Site icon Vistara News

Karkala Election Results: ಕಾರ್ಕಳದಲ್ಲಿ ಮುತಾಲಿಕ್‌ ಸ್ಪರ್ಧೆ ನಡುವೆಯೂ ಗೆದ್ದು ಬೀಗಿದ ಸುನಿಲ್‌ ಕುಮಾರ್‌

Karkala Asembly Election results wiinner Sunil kumar

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರ ಇಂದಿರಾ ಗಾಂಧಿಯವರಿಂದ ಹಿಡಿದು ನರೇಂದ್ರ ಮೋದಿಯವರೆಗೂ ಅತಿರಥ ಮಹಾರಥರು ಚುನಾವಣಾ ಪ್ರಚಾರ ನಡೆಸಿದ ಕ್ಷೇತ್ರವಾಗಿರುವ ಕಾರ್ಕಳದಲ್ಲಿ ಈ ಬಾರಿ ಹಿಂದುತ್ವ ವರ್ಸಸ್‌ ಹಿಂದುತ್ವ ಹಾಗೂ ಕಾಂಗ್ರೆಸ್‌ ನಡುವೆ ಹಣಾಹಣಿ ನಡೆದಿದೆ. ಈಗ ಚುನಾವಣಾ ಫಲಿತಾಂಶ (Karkala Election Results) ಹೊರಬಿದ್ದಿದ್ದು, ಬಿಜೆಪಿ ಪಕ್ಷದ ಸುನಿಲ್‌ ಕುಮಾರ್‌ ಜಯಗಳಿಸಿದ್ದಾರೆ.

ಹಿಂದುತ್ವದ ಅಲೆಯಲ್ಲಿ ಗೆದ್ದ ಸುನಿಲ್ ಕುಮಾರ್‌

ಇಂಧನ ಸಚಿವವರಾಗಿದ್ದ ಸುನೀಲ್ ಕುಮಾರ್ ಅವರೇ ಈ ಬಾರಿಯೂ ಜಯಗಳಿಸುವ ಮೂಲಕ ತಮ್ಮ ಪ್ರಭುತ್ವವನ್ನು ಸಾಧಿಸಿದ್ದಾರೆ. ಪಕ್ಷದ ಕಾರ್ಯಕರ್ತರ ಜತೆಗೆ ನಡೆದಿದ್ದ ಸಣ್ಣಪುಟ್ಟ ಮನಸ್ತಾಪಗಳು ಸುನಿಲ್ ಅವರಿಗೆ ತಮ್ಮ ಗುರುಗಳಾದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಎದುರಾಳಿಯಾಗುವಂತೆ ಮಾಡಿತ್ತು. ಇದು ಮೊದ ಮೊದಲಿಗೆ ಆತಂಕವನ್ನು ಉಂಟು ಮಾಡಿದ್ದರೂ ಸಹ ಇವರ ವಿಜಯ ಯಾತ್ರೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಪ್ರಮೋದ್ ಮುತಾಲಿಕ್ ಇಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರಿಂದ ಸ್ವಲ್ಪ ಮಟ್ಟಿಗೆ ಬಿಜೆಪಿ ಮತವನ್ನು ಒಡೆದಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಕಾರ್ಕಳ ಚುನಾವಣಾ ಫಲಿತಾಂಶ

ಗೆಲ್ಲಲು ಸಾಧ್ಯವಾಗದ ಕಾಂಗ್ರೆಸ್‌

ಇನ್ನು ಕಾಂಗ್ರೆಸ್‌ನಿಂದ ಈ ಬಾರಿ ಮುನಿಯಾಲು ಉದಯ ಕುಮಾರ್ ನಿಂತಿದ್ದರಿಂದ ಒಂದು ಮಟ್ಟದ ಫೈಟ್‌ ಕೊಟ್ಟರಾದರೂ ಗೆಲ್ಲುವಲ್ಲಿ ಯಶ ಕಾಣಲಿಲ್ಲ. ಕಾರ್ಕಳದ ಅಭಿವೃದ್ಧಿ ಮತ್ತು ಹಿಂದುತ್ವದ ಗಾಳಿ ಸುನಿಲ್ ಕುಮಾರ್ ಅವರನ್ನು ದಡ ಸೇರಿಸಿದೆ.

ಕಳೆದ ಚುನಾವಣೆ ಫಲಿತಾಂಶ
ಸುನಿಲ್ ಕುಮಾರ್ (ಬಿಜೆಪಿ): 91,245 | ಎಚ್. ಗೋಪಾಲ ಭಂಡಾರಿ (ಕಾಂಗ್ರೆಸ್): 48,679 | ಗೆಲುವಿನ ಅಂತರ: 42,566

ಈ ಬಾರಿಯ ಚುನಾವಣೆ ಫಲಿತಾಂಶ ಇಂತಿದೆ
ಸುನಿಲ್ ಕುಮಾರ್ (ಬಿಜೆಪಿ): 77028 | ಉದಯ್‌ ಶೆಟ್ಟಿ (ಕಾಂಗ್ರೆಸ್)‌ 72426 | ಪ್ರಮೋದ್‌ ಮುತಾಲಿಕ್‌ (ಪಕ್ಷೇತರ): 4508 | ನೋಟಾ: 921

ಕಾಂಗ್ರೆಸ್‌ನಲ್ಲಿ ಮೊಯ್ಲಿ ಹಿಡಿತ

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಇಂದು ಬಿಜೆಪಿ ಧ್ವಜ ಹಾರಾಡುತ್ತಿದೆ. ಮಾಜಿ ಸಿಎಂ ವೀರಪ್ಪ ಮೊಯ್ಲಿಯವರ ಹುಟ್ಟೂರು ಎನ್ನುವ ಕಾರಣಕ್ಕೆ ಅವರು ಇಂದಿಗೂ ಇಲ್ಲಿ ಕಾಂಗ್ರೆಸ್ ಮೇಲೆ ಹಿಡಿತವಿರಿಸಿಕೊಂಡಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡ್‌ಗಿಂತ ಹೆಚ್ಚಾಗಿ ವೀರಪ್ಪ ಮೊಯ್ಲಿ ಪ್ರಭಾವ ಇರುತ್ತದೆ ಎನ್ನುವ ಮಾತಿದೆ. 1972ರಿಂದ ಸತತವಾಗಿ 6 ಬಾರಿ ಮೊಯ್ಲಿ ಇಲ್ಲಿಂದಲೇ ಆರಿಸಿ ಬಂದಿರುವುದು ವಿಶೇಷಗಳಲ್ಲಿ ಒಂದು. ಮೊಯ್ಲಿ ನಂತರ ಕಾಂಗ್ರೆಸ್‌ನ ಗೋಪಾಲ ಭಂಡಾರಿ ಅವರು ಇಲ್ಲಿ ಎರಡು ಬಾರಿ ಆಯ್ಕೆಯಾಗಿದ್ದರು.‌ ಆದರೆ, ಈಗ ಬಿಜೆಪಿ ಅಲೆಯೇ ಇಲ್ಲಿ ಪ್ರಧಾನವಾಗಿದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version