ಉಡುಪಿ: ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ. ಕಾರ್ಕಳದಿಂದ (Karkala News) ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ವಿದ್ಯಾರ್ಥಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಮೃತ ಜನಿತ್ ಶೆಟ್ಟಿ ನಿಟ್ಟೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು, ಕಾರ್ಕಳದಿಂದ ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದ. ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಜನಿತ್ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.
ಹೀಲಿಯಂ ಗ್ಯಾಸ್ ಬಳಸಿ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು: ರಾಜಧಾನಿಯಲ್ಲಿ (Bangalore news) 22 ವರ್ಷದ ಟೆಕ್ಕಿಯೊಬ್ಬ (techie) ಹೀಲಿಯಂ ಗ್ಯಾಸ್ (Helium Gas) ಬಳಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿರುವ ಈತ, ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಮೂಲಕ ಜೀವ ತೆಗೆದುಕೊಂಡಿದ್ದಾನೆ.
ಹಾಸನ ಜಿಲ್ಲೆ ಸಕಲೇಶಪುರ ಮೂಲದ 22 ವರ್ಷದ ಯಾಜ್ಙಿಕ್ ಮೃತಪಟ್ಟ ಟೆಕ್ಕಿ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ವರ್ಕ್ ಫ್ರಂ ಹೋಂನಲ್ಲಿದ್ದ ಟೆಕ್ಕಿ ಯಾಜ್ಙಿಕ್, ಎಂಟೆಕ್ ಎಕ್ಸಾಂ ಬರೆಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಹೋಟೆಲ್‌ನಲ್ಲಿ ಆಗಸ್ಟ್ 16ರಂದು ರೂಂ ಬುಕ್ ಮಾಡಿದ್ದ. ನಿನ್ನೆ ದೊಡ್ಡ ಬ್ಯಾಗ್ ತೆಗೆದುಕೊಂಡು ಪೀಣ್ಯ ಕಡೆ ತೆರಳಿದ್ದಾನೆ.
ಇದನ್ನೂ ಓದಿ | Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್; ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ
ಪೀಣ್ಯದಲ್ಲಿ ಹೀಲಿಯಂ ಗ್ಯಾಸ್ ಖರೀದಿ ಮಾಡಿ ಲಾಡ್ಜ್‌ಗೆ ತಂದಿದ್ದಾನೆ. ಕಳೆದ ರಾತ್ರಿ ಲಾಡ್ಜ್‌ನ ಕೋಣೆಯಲ್ಲಿ ಪ್ಲಾಸ್ಟಿಕ್ ಕವರ್‌ಗೆ ಹೀಲಿಯಂ ಗ್ಯಾಸ್ ತುಂಬಿಸಿದ್ದಾನೆ. ಕವರ್ ಮೂಲಕ ಹೀಲಿಯಂ ಗ್ಯಾಸ್ ಇನ್‌ಹೇಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಯಾಜ್ಙಿಕ್ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.