Site icon Vistara News

Karnataka CM: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ: ವಿವಿಧ ಮಠಾಧೀಶರ ಒತ್ತಡ

dks karnataka cm

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಿನ್ನೆ ಶುಭ ಹಾರೈಸಲು ಡಿಕೆಶಿ ನಿವಾಸಕ್ಕೆ ಹಲವು ಮಠಾಧೀಶರ ತಂಡ ಆಗಮಿಸಿದ್ದು, ಡಿಕೆಶಿ ಅವರೇ ಮುಖ್ಯಮಂತ್ರಿಯಾಗಲಿ (karnataka cm)‌ ಎಂಬ ಒತ್ತಡ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಡಿಕೆಶಿ ಅವರಿಗೆ ಅಭಿನಂದನೆ ಕೋರಲು ಮೈಸೂರಿನ ಸುತ್ತೂರು ಶ್ರೀಗಳ ತಂಡ ಆಗಮಿಸಿದ್ದು, ಡಿಕೆಶಿ ಅವರಿಗೆ ಉಚ್ಚ ಸ್ಥಾನ ಸಿಗಲಿ ಎಂದು ಸುತ್ತೂರು ಶ್ರೀಗಳು ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ. ಫಲಹಾರದೊಂದಿಗೆ ಡಿಕೆ ಮನೆಗೆ ಆಗಮಿಸಿದ ಶ್ರೀಗಳ ಮಠದ ಪ್ರತಿನಿಧಿಗಳು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವ ಸಂಪ್ರದಾಯವಿದೆ. ಆ ಸಂಪ್ರದಾಯ ಮುಂದುವರಿಯಲಿ, ಈ ಬಗ್ಗೆ ಆದಿಚುಂಚನಗಿರಿ ಮಠಾಧೀಶರು ಕೂಡ ಸಮ್ಮತಿ ಹೊಂದಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಈ ನಡುವೆ ಇಂದು ಮಧ್ಯಾಹ್ನ ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿಗೆ ತೆರಳಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ತೆರಳುವ ಉಭಯ ನಾಯಕರು ಅಲ್ಲಿ ಹೈಕಮಾಂಡ್‌ ಜತೆ ಚರ್ಚಿಸಲಿದ್ದಾರೆ. ಈಗಾಗಲೇ ರಾಜಧಾನಿಯ ಶಾಂಗ್ರಿಲಾ ಹೋಟೆಲ್‌ನಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: Karnataka CM: ಮಾತುಕತೆ ದಿಲ್ಲಿಗೆ ಶಿಫ್ಟ್;‌ ಸಿದ್ದರಾಮಯ್ಯ- ಡಿಕೆಶಿ ಶಾಸಕಬಲ ಎಷ್ಟು?

Exit mobile version