ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ತರಕಾರಿ ಮಾರುಕಟ್ಟೆ ಬಳಿ ತಲವಾರ್ ಬೀಸುತ್ತಾ ಜನರನ್ನು ಬೆದರಿಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಶೂಟೌಟ್‌ನಲ್ಲಿ (Kalaburagi Shootout) ಆರೋಪಿ ಕಾಲಿಗೆ ಎರಡು ಬುಲೆಟ್ ತಗುಲಿ ಗಂಭೀರ ಗಾಯಗಳಾಗಿವೆ.
ಅಬ್ದುಲ್ ಜಾಫರ್ ಸಾಬ್ ಬಂಧಿತ. ಭಾನುವಾರ ರಾತ್ರಿ 9 ಗಂಟೆಗೆ ನಗರದ ಸೂಪರ್ ಮಾರ್ಕೆಟ್ ಬಳಿ ಕಿಡಿಗೇಡಿಯೊಬ್ಬ ತಲವಾರ್ ಹಿಡಿದು ಜನರನ್ನು ಹೆದರಿಸುತ್ತಿದ್ದ. ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದರಿಂದ ಕಿಡಿಗೇಡಿಗೆ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಚೌಕ್ ಠಾಣೆ ಪಿ.ಎಸ್.ಐ ಕೋತ್ವಾಲ್ ಅವರು ಸಾರ್ವಜನಿಕರ ರಕ್ಷಣೆಗಾಗಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಎರಡು ಗುಂಡು ಆರೋಪಿಯ ಕಾಲಿಗೆ ತಗುಲಿ ಗಂಭೀರ ಗಾಯಗಳಾಗಿವೆ. ಆರೋಪಿಯನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Murder Case: ಉಡುಪಿಯಲ್ಲಿ ವ್ಯಕ್ತಿಗೆ ಚಾಕು ಇರಿದು ಹತ್ಯೆ; ಕೃತ್ಯ ಎಸಗಿ ಇಬ್ಬರು ದುಷ್ಕರ್ಮಿಗಳು ಪರಾರಿ
ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಘಟನೆ ನಡೆದ ಹಿನ್ನೆಲೆಯಲ್ಲಿ ಜನ ಭಯಭೀತಗೊಂಡಿದ್ದರು. ಹಲವರು ಅಂಗಡಿ ಬಂದ್ ಮಾಡಿಕೊಂಡು ಮನೆಗೆ ತೆರಳಿದ್ದು ಕಂಡುಬಂತು. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.