Site icon Vistara News

Karnataka Election 2023 : ಕಾಂಗ್ರೆಸ್‌ ಮೂರನೇ ಪಟ್ಟಿ ಪ್ರಕಟ; ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ

Check out the siddaramaiah political profile right here in kannada

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election 2023) ಕಾಂಗ್ರೆಸ್‌ ಸ್ಪರ್ಧಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವಕಾಶ ನೀಡಲಾಗಿಲ್ಲ. ಆಪ್ತರ ಸಲಹೆಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಕೋಲಾರ ಕ್ಷೇತ್ರದಿಂದ ಕೊತ್ತೂರು. ಜಿ. ಮಂಜುನಾಥ್‌ ಅವರನ್ನು ಕಣಕ್ಕಿಳಿಸಲಾಗಿದೆ.

ಸಚಿವ ಡಾ. ಸುಧಾರಕರ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಪರಿಶ್ರಮ ನೀಟ್ ಅಕಾಡೆಮಿಯ ಪ್ರದೀಪ್ ಈಶ್ಚರ್ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಅಥಣಿಯಿಂದ ಶುಕ್ರವಾರವಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ ಮಾಜಿ ಉಪಮುಖ್ಯಮಂತ್ರಿ ಸವದಿ ಟಿಕೆಟ್‌ ಪಡೆದಿದ್ದಾರೆ.

ಹಾಲಿ ಮೂರು ಶಾಸಕರ ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್ ಘೋಷಣೆ ಮಾಡಲಾಗಿಲ್ಲ. ಪುಲಕೇಶಿ ನಗರದ ಟಿಕೆಟ್ ಅನ್ನು ವರಿಷ್ಠರು ಪೆಂಡಿಂಗ್ ಇಟ್ಟಿದ್ದು, ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಇನ್ನೂ ಟಿಕೆಟ್ ಖಾತ್ರಿಯಾಗಿಲ್ಲ. ಲಿಂಗಸಗೂರು ಕ್ಷೇತ್ರದ ಟಿಕೆಟ್‌ ಅನ್ನೂ ಘೋಷಿಸಲಾಗಿಲ್ಲ. ಹಾಗಾಗಿ ಹಾಲಿ ಶಾಸಕ ಡಿ.ಎಸ್ ಹುಲಗೇರಿ ಅವರಿಗೆ ಸ್ಪರ್ಧೆ ಇನ್ನೂ ಖಚಿತವಾಗಿಲ್ಲ.

ಮೂಡಿಗೇರೆ ಕ್ಷೇತ್ರದಿಂದ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮ ಅವರಿಗೆ ಟಿಕೆಟ್‌ ನೀಡಲಾಗಿದೆ. ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನ ಕುಮಾರ್ ಗೆ ಟಿಕೆಟ್‌ ನೀಡಿಲ್ಲ. ಬದಲಾಗಿ ಯುವ ಕಾಂಗ್ರೆಸ್‌ನ ಎಚ್‌.ಸಿ. ಯೋಗಿಶ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಬೆಂಗಳೂರು ಚಿಕ್ಕಪೇಟೆ ಕ್ಷೇತ್ರದಿಂದ ಆರ್ ವಿ ದೇವರಾಜು, ಕುಮಾಟದಿಂದ ನಿವೇದಿತಾ ಆಳ್ವಾ ಕಣಕ್ಕಿಳಿಯುತ್ತಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ;

  1. ಅಥಣಿ – ಲಕ್ಷ್ಮಣ್ ಸವದಿ
  2. ಮೂಡಿಗೆರೆ – ನಯನ ಮೋಟಮ್ಮ
  3. ಅರಸೀಕೆರೆ – ಶಿವಲಿಂಗೇಗೌಡ
  4. ರಾಯಭಾಗ – ಮಹಾವೀರ್ ಮೋಹಿತ್
  5. ಅರಬಾವಿ – ಅರವಿಂದ ದಳವಾಯಿ
  6. ಬೆಳಗಾವಿ ಉತ್ತರ – ಆಸೀಫ್‌ ಸೇಠ್
  7. ಬೆಳಗಾವಿ ದಕ್ಷಿಣ – ಪ್ರಭಾವತಿ ಮಾಸ್ತಿಮರಡಿ
  8. ತೇರದಾಳ – ಸಿದ್ದಪ್ಪ‌ ಕೊಣ್ಣೂರು
  9. ದೇವರ ಹಿಬ್ಬರಗಿ – ಶರಣಪ್ಪ ಸುಣಗಾರ್
  10. ಸಿಂಧಗಿ – ಅಶೋಕ್ ‌ಮನಗೊಳಿ
  11. ಕಲಬುರಗಿ ಗ್ರಾಮೀಣ – ರೇವೂನಾಯಕ್ ಬೆಳಮಗಿ
  12. ಔರಾದ್ – ಭೀಮ್ ಸೇನ್ ರಾವ್ ಶಿಂಧೆ
  13. ಮಾನ್ವಿ – ಹಂಪಯ್ಯ ನಾಯಕ್
  14. ದೇವದುರ್ಗ – ಶ್ರೀದೇವಿ ನಾಯಕ್
  15. ಸಿಂಧನೂರು – ಹಂಪನಗೌಡ ಬಾದರ್ಲಿ
  16. ಶಿರಹಟ್ಟಿ – ಸುಜಾತ ದೊಡ್ಡಮನಿ
  17. ನವಲಗುಂದ – ಕೋನರೆಡ್ಡಿ
  18. ಕುಂದಗೋಳ‌ – ಕುಸುಮಾ ಶಿವಳ್ಳಿ
  19. ಕುಮಟಾ – ನಿವೇದಿತ್ ಆಳ್ವಾ
  20. ಸಿರಗುಪ್ಪ – ಬಿಎಂ ನಾಗರಾಜ್
  21. ಬಳ್ಳಾರಿ ನಗರ – ನಾ.ರ ಭರತ್ ರೆಡ್ಡಿ
  22. ಜಗಳೂರು – ದೇವೇಂದ್ರಪ್ಪ
  23. ಹರಪನಹಳ್ಳಿ – ಎನ್.‌ ಕೊಟ್ರೇಶ್
  24. ಹೊನ್ನಾಳಿ – ಶಾಂತನಗೌಡ
  25. ಶಿವಮೊಗ್ಗ ಗ್ರಾಮೀಣ – ಶ್ರೀನಿವಾಸ್ ಕರಿಯಣ್ಣ
  26. ಶಿವಮೊಗ್ಗ – ಎಚ್.ಸಿ ಯೋಗೇಶ್
  27. ಶಿಕಾರಿಪುರ – ಜಿಬಿ ಮಾಲತೇಶ್
  28. ಕಾರ್ಕಳ – ಉದಯ್ ಶೆಟ್ಟಿ
  29. ತರೀಕೆರೆ – ಶ್ರೀನಿವಾಸ್
  30. ತುಮಕೂರು ಗ್ರಾಮೀಣ – ಷಣ್ಮುಗಪ್ಪ ಯಾದವ್
  31. ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್
  32. ಕೋಲಾರ – ಕೊತ್ತೂರು ಮಂಜುನಾಥ್
  33. ದಾಸರಹಳ್ಳಿ – ಧನಂಜಯ್ ಗೌಡ
  34. ಚಿಕ್ಕಪೇಟೆ – ಆರ್.ವಿ ದೇವರಾಜ್
  35. ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
  36. ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
  37. ಚನ್ನಪಟ್ಟಣ – ಗಂಗಾಧರ್
  38. ಮದ್ದೂರು ‌- ಉದಯ್ ಗೌಡ
  39. ಹಾಸನ – ಬನವಾಸಿ ರಂಗಸ್ವಾಮಿ
  40. ಮಂಗಳೂರು ದಕ್ಷಿಣ – ಜೆ.ಆರ್ ಲೋಬೋ
  41. ಪುತ್ತೂರು – ಅಶೋಕ್‌ ರೈ
  42. ಕೃಷ್ಣರಾಜ – ಎಂ.ಕೆ ಸೋಮಶೇಖರ್
  43. ಚಾಮರಾಜ – ಹರೀಶ್ ಗೌಡ

ಇದನ್ನೂ ಓದಿ : Karnataka Elections : ರಾಜಕೀಯದಲ್ಲಿ ಏನೂ ಆಗ್ಬೋದು! ಎಚ್ಡಿಕೆ ಸರ್ಕಾರ ಉರುಳಿಸಿದ ಸೂತ್ರಧಾರ ಎನ್‌.ಆರ್‌. ಸಂತೋಷ್‌ ಜೆಡಿಎಸ್‌ಗೆ!

Exit mobile version