ಕಲಬುರಗಿ: ಪ್ರೀತಿಸಿ ಮದುವೆಯಾಗುವುದಾಗಿ (Love case) ಪೊಲೀಸ್ ಪೇದೆ ಯುವತಿಗೆ ವಂಚಿಸಿರುವ (Physical Abuse) ಆರೋಪ ಕೇಳಿ ಬಂದಿದೆ. ಪೊಲೀಸ್ ಪೇದೆ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೆಎಸ್‌ಆರ್‌ಪಿ ಪೊಲೀಸ್ ಪೇದೆ ಯಲ್ಲಾಲಿಂಗ ಮೇತ್ರೆ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ವೆಸಗಿ ಪೊಲೀಸ್ ಪೇದೆ ವಂಚಿಸಿದ್ದಾನೆ. ಹೈದರಾಬಾದ್ ಯುವತಿಯನ್ನು ಪೊಲೀಸ್ ಪೇದೆ ಯಲ್ಲಾಲಿಂಗ ಮೇತ್ರೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಹೀಗೆ ಇಬ್ಬರಿಬ್ಬರು ಮಸೇಜ್, ಫೋನ್ ಕಾಲ್ ಮೂಲಕ ಸಂಪರ್ಕದಲ್ಲಿದ್ದರು. ಈ ವೇಳೆ ಯಲ್ಲಾಲಿಂಗ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಆಗ ಜಾತಿ ಕಾರಣಕ್ಕೆ ಪ್ರೀತಿಯನ್ನು ಯುವತಿ ಮೊದಲು ನಿರಾಕರಿಸಿದ್ದಳು. ಆದರೆ ಪೋಷಕರನ್ನು ಒಪ್ಪಿಸಿ ಮದುವೆ ಆಗುವುದಾಗಿ ಪುಸಲಾಯಿಸಿದ್ದ ಎನ್ನಲಾಗಿದೆ.
ಈ ನಡುವೆ ಮದುವೆ ಆಗುತ್ತೇನೆ ಎಂದೇಳಿ ಹೈದರಾಬಾದ್‌ನಿಂದ ಯುವತಿಯನ್ನು ಕಲಬುರಗಿಗೆ ಕರೆಸಿಕೊಂಡಿದ್ದ. ಅಲ್ಲಿಂದ ಕಲಬುರಗಿ ಬಸ್ ನಿಲ್ದಾಣದ ಸಮೀಪದಲ್ಲಿದ್ದ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಯುವತಿ ಲಾಡ್ಜ್‌ಗೆ ಕರೆತಂದಿದ್ದು ಯಾಕೆ ಎಂದು ಪ್ರಶ್ನಿಸಿದಾಗ ನಾಳೆ ಮದುವೆ ಆಗೋಣಾ ಎಂದಿದ್ದಾನೆ. ಈತನ ಮಾತನ್ನು ನಂಬಿದ ಯುವತಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾಳೆ. ಪ್ರತ್ಯೇಕ ರೂಮು ಬುಕ್ ಮಾಡುವಂತೆ ಕೇಳಿದಾಗ, ಮದುವೆ ಆಗುತ್ತೇವೆ, ಮತ್ಯಾಕೆ ಎರಡು ರೂಮು ಎಂದು, ಒಂದೇ ರೂಮಿನಲ್ಲಿ ಇಬ್ಬರು ಉಳಿದುಕೊಂಡಿದ್ದರು. ಮದುವೆ ಆಗುವುದಾಗಿ ಹೇಳಿ ಬಲವಂತಾಗಿ ದೈಹಿಕಸಂಪರ್ಕ ಬೆಳಸಿದ್ದ.
ಮುಂಜಾನೆ ಮದುವೆ ವಿಷಯ ತೆಗೆದರೆ ಯಲ್ಲಾಲಿಂಗ ಮೇತ್ರೆ ನಿರಾಕರಿಸಿದ್ದಾನೆ. ನಿಮ್ಮ ಮನೆಯವರು ವರದಕ್ಷಿಣಿ ಕೊಡಲ್ಲ. ನಮ್ಮ ಮನೆಯಲ್ಲೂ ಮದುವೆಗೆ ಒಪ್ಪಲ್ಲ ಎಂದು ವಂಚಿಸಿದ್ದಾನೆ. ಈ ಕುರಿತು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ. ಹೀಗಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಲಬುರಗಿ ಮಹಿಳಾ ಠಾಣೆಯಲ್ಲಿ 64,318(B),351,352 BNS ಅಡಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ