Site icon Vistara News

Karnataka Election 2023: ಎಕ್ಸಿಟ್‌ ಪೋಲ್‌ ತಂದ ಹುಮ್ಮಸ್ಸು, ಕಾಂಗ್ರೆಸ್‌ನಲ್ಲಿ ಜೋರಾಯ್ತು ಚಟುವಟಿಕೆ, ಅಭ್ಯರ್ಥಿಗಳಿಗೆ ನೀತಿಪಾಠ

congress leaders

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಮತದಾನದ ಬಳಿಕ ನಡೆದ ಬಹುತೇಕ ಚುನಾವಣೋತ್ತರ ಸಮೀಕ್ಷೆ (exit poll) ಗಳಲ್ಲಿ‌, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಚಟುವಟಿಕೆ ಜೋರಾಗಿದೆ. ಕೈ ನಾಯಕರು ಗುರುವಾರ ತಡರಾತ್ರಿವರೆಗೂ ಸಭೆ ನಡೆಸಿದ್ದು, ಎಷ್ಟು ಸೀಟ್‌ ಗಳಿಸಿದರೆ ತಕ್ಷಣದ ನಡೆ ಹೇಗಿರಬೇಕು ಬಗ್ಗೆ ಚರ್ಚಿಸಿದ್ದಾರೆ.

ಉಸ್ತುವಾರಿ ರಣದೀಪ್‌ ಸುರ್ಜೇವಾಲ ನಾಯಕತ್ವದಲ್ಲಿ ಕೈ ನಾಯಕರು ರಾತ್ರಿ ಎರಡು ಗಂಟೆವರೆಗೆ ವರ್ಚುವಲ್ ಸಭೆ ನಡೆಸಿದರು. ಕಾಂಗ್ರೆಸ್ ಸರ್ಕಾರ ರಚನೆಗೆ ಅವಕಾಶ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವರ್ಚುವಲ್ ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ 224 ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ರಾಜ್ಯ ನಾಯಕರು ನೀತಿಪಾಠ ಮಾಡಿದರು ಎಂದು ತಿಳಿದುಬಂದಿದೆ. ನಮಗೇ ಸರ್ಕಾರ ರಚನೆಗೆ ಅವಕಾಶ ಸಿಗಲಿದೆ. ಹೀಗಾಗಿ ಅನ್ಯ ಪಕ್ಷಗಳ ಆಮಿಷಗಳಿಗೆ ಒಳಗಾಗಬೇಡಿ. ಆಪರೇಷನ್‌‌ಗೆ ಒಳಗಾಗಬೇಡಿ. ಎಕ್ಸಿಟ್ ಪೋಲ್‌ನಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸ್ಥಾನಗಳು ಸ್ವಲ್ಪ ಕಡಿಮೆಯಾದರೂ, ಹೇಗಾದರೂ ಮಾಡಿ ಸರ್ಕಾರ ರಚನೆ ಮಾಡುತ್ತೇವೆ. ಆದ್ದರಿಂದ ಎಲ್ಲರೂ ಕೂಡ ಅಲರ್ಟ್ ಆಗಿರಿ ಎಂದು ಎಲ್ಲ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.

ಇವಿಎಂ ಯಂತ್ರಗಳನ್ನು ಶೇಖರಿಸಿ ಇಟ್ಟಿರುವ ಸ್ಟ್ರಾಂಗ್ ರೂಮ್‌ಗಳ ಬಗ್ಗೆ ಎಚ್ಚರವಿರಲಿ. ಕಾಂಗ್ರೆಸ್ ‌ಕಾರ್ಯಕರ್ತರು 24/7 ಸ್ಟ್ರಾಂಗ್ ರೂಮ್‌ಗಳ ಮೇಲೆ ನಿಗಾ ಇಟ್ಟು ಕಾವಲು ಕಾಯಬೇಕು. ಸ್ಟ್ರಾಂಗ್ ರೂಮ್‌ಗಳಲ್ಲಿ ಏನು ಬೇಕಾದ್ರೂ ಆಗಬಹುದು, ಎಚ್ಚರಿಕೆ ವಹಿಸಿ ಎಂದು ಕೂಡ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Karnataka Election 2023: ಫಲಿತಾಂಶಕ್ಕೆ ಮುನ್ನ ತಾರಕಕ್ಕೆ ಏರಿದ ಬೆಟ್ಟಿಂಗ್‌ ಹುಚ್ಚು, ಜಮೀನೇ ಮಾರಾಟ!

Exit mobile version