Site icon Vistara News

Karnataka Election 2023: ಬೆಳಗಾವಿಯಲ್ಲಿ ಹಾಲಿ- ಮಾಜಿ ಸಿಎಂಗಳ ಮತಬೇಟೆ ಇಂದು

Siddaramaiah and Basavaraj Bommai in Belgaum. Karnataka Election updateds

CM Bommai will conduct lightning traffic through Bharjari Road Show in 6 constituencies of Belgaum district and Former CM Siddaramaiah will campaign in 4 constituencies of Belgaum district through convention.

ಬೆಳಗಾವಿ: ಬೆಂಗಳೂರು ಬಳಿಕ ಅತಿದೊಡ್ಡ ‌ಜಿಲ್ಲೆ ಬೆಳಗಾವಿ ಮೇಲೆ ಕೈ- ಕಮಲ ನಾಯಕರ ಕಣ್ಣು ಬಿದ್ದಿದ್ದು ಬೆಳಗಾವಿಯಲ್ಲಿ ಇಂದು ಹಾಲಿ-ಮಾಜಿ‌ ಸಿಎಂಗಳ ಭರ್ಜರಿ ಮತಬೇಟೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳ ಪರ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ, ಸಾರ್ವಜನಿಕ ಸಭೆ ಹಾಗೂ ಕಾಂಗ್ರೆಸ್ ‌ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. (Karnataka Election 2023)

ಇಂದು ಒಂದೇ ದಿನ ಬೆಳಗಾವಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ರೋಡ್ ಶೋ ಮೂಲಕ ಮಿಂಚಿನ ಸಂಚಾರ ನಡೆಸಲಿದ್ದಾರೆ. ಇತ್ತ ಬೆಳಗಾವಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಜಾಧ್ವನಿ ಸಮಾವೇಶ ಮೂಲಕ ಪ್ರಚಾರ ಮಾಡಲಿದ್ದಾರೆ.

ಧಾರವಾಡದಿಂದ ಮಧ್ಯಾಹ್ನ 1ಕ್ಕೆ ಕಿತ್ತೂರಿಗೆ ಬರಲಿರುವ ಸಿಎಂ ಬಸವರಾಜ ಬೊಮ್ಮಾಯಿ ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಬೃಹತ್ ರೋಡ್ ಶೋ, ಸಾರ್ವಜನಿಕ ‌ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಖಾನಾಪುರಕ್ಕೆ ಭೇಟಿ ನೀಡಿ ಅಭ್ಯರ್ಥಿ ವಿಠ್ಠಲ ಹಲಗೇಕರ ಪರ ಮತಬೇಟೆ ನಡೆಸಲಿದ್ದಾರೆ. ಸಂಜೆ 4ಕ್ಕೆ ಬೆಳಗಾವಿ ಗ್ರಾಮೀಣ ‌ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಪರ ಮತಬೇಟೆ, ಸಂಜೆ 5ಕ್ಕೆ ಬೆಳಗಾವಿ ‌ದಕ್ಷಿಣದ ಅಭಯ ಪಾಟೀಲ ಪರ ಹಾಗೂ ಉತ್ತರ ಕ್ಷೇತ್ರದಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಇಂದು ಎರಡನೇ ದಿನವೂ ಮಾಜಿ ಸಿಎಂ ಸಿದ್ದರಾಮಯ್ಯ ಮತಬೇಟೆ ಮುಂದುವರಿಸಲಿದ್ದಾರೆ. ಬೆಳಗಾವಿ ಬಳಿಕ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ನಿನ್ನೆ ಸವದತ್ತಿಯಲ್ಲಿ ವಾಸ್ತವ್ಯ ಹೂಡಿರುವ ಅವರು ಸವದತ್ತಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11ಕ್ಕೆ ಕಾಗವಾಡ ಕ್ಷೇತ್ರದ ಉಗಾರ್‌ಖುರ್ದ್‌ಗೆ ತೆರಳಿ, ಬೆಳಗ್ಗೆ 11ಕ್ಕೆ ಉಗಾರ್‌ಖುರ್ದ್‌ನಲ್ಲಿ ಪ್ರಜಾಧ್ವನಿ ಸಮಾವೇಶ ನಡೆಸಿ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಕುಡಚಿ ಕ್ಷೇತ್ರದ ಹಾರೂಗೇರಿಯಲ್ಲಿ ಅಭ್ಯರ್ಥಿ ಮಹೇಂದ್ರ ತಮ್ಮನ್ನವರ್ ಪರ ಪ್ರಚಾರ ನಡೆಸುತ್ತಾರೆ. ಮಧ್ಯಾಹ್ನ 3.15ಕ್ಕೆ ರಾಯಭಾಗ ಕ್ಷೇತ್ರದ ಕಂಕಣವಾಡಿ ಗ್ರಾಮದಲ್ಲಿ ಸಭೆ ನಡೆಯಲಿದೆ.

ಕೇಂದ್ರ ಸಚಿವೆಯರ ಆಗಮನ

ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಅಖಾಡ ರಂಗೇರಿದ್ದು, ಇಂದು ನಿಪ್ಪಾಣಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಕೇಂದ್ರ ಸಚಿವೆದ್ವಯರು ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಯ ವಿಎಸ್‌ಎಂ ಕಾಲೇಜು ಮೈದಾನದಲ್ಲಿ ಸಂಜೆ 4ಕ್ಕೆ ನಡೆಯುವ ಬಿಜೆಪಿ ಬೃಹತ್ ಮಹಿಳಾ ಸಮಾವೇಶದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಪ್ರಚಾರ ಭಾಗವಹಿಸಿ ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ: Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆ ಕಣ ಕ್ಷಣ ಕ್ಷಣದ ಅಪ್‌ಡೇಟ್:‌ ಇಂದು ಬೆಳಗಾವಿಯಲ್ಲಿ ಕೇಂದ್ರ ಸಚಿವರು

Exit mobile version