ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ (Karnataka CM) ಆಯ್ಕೆಯ ವಿಚಾರವನ್ನು ಹೆಚ್ಚು ಕಾಲ ಮುಂದಕ್ಕೆ ತಳ್ಳಿ ಗೊಂದಲ ಸೃಷ್ಟಿ ಮಾಡದೆ, ಇಂದೇ ಮುಂದಿನ ಸಿಎಂ ಅಭ್ಯರ್ಥಿ ಘೋಷಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ ಎನ್ನಲಾಗಿದೆ.
ಸಿಎಂ ವಿಚಾರವನ್ನು ಹೆಚ್ಚು ಕಾಲ ತಳ್ಳಿದಷ್ಟೂ ಪಕ್ಷದಲ್ಲಿ ಒಡಕು ಸೃಷ್ಟಿಯಾಗುವುದರಿಂದ ಹಾಗೆ ಮಾಡಲು ಹೈಕಮಾಂಡ್ ಸಿದ್ಧವಾಗಿಲ್ಲ. ಇಂದೇ ನೂತನ ಸಿಎಂ ಘೋಷಣೆ ಮಾಡಲಿದೆ. ನಿನ್ನೆ ಇಡೀ ದಿನ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಕತೆಗೆ ಮಾತುಕತೆ ನಡೆಸಿದ್ದು, ಇಂದು ಚೆಂಡು ರಾಹುಲ್ ಗಾಂಧಿ ಅವರ ಅಂಗಳದಲ್ಲಿದೆ.
ಸಿಎಂ ನಿರ್ಧಾರದ ಜತೆಗೆ, ನಾಲ್ಕು ಉಪಮುಖ್ಯಮಂತ್ರಿಗಳನ್ನು ಕೂಡ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ. ಜತೆಗೆ ನೂತನ ಸಿಎಂಗೆ 25 ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಕೂಡ ಗ್ರೀನ್ ಸಿಗ್ನಲ್ ನೀಡಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಳಿ ಇವರ ಪಟ್ಟಿಯನ್ನು ಹೈಕಮಾಂಡ್ ಪಡೆದಿದೆ.
ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿ ಖಚಿತವಾಗಿದೆ. ಜಾತಿವಾರು ಆದ್ಯತೆಯಲ್ಲಿ, ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಮರುಗೆ ಡಿಸಿಎಂ ಪಟ್ಟ ನೀಡುವುದು ಎಂದು ನಿಷ್ಕರ್ಷೆಯಾಗಿದೆ. ಒಕ್ಕಲಿಗ ಸಿಎಂ ಆದರೆ ಕುರುಬ ಸಮುದಾಯಕ್ಕೆ ಡಿಸಿಎಂ ಪಟ್ಟ ಸಿಗಲಿದೆ.
ಸಚಿವ ಸಂಪುಟದಲ್ಲಿ ಹಿರಿಯರು ಮತ್ತು ಕಿರಿಯರಿಗೆ 50-50 ಅವಕಾಶ ನೀಡಲು ನಿರ್ಧರಿಸಲಾಗಿದೆ. ಯುವ ನಾಯಕತ್ವ ಬೆಳೆಸಲು ಕಾಂಗ್ರೆಸ್ ಹೈಕಮಾಂಡ್ ಉತ್ಸಾಹ ಹೊಂದಿದ್ದು, ಎಲ್ಲ ಸಮುದಾಯಗಳನ್ನು ಪರಿಗಣಿಸಲು ಮುಂದಾಗಿದೆ. 20ಕ್ಕೂ ಅಧಿಕ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ಸಾಧ್ಯತೆ ಇದೆ. ಸಿಎಂ ಪ್ರಮಾಣ ವಚನದ ಬಳಿಕ ಕ್ಯಾಬಿನೆಟ್ ರಚನೆಯಾಗಲಿದೆ.
ಸಂಭಾವ್ಯ ಸಚಿವರ ಪಟ್ಟಿ:
ರಾಮಲಿಂಗಾರೆಡ್ಡಿ
ಕೆಜೆ ಜಾರ್ಜ್
ಕೃಷ್ಣಭೈರೇಗೌಡ
ದಿನೇಶ್ ಗುಂಡೂರಾವ್
ಜಮೀರ್ ಅಹಮದ್
ಡಾ.ಜಿ ಪರಮೇಶ್ವರ್
ಕೆ.ಎನ್ ರಾಜಣ್ಣ
ಚಲುವರಾಯಸ್ವಾಮಿ
ಎಚ್.ಸಿ ಮಹಾದೇವಪ್ಪ
ಚಿಕ್ಕಮಾಧು
ಪುಟ್ಟರಂಗಶೆಟ್ಟಿ
ತನ್ವಿರ್ ಸೇಠ್
ಯು.ಟಿ ಖಾದರ್
ಆರ್.ವಿ ದೇಶಪಾಂಡೆ
ಬಿ.ಕೆ ಹರಿಪ್ರಸಾದ್
ಮಧು ಬಂಗಾರಪ್ಪ
ಶ್ಯಾಮನೂರು ಮಲ್ಲಿಕಾರ್ಜುನ
ಜಗದೀಶ್ ಶೆಟ್ಟರ್
ಸಂತೋಷ್ ಲಾಡ್
ಬಸವರಾಜ ರಾಯರೆಡ್ಡಿ
ನಾಗೇಂದ್ರ
ಎನ್.ವೈ ಗೋಪಾಲಕೃಷ್ಣ
ಪ್ರಿಯಾಂಕಾ ಖರ್ಗೆ
ಶರಣ ಪ್ರಕಾಶ್ ಪಾಟೀಲ್
ಈಶ್ವರ ಖಂಡ್ರೆ
ಎಂ.ಬಿ ಪಾಟೀಲ್
ಸತೀಶ್ ಜಾರಕಿಹೊಳಿ
ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮಣ ಸವದಿ
ಗಣೇಶ್ ಹುಕ್ಕೇರಿ
ಇದನ್ನೂ ಓದಿ: Karnataka CM: ಇಂದೂ ಮುಂದುವರಿದ ಡಿಕೆಶಿ- ಸಿದ್ದು ಜಿದ್ದು; ರಾಹುಲ್ ಮುಂದೆ ಬಂದ ಬಿಕ್ಕಟ್ಟು