ಬೆಂಗಳೂರು: ನಾಳೆ (ಮೇ 20) ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (siddaramaiah) ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲು ಹೈಕಮಾಂಡ್ ಅಸ್ತು ಎಂದಿದೆ. ಇದರಿಂದಾಗಿ, ಸಂಪುಟದಲ್ಲಿ ಯಾರ್ಯಾರು ಇರಬೇಕು ಎಂಬ ಆಯ್ಕೆ ನಡೆಸಲು ಇಂದು ಮತ್ತೆ ಸಿದ್ದು ಹಾಗೂ ಡಿಕೆಶಿ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ನಾಳೆ ಸಿಎಂ ಹಾಗೂ ಡಿಸಿಎಂ ಜತೆ 20ಕ್ಕೂ ಅಧಿಕ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಂಪುಟ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆಯಲು ಸಿದ್ದರಾಮಯ್ಯ, ಡಿಕೆಶಿ ಎರಡು ಪ್ರತ್ಯೇಕ ಪಟ್ಟಿ ತೆಗೆದುಕೊಂಡು ದೆಹಲಿಗೆ ಪಯಣ ಬೆಳೆಸಲಿದ್ದಾರೆ.
ಇದಲ್ಲದೇ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಯೂ ಸಂಭಾವ್ಯರ ಒಂದು ಪಟ್ಟಿ ಇದೆ. ಮೂರೂ ಪಟ್ಟಿಗಳಲ್ಲಿ ಇರುವ ಸಾಮಾನ್ಯ ಹೆಸರು ಅಂಗೀಕರಿಸಿ, ಪ್ರತ್ಯೇಕವಾಗಿರುವ ಹೆಸರುಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿ 20 ಮಂದಿಯನ್ನು ಹೈಕಮಾಂಡ್ ಅಂತಿಮಗೊಳಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಲಿಸ್ಟ್‌ನಲ್ಲಿ ಯಾರೆಲ್ಲ ಇದ್ದಾರೆ?
ಕೆ.ಜೆ ಜಾರ್ಜ್
ಜಮೀರ್ ಅಹಮದ್ ಖಾನ್
ಕೃಷ್ಣಬೈರೇಗೌಡ
ಬೈರತಿ ಸುರೇಶ್
ಆರ್.ವಿ ದೇಶಪಾಂಡೆ
ಎಂ.ಬಿ ಪಾಟೀಲ್
ಎಚ್.ಸಿ ಮಹಾದೇವಪ್ಪ
ಸತೀಶ್ ಜಾರಕಿಹೊಳಿ
ಪುಟ್ಟರಂಗಶೆಟ್ಟಿ
ಯು.ಟಿ ಖಾದರ್
ಈಶ್ವರ ಖಂಡ್ರೆ
ನಾಗೇಂದ್ರ
ಸಂತೋಷ್ ಲಾಡ್
ರುದ್ರಪ್ಪ ಲಮಾಣಿ
ಖರ್ಗೆ ಮತ್ತು ಹೈಕಮಾಂಡ್ ಪಟ್ಟಿಯಲ್ಲಿ ಯಾರು?
ಡಾ.ಜಿ ಪರಮೇಶ್ವರ್
ಪ್ರಿಯಾಂಕಾ ಖರ್ಗೆ
ಶರಣ ಪ್ರಕಾಶ್ ಪಾಟೀಲ್
ಅಜೇಯ್ ಸಿಂಗ್
ಎಚ್.ಕೆ ಪಾಟೀಲ್
ರಹೀಮ್ ಖಾನ್
ಜಗದೀಶ್ ಶೆಟ್ಟರ್
ಅಲ್ಲಮಪ್ರಭು ಪಾಟೀಲ್
ಟಿ.ಬಿ ಜಯಚಂದ್ರ
ಎನ್.ವೈ ಗೋಪಾಲಕೃಷ್ಣ
ಕೆ.ಎಚ್ ಮುನಿಯಪ್ಪ
ಬಿ.ಕೆ ಹರಿಪ್ರಸಾದ್
ಡಿಕೆಶಿ ಪಟ್ಟಿಯಲ್ಲಿ ಯಾರಿದ್ದಾರೆ?
ರಾಮಲಿಂಗಾರೆಡ್ಡಿ
ಹ್ಯಾರಿಸ್
ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮಣ ಸವದಿ
ಸಲೀಂ ಅಹಮದ್
ತನ್ವೀರ್ ಸೇಠ್
ವಿನಯ್ ಕುಲಕರ್ಣಿ
ಬಾಲಕೃಷ್ಣ
ಚಲುವರಾಯಸ್ವಾಮಿ
ಸುಧಾಕರ್
ಶರತ್ ಬಚ್ಚೇಗೌಡ
ಕುಣಿಗಲ್ ಡಾ. ರಂಗನಾಥ್
ಗುಬ್ಬಿ ವಾಸು
ಮಧು ಬಂಗಾರಪ್ಪ
ರಾಜುಗೌಡ
ಪೊನ್ನಣ್ಣ
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಲೀಡರ್, ರಾಜ್ಯಪಾಲರಿಗೆ ಸರ್ಕಾರ ರಚನೆಯ ಹಕ್ಕು ಮಂಡನೆ