Site icon Vistara News

Karnataka CM: ಮುಗಿಲು ಮುಟ್ಟಿದ ಸಿದ್ದರಾಮಯ್ಯ ಕ್ರೇಜ್‌; ಎಲ್ಲೆಡೆ ಡ್ಯಾನ್ಸ್‌ ಮಾಡುತ್ತಿರುವ ಫ್ಯಾನ್ಸ್‌

Karnataka CM: siddaramaiah Fans craze everywhere

Karnataka CM: siddaramaiah Fans craze everywhere

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (siddaramaiah) ಅವರು ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗಿನಿಂದಲೇ ಸಿದ್ದರಾಮಯ್ಯ ಅಭಿಮಾನಿಗಳು (Siddaramaiah Fans) ನಗರದ ಎಲ್ಲ ಕಡೆ ಮತ್ತು ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರ ಹಳ್ಳಿ ಕುಣಿತ ಎಲ್ಲರ ಗಮನ ಸೆಳೆದಿದೆ.

ಕಂಠೀರವ ಸ್ಟೇಡಿಯಂ ಸುತ್ತ ಫ್ಲೆಕ್ಸ್‌ಗಳ ಕಲರವ

ಕಂಠೀರವ ಸ್ಟೇಡಿಯಂ ಸುತ್ತ ಭಾರಿ ಪ್ರಮಾಣದಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ನಟಿ ನಿಶ್ವಿಕಾ ನಾಯ್ಡು

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ ನಟಿ ನಿಶ್ವಿಕಾ ನಾಯ್ಡು ಅವರು ಅಲ್ಲಿಗೇ ಬಿಡದೆ ಪ್ರಮಾಣ ವಚನ ಸಮಾರಂಭಕ್ಕೂ ಆಗಮಿಸಿದ್ದಾರೆ. ಅದಕ್ಕಿಂತ ಮೊದಲು ಅವರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದರು. ಅಲ್ಲಿ ಮಾತನಾಡಿ ಜನರ ಲೀಡರ್‌ ಅಂದ್ರೆ ಸಿದ್ದರಾಮಯ್ಯ ಸಾಹೇಬ್ರು ಎಂದು ಹೇಳಿದರು.

ಸಿದ್ದರಾಮಯ್ಯ ನಿವಾಸದ ಎದುರು ಅನ್ನದಾನ

ರಾಜ್ಯದ ನಾನಾ ಭಾಗಗಳಿಂದ ಸಿದ್ದು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರಿಗೆ ಅನ್ನದಾನದ ವ್ಯವಸ್ಥೆಯನ್ನು ಸಿದ್ದು ಅಭಿಮಾನಿಗಳು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ನಿವಾಸದ ಮುಂದೆಯೇ ನೂರಾರು ಮಂದಿಗೆ ಅನ್ನದಾನ ನಡೆದಿದೆ. ಜನರು ಕೇಸರಿಬಾತ್‌, ರೈಸ್‌ ಬಾತ್‌ ಸವಿದು ಸಿದ್ದುಗೆ ಜೈಕಾರ ಕೂಗಿದರು.

ಮಲೆ ಮಹದೇಶ್ವರನ ಪ್ರಸಾದ ಹಂಚಿಕೆ

ಸಿದ್ದರಾಮಯ್ಯ ನಿವಾಸದ ಎದುರು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದು, ಕೆಲವರು ಮಲೆಮಹದೇಶ್ವರ ಬೆಟ್ಟದಿಂದ ಪ್ರಸಾದವನ್ನು ತಂದು ಹಂಚಿದ್ದಾರೆ.

Exit mobile version