Site icon Vistara News

Karnataka Election 2023: ಫಲಿತಾಂಶಕ್ಕೆ ಮುನ್ನ ತಾರಕಕ್ಕೆ ಏರಿದ ಬೆಟ್ಟಿಂಗ್‌ ಹುಚ್ಚು, ಜಮೀನೇ ಮಾರಾಟ!

election betting

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Election results 2023) ಇದೀಗ ಬೆಟ್ಟಿಂಗ್‌ (election betting) ಪ್ರಿಯರಲ್ಲಿ ಈ ಹುಚ್ಚು ತಾರಕಕ್ಕೆ ಏರಲು ಕಾರಣವಾಗಿದೆ. ಕೆಲವರು ಲಕ್ಷಗಟ್ಟಲೆ ಹಣವನ್ನು ಇದಕ್ಕಾಗಿ ತೆತ್ತಿದ್ದರೆ, ಒಬ್ಬರು ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ.

ಜಮೀನು ಮಾರಾಟಕ್ಕೆ ಮುಂದಾದ ಹುಚ್ಚುತನ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಯೋಗೇಶ್ ಗೌಡ ಎಂಬಾತ, ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆಂದು 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್‌ಗೆ ಇಟ್ಟಿದ್ದಾರೆ. ಹಾಗೆಂದು ಯೋಗೇಶ್‌ ಗೌಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಕೆ.ವೆಂಕಟೇಶ್ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು.

ಬೆಟ್ಟಿಂಗ್‌ಗೂ ಬಂತು ಅಗ್ರಿಮೆಂಟ್

ಬೆಟ್ಟಿಂಗ್‌ಗಾಗಿ ಛಾಪಾ ಕಾಗದದಲ್ಲಿ 5 ಲಕ್ಷ ರೂ. ಅಗ್ರಿಮೆಂಟ್ ಮಾಡಿಸಿಕೊಂಡ ಘಟನೆಯೂ ನಡೆದಿದೆ. ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಬೆಟ್ಟಿಂಗ್ ಅಗ್ರಿಮೆಂಟ್ ಫೋಟೋ ಹರಿದಾಡುತ್ತಿದೆ. ಜಯರಾಮ ನಾಯಕ ಹಾಗೂ ಪ್ರಕಾಶ್, ಶಿವರಾಜ್ ಎಂಬವರ ನಡುವೆ ಅಗ್ರಿಮೆಂಟ್ ಆಗಿದ್ದು, ತಲಾ 5 ಲಕ್ಷ ರೂ. ಬೆಟ್ಟಿಂಗ್ ಕಟ್ಟಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿನ ತುರುಸಿನಲ್ಲಿ ಬೆಟ್ಟಿಂಗ್‌ ನಿರ್ಧಾರವಾಗಿದೆ. ಎಚ್‌.ಡಿ ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಹಾಗೂ ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ನಡುವೆ ಪ್ರಬಲ ಪೈಪೋಟಿಯಿತ್ತು. ಬೆಟ್ಟಿಂಗ್‌ನಲ್ಲಿ 10 ಲಕ್ಷ ರೂ. ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ‌ ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖವಿದೆ; ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರೂ ಹಣ ವಾಪಸ್ಸು ಪಡೆಯುವ ಬಗ್ಗೆಯೂ ಒಪ್ಪಂದವಾಗಿದೆ.

ಕರ್ನಾಟಕದ ಅನೇಕ ಕಡೆಗಳಲ್ಲಿ ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಈ ಬೆಟ್ಟಿಂಗ್‌ನಲ್ಲಿ ತೊಡಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಎಲ್ಲೂ ದೂರು ದಾಖಲಾಗಿಲ್ಲ. ಆದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದರ ಕುರಿತು, ಮೂರೂ ಪಕ್ಷಗಳಿಗೆ ಎಷ್ಟು ಸ್ಥಾನಗಳ ಬರಲಿವೆ ಎಂಬ ಕುರಿತು, ಹೆಚ್ಚಿನ ಹಣ ಬೆಟ್ಟಿಂಗ್‌ನಲ್ಲಿ ತೊಡಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Karnataka Election : ಜೋರಾಯ್ತು ಬೆಟ್ಟಿಂಗ್‌; ಹಣ, ಚಿನ್ನ, ಸೈಟ್‌, ಬೈಕೇ ಪಣ; ಹಾಟ್‌ ಫೇವರಿಟ್‌ ಯಾರು?

Exit mobile version