Site icon Vistara News

Court order : ಬಸ್ಸಿನಲ್ಲಿ ಸೀಮೆಎಣ್ಣೆ ಸಾಗಿಸಲು ಯತ್ನಿಸಿದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ, 5000 ರೂ. ದಂಡ ವಿಧಿಸಿದ ಕೋರ್ಟ್‌

Kerosene

#image_title

ಹಡಗಲಿ: ಸರ್ಕಾರಿ ಬಸ್ ನಲ್ಲಿ ಸೀಮೆ ಎಣ್ಣೆ ಸಾಗಾಟ ಮಾಡಲು ಅವಕಾಶವಿಲ್ಲ ಎಂದು ಹೇಳಿದರೂ ಕೇಳದೆ ಚಾಲಕ ಮತ್ತು ನಿರ್ವಾಹಕನ ಮೇಲೆಯೇ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನಿಗೆ ಹಡಗಲಿ ಜೆಎಂಎಫ್‌ಸಿ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು (Court order) ನೀಡಿದೆ.

2014ರ ಡಿಸೆಂಬರ್ 16ರಂದು ಸಂಜೆ ವೇಳೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಗ್ರಾಮದ ಶಿವಪ್ಪನವರ ಮಹೇಶಪ್ಪ ಎಂಬವರು ಸರ್ಕಾರಿ ಬಸ್‌ನಲ್ಲಿ (KA-34 F 941 KSRTC) ಸೀಮೆ ಎಣ್ಣೆ ಸಾಗಾಟಕ್ಕೆ ಯತ್ನಿಸಿದ್ದರು.

ಈ ವೇಳೆ ಬಸ್ ಚಾಲಕ ಕಂ ನಿರ್ವಾಹಕರಾಗಿದ್ದ ಅಂಗಡಿ ಕೊಟ್ರಪ್ಪ ಅವರು, ʻʻಇದು ಪ್ರಯಾಣಿಕರ ಬಸ್. ಬಸ್‌ನಲ್ಲಿ ಸೀಮೆ ಎಣ್ಣೆ ಸಾಗಾಟಕ್ಕೆ ಅವಕಾಶವಿಲ್ಲʼʼ ಎಂದಾಗ ಇಬ್ಬರ ಮಧ್ಯ ವಾಗ್ವಾದ ಆಗಿತ್ತು. ಜೊತೆಗೆ ಆರೋಪಿ ಶಿವಪ್ಪನವರ ಮಹೇಶಪ್ಪ, ಡ್ರೈವರ್ ಅಂಗಡಿ ಕೊಟ್ರಪ್ಪ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೀಮೆಎಣ್ಣೆ ಕ್ಯಾನಿನಿಂದ ತಲೆಗೆ ಹೊಡೆದು ಗಾಯಗೊಳಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕ ಡ್ರೈವರ್ ಕೊಟ್ರಪ್ಪ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಹಡಗಲಿ ಪೊಲೀಸರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಹಡಗಲಿಯ ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ಅಜ್ಜಯ್ಯ ದೂರುದಾರರ ಪರ ವಾದ ಮಂಡಿಸಿದ್ದರು.

ಪ್ರಕರಣದ ಪರ ಮತ್ತು ವಿರೋಧದ ವಾದ ಆಲಿಸಿದ ನ್ಯಾಯಾಧೀಶರಾದ ವೀರೇಶ್ ಕುಮಾರ್, IPC ಸೆಕ್ಷನ್ 353, 504, 506ರ ಪ್ರಕಾರ ಶಿವಪ್ಪನವರ ಮಹೇಶಪ್ಪಗೆ 2 ವರ್ಷ ಜೈಲು, 5,000 ದಂಡ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಿದಿದ್ದಲ್ಲಿ ನಾಲ್ಕು ತಿಂಗಳು ಹೆಚ್ಚಿನದಾಗಿ ಜೈಲು ಶಿಕ್ಷೆ ಅನುಭೇಕು ಅಂತ ತೀರ್ಪು ಹೊರಡಿಸಿದ್ದು, ನೊಂದ ವ್ಯಕ್ತಿ ಡ್ರೈವರ್ ಕೊಟ್ರಪ್ಪಗೆ 10,000 ಪರಿಹಾರ ನೀಡುವಂತೆ ಸಹ ಆದೇಶದಲ್ಲಿ ಸೂಚಿಸಿದ್ದಾರೆ. ಮೇಲಿನ ಈ ಎಲ್ಲಾ ಐಪಿಸಿ ಸೆಕ್ಷನ್ ಪ್ರಕಾರ ಹೊರಡಿಸಿರುವ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸಬೇಕು ಅಂತ ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ : High court furious : ಬೇಕಾಬಿಟ್ಟಿ ಖರ್ಚು ಮಾಡಲು ದುಡ್ಡಿದೆ, ಮಕ್ಕಳ ಸಮವಸ್ತ್ರಕ್ಕೆ ದುಡ್ಡಿಲ್ವಾ?: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Exit mobile version