Site icon Vistara News

Karnataka Election 2023: ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಈಶ್ವರಪ್ಪ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

Mallikarjun Kharge has been provided 'Z Plus' security by the central government

ಕಲಬುರಗಿ, ಕರ್ನಾಟಕ: ಬಜರಂಗ ದಳ ನಿಷೇಧ ಪ್ರಣಾಳಿಕೆಯ ಭರವಸೆಯ ಕುರಿತು, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಉತ್ತರ ನೀಡಲಿದ್ದಾರೆ. ಆದರೆ, ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟಿರುವುದು ಸರಿಯಲ್ಲ. ನಿಮಗೆ ಇಷ್ಟ ಆಗಲೀ, ಆಗದೇ ಇರಲಿ ಪ್ರಣಾಳಿಕೆ ಸುಡುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದ್ದಾರೆ(Karnataka Election 2023).

ಕಲಬುರಗಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸುಟ್ಟಿದ್ದಾರೆ. ಇದರ ಅರ್ಥ ಏನೆಂದರೆ, ಕಾಂಗ್ರೆಸ್ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಸುಟ್ಟು ಹಾಗೆ ಆಗುತ್ತದೆ. ಈ ಮೂಲಕ ಈಶ್ವರಪ್ಪ ಅವರು ಜನರಿಗೆ ಅವಮಾನ ಮಾಡಿದ್ದಾರೆ. ರಾಜಕಾರಣದಲ್ಲಿ ಇದು ಸರಿಯಾದ ಕ್ರಮವಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಇದನ್ನೂ ಓದಿ: Karnataka Election: ಮೋದಿ ಈಗ ಅಳುಮುಂಜಿ ಮಗು; ಆಳುವ ದೊರೆಗೆ ಅಳುವುದೇ ಕೆಲಸವೆಂದ ಮಲ್ಲಿಕಾರ್ಜುನ ಖರ್ಗೆ

ಪ್ರಜಾಪ್ರಭುತ್ವದಲ್ಲಿ ಸಹಿಷ್ಣುತೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಆರೋಪ ಮಾಡುತ್ತಾರೆ.ಇದು ಬಿಜೆಪಿಯ ವಿಚಾರ. ಅವರ ನಂಬಿಕೆಗಳು, ನಮ್ಮ ನಂಬಿಕೆಗಳು ಬೇರೆ. ನಾವು ಹಿಂದೂ ಇದ್ದೇವೆ, ನೀವು ಹಿಂದೂ ಇದ್ದೀರಿ. ಆದರೆ, ನಿಮಗಿರುವ ಸ್ವಾತಂತ್ರ್ಯ ನಮಗಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

Exit mobile version