ಬೆಂಗಳೂರು: ರಾಜ್ಯಕ್ಕೆ ಇಂದು ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದು, ಪ್ರತ್ಯೇಕ ಕಡೆಗಳಲ್ಲಿ ನಡೆಯಲಿರುವ ಬಿಜೆಪಿ ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಷಾ ದೇವನಹಳ್ಳಿಯ ವಿಜಯಪುರದಲ್ಲಿ ಹಾಗೂ ನಡ್ಡಾ ಬೀದರ್‌ನಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.
ಮದ್ಯಾಹ್ನ 3.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಷಾ ಆಗಮಿಸಲಿದ್ದು, ಅಲ್ಲಿಂದ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. 3.45ರಿಂದ 5 ಗಂಟೆವರೆಗೂ ವಿಜಯಪುರ ಪಟ್ಟಣದಲ್ಲಿ ಬೃಹತ್ ರೋಡ್ ಷೋ ನಡೆಸಲಿದ್ದಾರೆ.
ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ಟೋಲ್ ಗೇಟ್‌ವರೆಗೂ ರೋಡ್ ಷೋ ನಡೆಯಲಿದ್ದು, ಮಧ್ಯೆ ವಿಜಯಪುರ ಬಸ್ಟಾಂಡ್ ಬಳಿ 10 ನಿಮಿಷ ಅಮಿತ್ ಷಾ ಭಾಷಣ ಮಾಡಲಿದ್ದಾರೆ. ಸುಮಾರು ಒಂದುವರೆ ಕಿ.ಮಿ ರೋಡ್ ಷೋ ನಡೆಸಲಿರುವ ಅಮಿತ್ ಷಾ, ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಅಮಿತ್ ಷಾಗೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್ ಸಾಥ್ ನೀಡಲಿದ್ದಾರೆ. ಷಾ ಆಗಮನದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೀದರ್‌ನಲ್ಲಿ ಇಂದು ಬಿಜೆಪಿ ಅಧ್ಯಕ್ಷರ ರೋಡ್ ಶೋ
ಬೀದರ್: ಗಡಿ ಜಿಲ್ಲೆ ಬೀದರ್‌ಗೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಲಿದ್ದು, ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೀದರ್‌ನಲ್ಲಿ ಇಂದು ಸಾಯಂಕಾಲ ಬಿಜೆಪಿ ರೋಡ್ ಶೋ ನಡೆಯಲಿದೆ.
ಬೆಳಿಗ್ಗೆ 10.45ಕ್ಕೆ ಬೀದರ್ ಏರ್‌ಬೇಸ್‌ಗೆ ನಡ್ಡಾ ಆಗಮಿಸಲಿದ್ದು, 10-50ಕ್ಕೆ ಅಲ್ಲಿಂದ ಹೊರಟು ರಾಮಕೃಷ್ಣ ಆಶ್ರಮಕ್ಕೆ ಬಂದು ಸ್ವಾಮೀಜಿಗಳ ಜೊತೆ 11ರಿಂದ 12ರವರೆಗೆ ಸಭೆ ನಡೆಸಲಿದ್ದಾರೆ. 12.20ರಿಂದ 1.20ರವರೆಗೆ ಪ್ರಮುಖ ಮತದಾರರು ಹಾಗೂ ಸೋಷಿಯಲ್ ಇನ್‌ಪ್ಲುಯೆನ್ಸರ್ಸ್ ಜೊತೆ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಯಲಿದೆ. 4.20ರಿಂದ 5.20ರವರೆಗೆ ಘಾಳೆ ಫಂಕ್ಷನ್ ಹಾಲ್‌ನಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಯಲಿದ್ದು, ಬಳಿಕ 6ರಿಂದ 7ರವರೆಗೆ ರೋಡ್ ಶೋ ನಡೆಯಲಿದೆ. ಗುರುನಾನಕ್ ದ್ವಾರದಿಂದ ಸಾಯಿ ಸ್ಕೂಲ್‌ವರೆಗೂ ರೋಡ್ ಶೋ ಸಾಗಲಿ.
ಇದನ್ನೂ ಓದಿ: Karnataka Election 2023: ಅಡ್ಡ ಗೋಡೆ ಮೇಲಿರುವ 50 ಕ್ಷೇತ್ರಗಳೇ ಈಗ ಪಕ್ಷಗಳ ಟಾರ್ಗೆಟ್!