ಬೆಂಗಳೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ 42 ಖೈದಿಗಳನ್ನು ಬಿಡುಗಡೆ ಮಾಡಲು ಅನುಮತಿ, ಯಲಹಂಕ ಬಳಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಸೇರಿ ಅನೇಕ ನಿರ್ಧಾರಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟ ಸಭೆ ತೆಗೆದುಕೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಕುರಿ, ಮೇಕೆ ನಿಗಮದ ಕುರಿಗಾಹಿಳಿಗಾಗಿ ಅಮೃತ ಸ್ವಾಭಿಮಾನಿ ಕುರಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ಸಿವಿಲ್ ಸರ್ವೀಸ್ ನೌಕರರ ಆಸ್ತಿ ಘೋಷಣೆ ತಿದ್ದುಪಡಿಗೆ ಮಾರ್ಚ್ 30 ರವರೆಗೆ ಅವಕಾಶ ನೀಡಲಾಗಿದೆ ಎಂದರು.
ಸಂಪುಟ ಸಭೆಯ ಇನ್ನಿತರ ನಿರ್ಣಯಗಳು
- ಒಲಂಪಿಕ್ ಮೆಡಲ್ ಪಡೆದವರಿಗೆ ಹುದ್ದೆಗಳನ್ನು ಮೀಸಲಿಡಲಾಗಿದೆ
- ಕರ್ನಾಟಕ ವಿದ್ಯುತ್ ನಿಗಮಕ್ಕೆ ಸುಮಾರು 3 ಕೋಟಿ ಸಾಲಕ್ಕೆ ಅನುಮತಿ
- ವಿದ್ಯುತ್ ಪೂರೈಕೆ ಕಂಪನಿಗಳಿಗೆ ಸಾಲ ಪಡೆಯಲು ಅವಕಾಶ ಕೊಟ್ಟಿದ್ದೇವೆ
- 2002 ರಿಂದ ಬಾಕಿ ಇರುವ ಮೊತ್ತವನ್ನ ನೀಡಲು ಅನುಮೋದನೆ
- ಖಾಸಗಿ ಹೂಡಿಕೆ ಆಧಾರದ ಮೇಲೆ ಗ್ರಿಡ್ ಬೆಂಬಲಿತ ಹೈಡ್ರೋ ಯೋಜನೆ ಟೆಂಡರ್ ಗೆ ಅನುಮೋದನೆ
- ದಾವಣಗೆರೆ ಜಿಲ್ಲೆ ಚೆನ್ನಗಿರಿ ಆಸ್ಪತ್ರೆ ಅಭಿವೃದ್ಧಿಗೆ ಅನುಮತಿ
- ಬೆಂಗಳೂರು ವಿವಿಗೆ 80 ಕೋಟಿ ಅನುದಾನಕ್ಕೆ ಅನುಮೋದನೆ
- ನಿವೇಶನ ಸಂಖ್ಯೆ 1 ರಲ್ಲಿ ವಾಣಿಜ್ಯ ನಿವೇಶನಕ್ಕೆ ಅನುಮತಿ
- ಸೂರ್ಯನಗರದಲ್ಲೂ ವಾಣಿಜ್ಯ ಕಟ್ಟಡಕ್ಕೆ ಅನುಮೋದನೆ
- ಸೂರ್ಯನಗರದ ರಾಜಕಾಲುವೆ ಅಭಿವೃದ್ಧಿಗೆ ಅನುಮೋದನೆ
- ದೇವದುರ್ಗ ತಾಲೂಕಿನ ನೀರಾವರಿ ಯೋಜನೆಗೆ ಅನುಮೋದನೆ
- ಮೈಸೂರು ಜಿಲ್ಲೆ, ನಂಜನಗೂಡಿನ ಹದಿನಾರು ಗ್ರಾಮದ ರಸ್ತೆ ಅಭಿವೃದ್ಧಿ
- ಕಲಬುರಗಿ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ 13 ಕೋಟಿ 82 ಲಕ್ಷ ಅನುದಾನ
- ಯಲಹಂಕ ಬಳಿ ವಿಶ್ವದರ್ಜೆಯ ಟೆನಿಸ್ ಕ್ರೀಡಾಂಗಣಕ್ಕೆ ಅನುಮೊದನೆ
- ರಾಜ್ಯ ಲಾನ್ ಟಿನಿಸ್ ಸಂಸ್ಥೆಗೆ ಗುತ್ತಿಗೆ ನೀಡಲು ಒಪ್ಪಿಗೆ
- ಹಿರೆಮಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೆ ಭೂಮಿ, 6 ಎಕರೆ ಭೂಮಿ 30 ವರ್ಷ ಲೀಸ್ ಗೆ ನೀಡಲು ಚರ್ಚೆ
- ಕಾರ್ಕಳ ಮಾರಿಯಮ್ಮ ದೇಗುಲ ನಿರ್ಮಾಣಕ್ಕೆ ಅನುದಾನ
- ಹೊಳಲ್ಕೆರೆಯಲ್ಲಿ ಅಯ್ಯಪ್ಪ ಮಂದಿರಕ್ಕೆ ಭೂಮಿ ಮಂಜೂರು, 1 ಎಕರೆ ಭೂಮಿ ಮಂಜೂರು ಮಾಡಲು ಸಮ್ಮತಿ
- ಗುರುಮಿಠಕಲ್ ನಲ್ಲಿ ಲಕ್ಷ್ಮಿ ತಿಮ್ಮಪ್ಪ ದೇಗುಲಕ್ಕೆ ಭೂಮಿ
- ಬೆಂಗಳೂರಿನಲ್ಲೂ ರಾಷ್ಟ್ರೋತ್ಥಾನ ಪರಿಷತ್ ಗೆ ಭೂಮಿ, ಶೈಕ್ಷಣಿಕ ಉದ್ದೇಶಕ್ಕಾಗಿ 1.36 ಎಕರೆ ಭೂಮಿ ಮಂಜೂರು
- ಸೊನ್ನ, ಬಸರಕೋಡು ಗ್ರಾಮಗಳಿಗೆ ನೀರು. 32 .35 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಅನುದಾನ
- ವಿವಿಪುರ,ಗುಡುಹಳ್ಳಿ ಗ್ರಾಮಗಳಿಗೆ ನೀರು ಪೂರೈಕೆ
- ಮೀನಹಳ್ಳಿ,ಹಂದಿಹಾಳ್ ಗ್ರಾಮಗಳಿಗೆ ಕುಡಿಯುವ ನೀರು, 47.34 ಕೋಟಿ ಅನುದಾನಕ್ಕೆ ಒಪ್ಪಿಗೆ
- ಸಾರಿಗೆ ಸಂಸ್ಥೆ ವೃಂದ ನಿರ್ವಹಣೆಯಲ್ಲಿ ಬದಲಾವಣೆ,
- 921 ಎಲೆಕ್ಟ್ರಿಕ್ ಬಸ್ ಖರೀದಿಗೆ ಒಪ್ಪಿಗೆ
ನಮ್ಮದು ಕೇಡರ್ ಪಕ್ಷ
ಬಿಜೆಪಿಗೆ ರೌಡಿಶೀಟರ್ ಸೇರ್ಪಡೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ರೌಡಿಶೀಟರ್ಗಳನ್ನು ಸೇರಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಾಯಕರಿಗೆ ಪರಿಚಯ ಇರುವವರು ಯಾರೋ ಕಾರ್ಯಕ್ರಮಗಳಿಗೆ ಬಂದಿರಬಹುದು. ಕಾರ್ಯಕ್ರಮಕ್ಕೆ ಬಂದವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಯಾರದೋ ಅವಲಂಬನೆಯಿಂದ ರಾಜಕಾರಣ ಮಾಡಲ್ಲ. ಬಿಜೆಪಿ ಕೇಡರ್ ಬೇಸ್ ಪಾರ್ಟಿ ಎಂದರು.
ಇದನ್ನೂ ಓದಿ | ಸದನದಲ್ಲಿ Pay CM ಜಟಾಪಟಿ | ಸಾರ್ವಜನಿಕ ಕ್ಷೇತ್ರದಲ್ಲಿರೋರು ʼಸೀಜರನ ಹೆಂಡತಿʼ ಇದ್ದ ಹಾಗೆ ಎಂದ ಮಾಧುಸ್ವಾಮಿ