Site icon Vistara News

JDS Pancharatna Yatre | SC-ST ಮೀಸಲಾತಿ ವಿಚಾರದಲ್ಲಿ ಎಚ್‌ಡಿಕೆ ʼಸಿಎಂ ಹೆಣ್ಣೆದೆʼ ಪ್ರಸ್ತಾಪಿಸಿದ್ದು ಏಕೆ?

pancharatna rathayatre inaugaration 6

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ. ಚುನಾವಣೆ ಹತ್ತಿರ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಇವರಿಗೆ ಗಂಡೆದೆ ಇದ್ದಿದ್ದರೆ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿಯವರನ್ನು ಏಕೆ 252 ದಿನ ಧರಣಿ ಕೂರಿಸುತ್ತಿದ್ದರು? ಮೀಸಲಾತಿಗೆ ನಮ್ಮ ಸಹಕಾರವೂ ಇದೆ. ನಮ್ಮ ಸಹಕಾರದಿಂದ ಇಂದು ಅವರ ಗಂಡೆದೆ ಹೊರಗೆ ಬಂದಿದೆ. ಇಲ್ಲದೆ ಹೋಗಿದ್ದರೆ ಹೆಣ್ಣೆದೆ ಹೊರಗೆ ಬರುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ (JDS Pancharatna Yatre) ವೇಳೆ ಹೇಳಿದರು.

ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ ಮೀಸಲಾತಿ ಕೊಡಲು ಗಂಡೆದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಾತ್ರ ಸಾಧ್ಯವಾಯಿತು ಎಂಬ ಕಂದಾಯ ಸಚಿವ ಆರ್‌. ಅಶೋಕ್ ಹೇಳಿಕೆ ಪ್ರತಿಕ್ರಿಯೆ ನೀಡಿ, ಮೀಸಲಾತಿ ವಿಚಾರದಲ್ಲಿ ಈಗ ಏನಾಗಿದೆ? ಗಂಡೆದೆ ಮುಖ್ಯಮಂತ್ರಿ ಆಗಿದ್ದವರು‌ ಎರಡು ವರ್ಷ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ? ಇದೊಂದು ಚುನಾವಣೆ ಸ್ಟಂಟ್ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದರು.

ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಎಂದು ನೀಡಿದವರು ಎಂದರೆ ಅದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮಾತ್ರ. ದೇವೇಗೌಡರ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿಯೂ ಇಲ್ಲ. ಚುನಾವಣೆ ಹತ್ತಿರ ಬಂದಿದೆ. ಹೀಗಾಗಿ ಈಗ ಮೀಸಲಾತಿಯನ್ನು ಕೊಟ್ಟಿದ್ದಾರೆ. ಇವರಿಗೆ ಗಂಡೆದೆ ಇದ್ದಿದ್ದರೆ ಶ್ರೀಗಳನ್ನು ಏಕೆ 252 ದಿನ ಧರಣಿ ಕೂರಲು ಬಿಡುತ್ತಿದ್ದರು. ಮೀಸಲಾತಿಗೆ ನಮ್ಮ ಸಹಕಾರವೂ ಇದೆ. ನಮ್ಮ ಸಹಕಾರದಿಂದ ಇಂದು ಅವರ ಗಂಡೆದೆ ಹೊರಗೆ ಬಂದಿದೆ. ಇಲ್ಲದೆ ಹೋಗಿದ್ದರೆ ಹೆಣ್ಣೆದೆ ಹೊರಗೆ ಬರುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ | JDS Pancharatna Yatre | ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಚಾಲನೆ; ಶಿಕ್ಷಣ, ಆರೋಗ್ಯ, ರೈತ, ಮಹಿಳೆ, ವಸತಿ ಮಂತ್ರ

ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆಎಚ್ಚೆತ್ತ ಎಚ್‌ಡಿಕೆ
ವಿಪಕ್ಷಗಳು ಸಹಕಾರ ಕೊಟ್ಟ ಕಾರಣ ಇವತ್ತು ಗಂಡೆದೆ ಹೊರಗೆ ಬಂದಿದೆ. ಇಲ್ಲದೆ ಹೋಗಿದ್ದರೆ ಹೆಣ್ಣೆದೆ ಹೊರಗೆ ಬರುತ್ತಿತ್ತು ಎಂದು ಮಾತನಾಡಿದ ಕುಮಾರಸ್ವಾಮಿ, ತಕ್ಷಣವೇ ಎಚ್ಚೆತ್ತು ನನಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆ ಎಂದು ಮಾತು ತೇಲಿಸಿದರು.

ಆಪರೇಷನ್‌ ಕಮಲ ಬಗ್ಗೆ ಕಿಡಿ
ತೆಲಂಗಾಣದಲ್ಲಿ ಆಪರೇಷನ್ ಕಮಲ ವಿಚಾರವಾಗಿ ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ಕರ್ನಾಟಕ ಮುಗೀತು, ರಾಜಸ್ಥಾನ ಆಯ್ತು, ಮಹಾರಾಷ್ಟ್ರದಲ್ಲಿಯೂ ಮಾಡಿಯಾಯ್ತು. ಈಗ ತೆಲಂಗಾದಲ್ಲಿ ಆಪರೇಷನ್ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಅಷ್ಟು ಸುಲಭಕ್ಕೆ ಆಪರೇಷನ್ ಆಗುವುದಿಲ್ಲ. ಹಣದ ಸಮೇತ ಸಿಕ್ಕಿ ಹಾಕಿಕೊಂಡಿದ್ದಾರೆ. ಆಪರೇಷನ್ ಕಮಲಕ್ಕೆ ಅಕ್ರಮದ ಹಣ ಸುರಿಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಈ ಬಗ್ಗೆ ಮಾತಾಡಬೇಕು. ಜಾರಿ ನಿರ್ದೇಶನಾಲಯದವರು (ಇ.ಡಿ) ಅವರು ಸೀಜ್ ಮಾಡಿದ 14 ಕೋಟಿ ರೂಪಾಯಿ ಬಗ್ಗೆ ಮಾತನಾಡಬೇಕು. ಇ.ಡಿ.ಯವರು ಈಗ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ ಟ್ರ್ಯಾಕ್ಟರ್‌ ರ‍್ಯಾಲಿಗೆ ಗೇಲಿ
ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕಾಂಗ್ರೆಸ್‌ನವರು ಈಗ ಟ್ರ್ಯಾಕ್ಟರ್‌ ರ‍್ಯಾಲಿ ಮಾಡುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ. ಐದು ವರ್ಷ ಅವರದ್ದೇ ಸರ್ಕಾರ ಇತ್ತಲ್ಲವೇ? ಆಗ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಉತ್ತರಿಸಲಿ, ಅವರ ಕೊಡುಗೆ ಏನಿದೆ ಎಂಬುದಕ್ಕೆ ಮೊದಲು ಉತ್ತರ ಕೊಡಬೇಕು. ಇದನ್ನೆಲ್ಲ ಜನರು ಒಪ್ಪಲಾರರು, ಅವರ ಜೋಡೋ ಯಾತ್ರೆಯನ್ನು ಜನ ನೋಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ | Election 2023 | ಎಚ್‌.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಆಗಲಿ; ಎಚ್‌ಡಿಕೆ ಫೋಟೊ ಇಟ್ಟು ಲಕ್ಷ್ಮೀ ಪೂಜೆ ಮಾಡಿದ ಅಭಿಮಾನಿ!

Exit mobile version