ಬೆಂಗಳೂರು: ರಿಲಯನ್ಸ್ ಜಿಯೋ, ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿದಂತೆ ದೇಶಾದ್ಯಂತ 27 ನಗರಗಳಲ್ಲಿ ಟ್ರೂ 5ಜಿ(Jio True 5G) ಸೇವೆಗಳನ್ನು ಆರಂಭಿಸಿದೆ. ಇದರೊಂದಿಗೆ ಜಿಯೋ ರಾಮನಗರ, ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿಯಲ್ಲಿ ಮುಂದಿನ ಪೀಳಿಗೆಯ ಟ್ರೂ 5ಜಿ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಟೆಲಿಕಾಂ ಆಪರೇಟರ್ ಆಗಿದೆ.
ರಿಲಯನ್ಸ್ ಜಿಯೋದಿಂದ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಇತರ ನಗರಗಳು ಹೀಗಿವೆ: ತಾಡಿಪತ್ರಿ (ಆಂಧ್ರಪ್ರದೇಶ), ಭಟಪಾರ (ಛತ್ತೀಸ್‌ಗಢ), ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ), ಚಂಗನಾಗ್ (ಜಮ್ಮು ಮತ್ತು ಕಾಶ್ಮೀರ), ಮುವಾಟ್ಟುಪುಳ, ಕೊಡುಂಗಲ್ಲೂರು (ಕೇರಳ), ಕಟ್ನಿ ಮುರ್ವಾರ (ಮಧ್ಯಪ್ರದೇಶ), ಸತಾರಾ (ಮಹಾರಾಷ್ಟ್ರ), ಪಠಾಣ್‌ಕೋಟ್ (ಪಂಜಾಬ್), ಪೊಲ್ಲಾಚಿ, ಕೋವಿಲ್‌ಪಟ್ಟಿ (ತಮಿಳುನಾಡು), ಸಿದ್ದಿಪೇಟ್, ಸಂಗಾರೆಡ್ಡಿ, ಜಗ್ತಿಯಾಲ್, ಕೊತಗುಡೆಂ, ಕೊಡಾಡ್, ತಾಂಡೂರ್, ಜಹೀರಾಬಾದ್, ನಿರ್ಮಲ್ (ತೆಲಂಗಾಣ), ರಾಂಪುರ (ಉತ್ತರ ಪ್ರದೇಶ), ಕಾಶಿಪುರ, ರಾಮನಗರ (ಉತ್ತರಾಖಂಡ) ಮತ್ತು ಬಂಕುರಾ (ಪಶ್ಚಿಮ ಬಂಗಾಳ)
ಅಂದಹಾಗೆ, ಈ ಮೇಲ್ಕಂಡ ನಗರಗಳ ಪೈಕಿ ಬಹುತೇಕ ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ. ಜಿಯೋ ಟ್ರೂ 5ಜಿ 1 ಜಿಬಿಪಿಎಸ್ ವರೆಗೆ ವೇಗದ ಇಂಟರ್ ನೆಟ್ ನೀಡುತ್ತದೆ. ಇದರ ಜತೆಗೆ ಹೈ-ಡೆಫಿನಿಷನ್ ಕಂಟೆಂಟ್ ತಡೆರಹಿತ ಸ್ಟ್ರೀಮಿಂಗ್, ಲೋ ಲೇಟೆನ್ಸಿ ಮತ್ತು ಸಂವಾದಾತ್ಮಕ ವೀಕ್ಷಣೆ ಹಾಗೂ ಕ್ಲೌಡ್ ಗೇಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಈ ನಗರಗಳ ಜನರು ಮತ್ತು ಉದ್ಯಮಕ್ಕೆ ಅನುಕೂಲವಾಗುತ್ತದೆ.
ತಂತ್ರಜ್ಞಾನವು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಆಗುಮೆಂಟೆಡ್ ರಿಯಾಲಿಟಿ (AR), ಮತ್ತು ವರ್ಚುವಲ್ ರಿಯಾಲಿಟಿ (VR) ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಭರವಸೆ ನೀಡುತ್ತದೆ, ಇದು ಆರೋಗ್ಯ ರಕ್ಷಣೆ, ಕೃಷಿ, ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರಗಳಲ್ಲಿ ನವೀನ ಅಪ್ಲಿಕೇಷನ್‌ಗಳಿಗೆ ದಾರಿ ಮಾಡಿಕೊಡುತ್ತದೆ.
ಇದನ್ನೂ ಓದಿ: ಈಗ ದೇಶದ 304 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಲಭ್ಯ, ಕೋಲಾರದಲ್ಲೂ ಲಾಂಚ್
ಈ ಆರಂಭದ ಕುರಿತು ಮಾತನಾಡಿದ ಜಿಯೋ ವಕ್ತಾರರು, ಹೋಳಿ ಹಬ್ಬದ ಸಂದರ್ಭದಲ್ಲಿ, 13 ರಾಜ್ಯಗಳಾದ್ಯಂತ 27 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಇದರೊಂದಿಗೆ ದೇಶದಲ್ಲಿ 331 ನಗರಗಳಿಗೆ ಜಿಯೋ ಟ್ರೂ 5ಜಿ ಸೇವೆಗಳ ಪ್ರಯೋಜನಗಳನ್ನು ಮತ್ತು ತಲುಪುವಿಕೆಯನ್ನು ಮುಟ್ಟುತ್ತದೆ ಎಂದು ತಿಳಿಸಿದರು.