Site icon Vistara News

Karnataka Election 2023: ಶೀಘ್ರವೇ ನನಗೆ ಬೈಯುವುದರಲ್ಲಿ ಕಾಂಗ್ರೆಸಿಗರು ಶತಕ ಬಾರಿಸಲಿದ್ದಾರೆ; ಪ್ರಧಾನಿ ಮೋದಿ

Karnataka Election 2023; Congress will soon hit a century of scolding me; Prime Minister Narendra Modi

ಚನ್ನಪಟ್ಟಣ, ರಾಮನಗರ: ನಾನು ನಡೆಸಿಕೊಡುವ ಮನ್ ಕಿ ಬಾತ್ ಈಗ ನೂರು ಸಂಚಿಕೆ ಪೂರೈಸುತ್ತಿದೆ. ಹಾಗೆಯೇ, ನನಗೆ ಬೈಯುವ ಸ್ಪರ್ಧೆಯಲ್ಲಿ ಕಾಂಗ್ರೆಸಿಗರು ಬೈಗುಳದ ಶತಕ ಪೂರೈಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ(Karnataka Election 2023).

ರಾಮನಗರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಜನರು ನನಗೆ ಬೈಯುವುದಕ್ಕೆ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸಿಗರು ನನ್ನ ಗೋರಿಯನ್ನು ತೋಡುತ್ತೇವೆ ಎನ್ನುತ್ತಾರೆ. ಮತ್ತೊಮ್ಮೆ ನನ್ನನ್ನು ವಿಷದ ಹಾವಿಗೆ ಹೋಲಿಸುತ್ತಾರೆ. ಹಾವು ಶಿವನ ಕೊರಳಲ್ಲಿರುತ್ತದೆ. ನನಗೆ ನೀವು ಶಿವ, ಜನರೇ ಜನಾರ್ದನರು. ಹಾಗಾಗಿ, ಅವರ ಬೈಗುಳವನ್ನು ನನ್ನ ತಲೆ ಮೇಲೆ ಇಟ್ಟುಕೊಳ್ಳುವೆ. ಆದರೆ, ನೀವು ನೆನಪಿಟ್ಟುಕೊಳ್ಳಬೇಕು. ಏನೆಂದರೆ, ಈ ಬಾರಿಯ ನಿರ್ಧಾರ ಬಹುಮತ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಚನ್ನಪಟ್ಟಣದಲ್ಲಿ ಚುನಾವಮಾ ಪ್ರಚಾರ ಮಾಡಿದರು

ಡಬಲ್ ಎಂಜಿನ್ ಸರ್ಕಾರವು ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ, ವಂದೇ ಭಾರತ್ ಟ್ರೈನ್ ಇವೆಲ್ಲ ಬಿಜೆಪಿಯ ಪ್ರಯತ್ನದ ಫಲಗಳಾಗಿವೆ. ರಾಮನಗರದಲ್ಲಿ ಉದ್ಯಮಗಳನ್ನು ಹೆಚ್ಚಿಸುತ್ತೇವೆ. ಆ ಮೂಲಕ ಇಲ್ಲಿನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುತ್ತೇವೆ. ಇದಕ್ಕೆ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವು ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಗೊಂಬೆ ಉದ್ಯಮದಲ್ಲಿ ರಾಮನಗರ ಜಿಲ್ಲೆಗೆ ಲಾಭ

ಚನ್ನಪಟ್ಟಣವು ಗೊಂಬೆಗಳ ನಾಡು. ಆದರೆ, ಕಾಂಗ್ರೆಸ್ ಸರ್ಕಾರವು ಈ ನಮ್ಮ ಪರಂಪರಾಗತವಾಗಿ ಬಂದಿದ್ದ ಆಟಿಕೆ ಉದ್ಯಮವನ್ನು ನಾಶ ಮಾಡಿತ್ತು. ಸಸ್ತಾ ವಿದೇಶಿ ಆಟಿಕೆಗಳನ್ನು ದೇಶದ ಮಾರುಕಟ್ಟೆ ಪೂರ್ತಿ ತುಂಬಿತ್ತು. ಈ ಬಗ್ಗೆ ನಾನು ನನ್ನ ಮನ್ ಕಿ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದೆ. ದೇಶವಾಸಿಗಳಿಗೆ ದೇಶಿ ಗೊಂಬೆಗಳ ಖರೀದಿಗೆ ಸೂಚಿಸಿದ್ದೆ. ಅದರ ಪರಿಣಾಮ ಈಗ ವಿದೇಶಿ ಆಟಿಕೆಗಳ ಆಮದಿನಲ್ಲಿ ಶೇ.70ರಷ್ಟು ಕಡಿಮೆಯಾಗಿದೆ. ಅಷ್ಟೇ ಪ್ರಮಾಣದಲ್ಲಿ ರಫ್ತು ಹೆಚ್ಚಳವಾಗುತ್ತಿದೆ. ಭಾರತವು ಸುಮಾರು 8 ಸಾವಿರ ಕೋಟಿ ರೂ. ಮೊತ್ತದ ಆಟಿಕೆ ಸಾಮಾನುಗಳನ್ನು ರಫ್ತು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Exit mobile version