ಕಲಬುರಗಿ: ಕಲಬುರಗಿ ನಗರ ಹೊರವಲಯದ ಕೆಸರಟಗಿ ಬಳಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ವ್ಯಕ್ತಿಯನ್ನು ಹೊಡೆದು ಭೀಕರ ಹತ್ಯೆ (Murder Case) ಮಾಡಲಾಗಿದೆ. ಕಪಿಲ್ ಗಾಯಕ್ವಾಡ್ (38) ಕೊಲೆಯಾದವನು.
ಪತ್ನಿಯ ಸಮ್ಮುಖದಲ್ಲೆ ಪತಿ ಕಪಿಲ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿಗೆ ಹೋಗುತ್ತಿದ್ದಾಗ, ಮಾರ್ಗ ಮಧ್ಯೆ ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಹತ್ಯೆ ನಡೆಸಿದ್ದಾರೆ. ಕುಟುಂಬಸ್ಥರಿಂದ ಕಪಿಲ್ ಪತ್ನಿ ಭಾಗ್ಯ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಮೃತದೇಹವನ್ನ ಕಲಬುರಗಿ ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Road Accident : ಬಸ್‌ಗಳ ನಡುವೆ ಭೀಕರ ಅಪಘಾತ; ಚಾಲಕ ಸ್ಥಳದಲ್ಲೇ ದುರ್ಮರಣ
ಶೀಲ ಶಂಕೆ ಪತ್ನಿಯನ್ನು ಕೊಂದ ಪತಿ
ಕೊಪ್ಪಳ: ಶೀಲ ಶಂಕಿಸಿದ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಂದು ಹಾಕಿದ್ದಾನೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಅರಕೇರಿಯಲ್ಲಿ ಘಟನೆ ನಡೆದಿದೆ. ಅರಕೇರಿಯ ಗೀತಾ ಮೃತ ದುರ್ದೈವಿ. ದೇವರೆಡ್ಡಪ್ಪ ಭಾವಿಕಟ್ಟಿ ಎಂಬಾತ ಕೊಲೆ ಆರೋಪಿ ಆಗಿದ್ದಾನೆ.
ಪತ್ನಿ ಮೇಲೆ ಶೀಲ ಶಂಕೆ ಜತೆಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಆರೋಪವಿದೆ. ಕುಟುಂಬದವರೊಂದಿಗೆ ಸೇರಿಕೊಂಡು ಪತ್ನಿಯನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.
ಪತಿ ದೇವರಡ್ಡಿಪ್ಪ ಹಾಗೂ ಆತನ ತಂದೆಯ ಮಲ್ಲಾರಡ್ಡೆಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.
ಗಲಾಟೆ ಬಿಡಿಸಲು ಹೋಗಿ ಜೀವ ಬಿಟ್ಟ ವೃದ್ಧ
ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ರಾಯಚೂರಿನ ಸಿಂಧನೂರು ತಾಲೂಕಿನ ಮೂರು ಮೈಲ್ ಕ್ಯಾಂಪ್‌ನಲ್ಲಿ ಘಟನೆ ನಡೆದಿದೆ. ಜಗಳ ಬಿಡಿಸಲು ಹೋಗಿದ್ದ ವೀರಬಸಪ್ಪ (60) ಎಂಬುವವರು ಮೃತ ದುರ್ದೈವಿ. ನಿನ್ನೆ ಏರಿಯಾದಲ್ಲಿ ಕೂರಿಸಲಾಗಿದ್ದ ಗಣೇಶನ ವಿಸರ್ಜನೆ ವೇಳೆ ಗಲಾಟೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಬಿಡಿಸಲು ಹೋಗಿದ್ದ ವೀರಬಸಪ್ಪ ಕೆನ್ನೆಗೆ ಮಹೇಶ್ ಎಂಬಾತ ಹೊಡೆದಿದ್ದ.
ಈ ವೇಳೆ ಕುಸಿದು ಬಿದ್ದ ವೀರ ಬಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತನ ಕುಟುಂಬಸ್ಥರಿಂದ ಕೊಲೆ ಆರೋಪದಡಿ ದೂರು ದಾಖಲಾಗಿದೆ. ಈ ಬಗ್ಗೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವ ಅಪ್ರಾಪ್ತ ಸೇರಿ ಮಹೇಶ್ ,ಪರಶುರಾಮ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ