Site icon Vistara News

Karnataka Election 2023: ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಸದಸ್ಯರಿಂದ ಏಕಕಾಲಕ್ಕೆ ಮತದಾನ!

Karnataka Election 2023, 65 member of one family voted today at Chikkaballapur

ಚಿಕ್ಕಬಳ್ಳಾಪುರ, ಕರ್ನಾಟಕ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಲ್ಲೆಡೆ ಭರ್ಜರಿ ಮತದಾನ ನಡೆಯುತ್ತಿದೆ(Voting in Karnataka). ಜನರು ಅತ್ಯುತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಅವಿಭಜಿತ ಬಾದಾಮ್ ಕುಟುಂಬದ 65 ಸದಸ್ಯರೆಲ್ಲರೂ ಒಟ್ಟಿಗೆ ಬಂದು ಮತ ಚಲಾಯಿಸಿದ್ದಾರೆ(Karnataka Election 2023).

ಈ 65 ಸದಸ್ಯರು ಚಿಕ್ಕಬಳ್ಳಾಪುರ ನಗರದ 161 ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಜ್ಯೂನಿಯರ್ ಕಾಲೇಜ್ ‌ಆವರಣದಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಈ ಕುಟುಂಬದ ಸದಸ್ಯರು ಬಹುತೇಕ ಎಲ್ಲ ಚುನಾವಣೆಗಳಲ್ಲಿ ಏಕಕಾಲಕ್ಕೆ ಬಂದು ಮತದಾನ ಮಾಡುತ್ತಾರೆ. ಈ ಸಂಪ್ರದಾಯವನ್ನು ಪ್ರತಿ ಚುನಾವಣೆಯಲ್ಲಿ ಅವರು ಪಾಲಿಸಿಕೊಂಡು ಬಂದಿದ್ದಾರೆ. ಅದರಂತೆ ಈ ಬಾರಿಯೂ ಅವರು ಒಟ್ಟಿಗೆ ಬಂದು ಮತ ಹಾಕಿದ್ದಾರೆ. ಆ ಮೂಲಕ ತಮ್ಮ ಪಾಲಿನ ಕರ್ತವ್ಯವವನ್ನು ಪೂರೈಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಜನರಿಂದ ಏಕಕಾಲಕ್ಕೆ ಮತದಾನ

ನಮ್ಮ ಕುಟುಂಬದಲ್ಲಿ ಒಟ್ಟು 65 ಮತಗಳಿವೆ. ನಾವು ಈ ಹಿಂದಿನ ಎಲ್ಲ ಚುನಾವಣೆಗಳಲ್ಲೂ ಒಟ್ಟಿಗೆ ಬಂದು ಹಾಕುತ್ತೇವೆ. ಇದೊಂದು ರೀತಿಯಲ್ಲಿ ಸಂಪ್ರದಾಯವಾಗಿದೆ. ಒಂದೇ ಕುಟುಂಬದವರಾದರೂ ಎಲ್ಲ ಮನೆ ಮತ್ತು ವ್ಯವಹಾರಗಳು ಬೇರೆ ಬೇರೆಯಾಗಿವೆ. ವೋಟಿಂಗ್‌ ಮಾಡಲು ಎಲ್ಲರೂ ಜತೆಗೆ ಬರುತ್ತೇವೆ. ಹೀಗೆ ವೋಟ್ ಮಾಡುವುದಕ್ಕೆ ಖುಷಿಯಾಗಿದೆ ಎಂದು ಕುಟಂಬದ ಮುಖ್ಯಸ್ಥ ಗೋಪಾಲ್ ಬಾದಾಮ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Election: ಮತದಾನ ಮಾಡಿದ ರಾಜ್ಯದ ಪ್ರಮುಖ ಸ್ವಾಮೀಜಿಗಳು, ಇಲ್ಲಿವೆ ಫೋಟೊಗಳು

85ನೇ ವಯಸ್ಸಿನಲ್ಲೂ ಮತ ಚಲಾಯಿಸಿದ ವೃದ್ಧೆ

ಬೆಂಗಳೂರಿನ ರಾಜಾಜಿನಗರದಲ್ಲಿ 84ರ ವಯಸ್ಸಿನಲ್ಲೂ ಅಜ್ಜಿಯೊಬ್ಬಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿನ ಬಿಬಿಎಂಪಿ ಯೋಗಕೇಂದ್ರ ಬೂತ್‌ನಲ್ಲಿ ಮತದಾನ ಮಾಡಿದ್ದಾರೆ. 84ರ ವಯಸ್ಸಿನ ಕೆ. ಶಾಂತಾ ಅವರು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಿದ್ದಾರೆ. ಬೆನ್ನು ಬಾಗಿದ್ದರೂ ಊರುಗೋಲು ಸಹಾಯದಿಂದ ಮತಗಟ್ಟೆಗೆ ಬಂದು ಮತ ಹಾಕಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ.

Exit mobile version