Site icon Vistara News

Karnataka Election 2023: ಸಿಎಂ ಬಳಿಕ ಸಂಪುಟ ಪ್ಲ್ಯಾನ್‌; ಸಚಿವರ ಆಯ್ಕೆಗೆ ಹೈಕಮಾಂಡ್‌ 10 ಅಂಶ ಸೂತ್ರ

Congress high command framed 10 guidelined to chose ministers

Congress high command framed 10 guidelined to chose ministers

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಹುಮತ ಗಳಿಸಿರುವ ಕಾಂಗ್ರೆಸ್‌ ಮುಖ್ಯಮಂತ್ರಿ (Congress Chief minister) ಆಯ್ಕೆಯ ಕಸರತ್ತಿನಲ್ಲಿ ನಿರತವಾಗಿದೆ. ಸಿಎಂ ಯಾರು ಎನ್ನುವುದು ತೀರ್ಮಾನ ಆಗುತ್ತಿದ್ದಂತೆಯೇ ಸಂಪುಟ ರಚನೆಯಾಗಲಿದ್ದು (Karnataka Cabinet), ಅದಕ್ಕೂ ಈಗಾಗಲೇ ಕಾರ್ಯತಂತ್ರವನ್ನು ಪಕ್ಷ ರೂಪಿಸಿದೆ.

ಯಾವುದೇ ಲಾಬಿಗೆ ಒಳಗಾಗದೆ, ಸರ್ವರಿಗೂ ಹಿತವಾಗುವ, ಎಲ್ಲರನ್ನೂ ಒಳಗೊಳ್ಳುವ, ಬೆಸ್ಟ್‌ ಸಂಪುಟ ರಚನೆಗೆ ಕಾಂಗ್ರೆಸ್‌ ಹೈಕಮಾಂಡ್‌ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಇದು ಈಗಿನ ಆಡಳಿತ ನಿರ್ವಹಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸಂಪುಟವೇ ಆದರೂ ಅದರ ಇನ್ನೊಂದು ಕಣ್ಣು ಮುಂದಿನ 2024ರ ಲೋಕಸಭಾ ಚುನಾವಣೆಯ ಮೇಲೂ ಇದೆ. ಹೀಗಾಗಿ ಉತ್ತಮರು ಮತ್ತು ನಿಪುಣರ ಆಯ್ಕೆಗಾಗಿ ಹೈಕಮಾಂಡ್‌ 10 ಅಂಶಗಳ ಸೂತ್ರಗಳನ್ನು ಅಳವಡಿಸಿಕೊಂಡಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಚುನಾವಣಾ ಕಾರ್ಯತಂತ್ರ ನಿಪುಣ ಸುನೀಲ್ ಕನುಗೋಲು ನೇತೃತ್ವದಲ್ಲಿ ರಚನೆಯಾದ ಮಾನದಂಡಗಳು ಹೀಗಿವೆ.

1. 2013ರ ಸಂಪುಟದಲ್ಲಿ ಸಚಿವರಾಗಿ ಕಾರ್ಯದಕ್ಷತೆಯಿಂದ ಕೆಲಸ ನಿರ್ವಹಿಸದ ಮಾಜಿ ಸಚಿವರಿಗೆ ಈ ಬಾರಿ ಅವಕಾಶವಿಲ್ಲ.

2.ಹೊಸ ಯುವ ಶಾಸಕರಿಗೆ ಅವಕಾಶ ನೀಡಲು ನಿರ್ಧಾರ.

3.ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚಿಸಲು ತೀರ್ಮಾನ

4.ಪಕ್ಷದ ಪ್ರಣಾಳಿಕೆಯನ್ನು ಸಮರ್ಥವಾಗಿ ಜಾರಿಗೊಳಿಸುವ, ಜನಮಾನಸಕ್ಕೆ ಮುಟ್ಟಿಸುವ ಶಾಸಕರಿಗೆ ಅವಕಾಶ.

5.ಬಿಜೆಪಿ ಸರ್ಕಾರದ ಸಚಿವರ ಬಳಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳನ್ನು/ ಆಪ್ತ ಕಾರ್ಯದರ್ಶಿಗಳನ್ನು ನೂತನ ಸಚಿವರು ತಮ್ಮ ಕಛೇರಿಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು

6.ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕೆಂಬುವುದನ್ನು ಹೈಕಮಾಂಡ್ ಈಗಾಗಲೇ ಪ್ರದೇಶವಾರು/ಜಾತಿವಾರು/ಯುವಕರು/ಪಕ್ಷನಿಷ್ಠೆ/ ಕಾರ್ಯದಕ್ಷತೆ ವಯೋಮಾನ ಎಲ್ಲವನ್ನು ಮಾನದಂಡವಾಗಿ ಪರಿಗಣಿಸಬೇಕು

7.ಮಹಿಳಾ ಶಾಸಕರಿಗೆ ಉತ್ತಮವಾದ ಖಾತೆ ನೀಡಲು ನಿರ್ಧಾರ

7. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗ ಶಾಸಕರು ಅನ್ನುವುದನ್ನು ಬಿಟ್ಟು ಪಕ್ಷಕ್ಕೆ ಅನುಕೂಲವಾಗುವ, ಪಕ್ಷ ಸಂಘಟನೆಗೆ ಒತ್ತು ಕೊಡುವವರಿಗೆ ಅದ್ಯತೆ ಕೊಡಬೇಕು. ಹಿಂಬಾಲಕರಿಗೆ ಮಣೆ ಬೇಡವೆಂದು ಹೈಕಮಾಂಡ್ ತೀರ್ಮಾನ

9.ವಿಧಾನ ಪರಿಷತ್ತಿನ ಸದಸ್ಯರುಗಳಿಗೂ ಸಂಪುಟದಲ್ಲಿ ಹೆಚ್ಚಿನ ಅವಕಾಶ ನೀಡಲು ತೀರ್ಮಾನ.

10.ಆಡಳಿತ ಯಂತ್ರದಲ್ಲಿ ಐ.ಎ.ಎಸ್ / ಐ.ಪಿ.ಎಸ್ ವರ್ಗದ ಅಧಿಕಾರಿಗಳಲ್ಲಿ ಬದಲಾವಣೆ ಮಾಡಿ ಜನಸಾಮಾನ್ಯರಿಗೆ ಸ್ಪಂದಿಸುವಂತ ಅಧಿಕಾರಿಗಳಿಗೆ ಪ್ರಮುಖ ಇಲಾಖೆಗಳಿಗೆ ಆದ್ಯತೆ ನೀಡಲು ತೀರ್ಮಾನ.

ಇದನ್ನೂ ಓದಿ: Karnataka Election : ಪಕ್ಷ ನನಗೆ ದೇವರು, ಹೇಳಿದಂತೆ ಕೇಳುವೆ; ಸಿಎಂ ಪಟ್ಟು ಬಿಟ್ಟು ಕೊಟ್ಟರಾ ಡಿಕೆಶಿ?

Exit mobile version