ಕಾಪು: ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದ್ದೂ ಕಳೆದ ಬಾರಿ ಬಿಜೆಪಿ ವಶವಾಗಿದ್ದ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Kapu Election Results) ಹೊರಬಿದ್ದಿದ್ದು, ಈ ಬಾರಿ ಮತ್ತೊಮ್ಮೆ ಬಿಜೆಪಿ ಪಕ್ಷದ ಗುರ್ಮೆ ಸುರೇಶ್ ಶೆಟ್ಟಿ ಜಯಶಾಲಿಯಾಗಿದ್ದಾರೆ.
ಮತ್ತೆ ವಿಜಯಮಾಲೆ ಬಿಜೆಪಿಗೆ!
ಕಳೆದ ನಾಲ್ಕು ಅವಧಿಯ ವಿಧಾನಸಭಾ ಚುನಾವಣೆಯನ್ನು ಗಮನಿಸಿದರೆ ಇಲ್ಲಿ ಕಾಂಗ್ರೆಸ್ ಪಾರುಪತ್ಯವನ್ನು ಕಾಣಬಹುದಾಗಿದ್ದರೂ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ಮಣಿಸಿ ಬಿಜೆಪಿಯ ಹಾಲಿ ಶಾಸಕ ಲಾಲಾಜಿ ಮೆಂಡನ್ ಆಯ್ಕೆಯಾಗಿ ಬಂದಿದ್ದರು. ಈ ಬಾರಿಯೂ ಮತದಾರರು ಬಿಜೆಪಿಗೇ ಮಣೆ ಹಾಕಿದ್ದು, ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಜಯಗಳಿಸಿದ್ದಾರೆ. ಎಲ್ಲ ಸಮುದಾಯದವರ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವುದು ಇವರಿಗೆ ಪ್ಲಸ್ ಆಗಿದೆ. ಅಲ್ಲದೆ, ಕ್ಷೇತ್ರದಲ್ಲಿರುವ ಮೊಗವೀರರ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಬಹುದಾಗಿದೆ.
ಪೈಪೋಟಿ ನಡೆಸಿ ಸೋತ ವಿನಯ್ ಕುಮಾರ್ ಸೊರಕೆ
ಈ ಬಾರಿಯೂ ಕಾಂಗ್ರೆಸ್‌ನಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರೇ ಕಣಕ್ಕಿಳಿದಿದ್ದರು. ಕ್ಷೇತ್ರದ ಪರಿಚಯ ಹಾಗೂ ಚುನಾವಣೆ ಪಟ್ಟುಗಳ ಮೂಲಕ ಜಯ ಕಾಣಬಹುದು ಎಂಬ ನಿಟ್ಟಿನಲ್ಲಿ ಅವರು ಹಾಕಿದ್ದ ಶ್ರಮಕ್ಕೆ ಫಲ ದೊರೆಯಲಿಲ್ಲ. ಬಿಜೆಪಿಯಿಂದ ಹೊಸ ಅಭ್ಯರ್ಥಿಯನ್ನು ಘೋಷಿಸಿದ್ದು ವರವಾಗಲಿದೆ ಎಂದು ಭಾವಿಸಿದ್ದರಾದರೂ ಜನರು ಬಿಜೆಪಿಯನ್ನು ಬಿಟ್ಟು ಬೇರೆ ಕಡೆ ನೋಡಲಿಲ್ಲ.
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಕಳೆದ ಚುನಾವಣೆ ಫಲಿತಾಂಶ
ಲಾಲಾಜಿ ಆರ್. ಮೆಂಡನ್ (ಬಿಜೆಪಿ) 75,893 | ವಿನಯ್ ಕುಮಾರ್ ಸೊರಕೆ (ಕಾಂಗ್ರೆಸ್) 63,976 | ಗೆಲುವಿನ ಅಂತರ: 11,917
ಈ ಬಾರಿಯ ಚುನಾವಣಾ ಫಲಿತಾಂಶ
ಗುರ್ಮೆ ಸುರೇಶ್ ಶೆಟ್ಟಿ (ಬಿಜೆಪಿ): 80559 | ವಿನಯ್ ಕುಮಾರ್ ಸೊರಕೆ (ಕಾಂಗ್ರೆಸ್): 67555 | ಗೆಲುವಿನ ಅಂತರ: 13004 | ನೋಟಾ: 805