ಕಲಬುರಗಿ: ಕಂಡಕ್ಟರ್ ಆಗಲು ಕೆಲವು ಅಭ್ಯರ್ಥಿಗಳು ವಾಮ ಮಾರ್ಗ ಮುಂದುವರಿಸಿದ್ದಾರೆ. ಇದೀಗ ಕಿಲಾಡಿಯೊಬ್ಬ ಚಪಾತಿ ಹಿಟ್ಟು ಮೈಗೆ ಮೆತ್ತಿಕೊಂಡು ಬಂದು ಸಿಕ್ಕಿ ಬಿದ್ದಿದ್ದಾನೆ.
ದೇಹದಲ್ಲಿ ಮೆಟಲ್ ಕಟ್ಟಿಕೊಂಡು ತೂಕ ಹೆಚ್ಚಳ ಮಾಡಿಕೊಳ್ಳುವ ಸರ್ಕಸ್ ಮಾಡಿದ್ದಾಯ್ತು. ಈಗ ಇನ್ನೊಬ್ಬಾತ ತೂಕ ಹೆಚ್ಚಳ ಮಾಡಿಕೊಳ್ಳಲು ಚಪಾತಿ ಹಿಟ್ಟು ಮೈಗೆ ಮೆತ್ತಿಕೊಂಡು ಬಂದಿದ್ದಾನೆ.
ಕಂಡಕ್ಟರ್ ದೈಹಿಕ ದಾರ್ಡ್ಯತೆ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಟ 55 ಕಿಲೋ ತೂಕ ಇರಲೇಬೇಕು ಎನ್ನುವ ನಿಯಮವಿದೆ. ಈ ಅರ್ಹತೆಗಾಗಿ ಅಲ್ಪ ಸ್ವಲ್ಪ ತೂಕ ಕಡಿಮೆ ಇರುವ ಅಭ್ಯರ್ಥಿಗಳಿಂದ ಹೊಸ ಹೊಸ ವಾಮಮಾರ್ಗಗಳು ಆವಿಷ್ಕಾರಗೊಳ್ಳುತ್ತಲೇ ಇವೆ. ಕೆಲ ದಿನಗಳ ಹಿಂದೆ ಹಲವು ಅಭ್ಯರ್ಥಿಗಳು ಕಬ್ಬಿಣದ ತುಂಡುಗಳನ್ನು ದೇಹಕ್ಕೆ ಮೆತ್ತಿಕೊಂಡು ಬಂದು ಸಿಕ್ಕಿಬಿದ್ದಿದ್ದರು. ಅಂತಹ ಅಭ್ಯರ್ಥಿಗಳನ್ನು ಪತ್ತೆ ಹಚ್ಚಿ ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸಿದ ನಂತರವೂ ಇನ್ನಷ್ಟು ಅಭ್ಯರ್ಥಿಗಳ ತೂಕ ಹೆಚ್ಚಳ ಸರ್ಕಸ್ ಮುಂದುವರಿದಿದೆ.
ಇದನ್ನೂ ಓದಿ: Viral News : ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗಾಗಿ ಸ್ಫೂರ್ತಿದಾಯಕ ಪೋಸ್ಟ್; ವೈರಲ್ ಆಯ್ತು ಫೋಟೋ