌಡ ಅವರು 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಅವರು 49245 ಮತಗಳನ್ನು ಪಡೆದುಕೊಂಡಿದ್ದರು. ಇವರ ಪ್ರತಿಸ್ಪರ್ಧಿ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರು 46450 ಮತಗಳನ್ನು ಪಡೆದುಕೊಂಡಿದ್ದರು. 2018ರಲ್ಲಿ ನಡೆದ ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರು ನಿಧನರಾದರು. ಆಗ ನಡೆದ ಉಪ ಚುನಾವಣೆಯಲ್ಲಿ ಆನಂದ ನ್ಯಾಮಗೌಡ ಅವರು ಆಯ್ಕೆಯಾದರು.