ಕಲಬುರಗಿ : ಪಿಎಸ್‌ಐ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಕುಖ್ಯಾತ ಕಳ್ಳನೊಬ್ಬ (Theft Case) ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ಅಫಜಲಪುರದ ಪಿಎಸ್‌ಐ ಭೀಮರಾಯ್ ಬಂಕಲಿ ಅವರ ರಿವಾಲ್ವರ್ ಕಿತ್ತುಕೊಂಡು (Snatch the revolver) ಖಾಜಾ ಗಾಯಕವಾಡ ಎಂಬಾತ ಓಡಿಹೋಗಿದ್ದಾನೆ.
ಕುಖ್ಯಾತ ಕಳ್ಳ ಖಾಜಾ ಗಾಯಕವಾಡ ಎಂಬಾತನನ್ನು ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಸಿಸಿಬಿ ಪೊಲೀಸರು ಆಗಮಿಸಿದ್ದರು. ಖತರ್ನಾಕ್ ಕಳ್ಳ ಖಾಜಾನನ್ನು ಹಿಡಿದು ಜೈಲಿಗೆ ಎಳೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಸೊನ್ನ ಗ್ರಾಮದ ಬಳಿ ಡಸ್ಟರ್ ವಾಹನದಲ್ಲಿ ಖಾಜಾ ಕುಳಿತಿದ್ದ. ಪಿಎಸ್‌ಐ ಭೀಮರಾಯ್ ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಇದರಿಂದ ಅಲರ್ಟ್ ಆದ ಖಾಜಾ ಏಕಾಏಕಿ ಸರ್ವಿಸ್ ರಿವಾಲ್ವರ್ ಕಸಿದು ಪರಾರಿ ಆಗಿದ್ದಾನೆ.
ಇದನ್ನೂ ಓದಿ: Assault Case : ಇಸ್ಲಾಂ ಹೆಸರಲ್ಲಿ ವಿವಾದಿತ ಪೋಸ್ಟ್; ರಾಯಚೂರಲ್ಲಿ ಎರಡು ಕೋಮಿನ ನಡುವೆ ಗಲಾಟೆ
ತಪ್ಪಿಸಿಕೊಳ್ಳಲು ಮರವೇರಿ ಕುಳಿತ ಕಳ್ಳ ಖಾಜಾಪ್ಪ
ಬಳ್ಳೂರ್ಗಿ ಮೂಲದ ಖಾಜಾ ಗಾಯಕವಾಡ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ಈತನನ್ನು ಹಿಡಿದು ಬಂಧಿಸಬೇಕೆಂದು ಬಂದ ಪೊಲೀಸರ ರಿವಾಲ್ವರ್ ಕಸಿದು ಖಾಜಪ್ಪ ಪರಾರಿ ಆಗಿದ್ದಾನೆ.
ಇತ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಖಾಜಪ್ಪ ಬೃಹತ್ ಮರ ಏರಿ ಕುಳಿತಿದ್ದಾನೆ. ಅಫಜಲಪುರದಿಂದ ಸುಮಾರು 6 ಕಿ. ಮೀವರೆಗೂ ಓಡಿ ಸುಸ್ತಾದ ಖಾಜಪ್ಪ, ಅಫಜಲಪುರ- ಬಳೂರ್ಗಿ ಗ್ರಾಮದ ಮಧ್ಯದಲ್ಲಿರುವ ಮರ ಏರಿ ಕುಳಿತಿದ್ದಾನೆ. ಮರ ಏರಿ ಕುಳಿತಿರುವ ಖಾಜಪ್ಪನನ್ನು ಕೆಳಗಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಆತನ ಕೈನಲ್ಲಿ ಪುಲ್ ಲೋಡೆಡ್ ಸರ್ವಿಸ್ ರಿವಾಲ್ವರ್ ಇದ್ದು, ಇತ್ತ ಹತ್ತಿರ ಸುಳಿಯಲು ಪೊಲೀಸರು ಹಿಂದೆಟ್ಟು ಹಾಕುವಂತಾಗಿದೆ. ಸ್ಥಳಕ್ಕೆ ಎಸ್‌ಪಿ ಇಶಾಪಂತ್ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ವಿಚಾರ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಮರದ ಬಳಿ ಜಮಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ