Site icon Vistara News

Karnataka Election 2023: ಡಿಕೆ ಶಿವಕುಮಾರ್‌ ನಾಮಪತ್ರ ಅಂಗೀಕಾರ, ಇಂದು ಟೆಂಪಲ್‌ ರನ್‌

dk shivakumar

ರಾಮನಗರ: ಕಾಂಗ್ರೆಸ್‌ ಅಧ್ಯಕ್ಷ, ಕನಕಪುರ ಅಭ್ಯರ್ಥಿ ಡಿ.ಕೆ ಶಿವಕುಮಾರ್‌ ನಾಮಪತ್ರ ಅಂಗೀಕಾರಗೊಂಡಿದ್ದು, ಈ ಹಿನ್ನಲೆಯಲ್ಲಿ ಇಂದಿನಿಂದ ಡಿಕೆಶಿ ಟೆಂಪಲ್ ರನ್ ಆರಂಭಿಸಿದ್ದಾರೆ.

ಇದಕ್ಕೂ ಮುನ್ನ ತಮ್ಮ ನಾಮಪತ್ರ ತಿರಸ್ಕಾರಗೊಳ್ಳುವ ಆತಂಕದಿಂದ, ಅವರ ಸಹೋದರ ಹಾಗೂ ಸಂಸದ ಡಿ.ಕೆ ಸುರೇಶ್‌ ಅವರು ಕನಕಪುರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಂತೆ ಅವರು ಮಾಡಿದ್ದರು. ಆದರೆ, ಡಿಕೆಶಿ ನಾಮಪತ್ರ ಅಂಗೀಕೃತಗೊಂಡಿದೆ.

ಇಂದು ಮುಂಜಾನೆಯೇ ಡಿಕೆ ಶಿವಕುಮಾರ್‌ ಕನಕಪುರ ತಾಲೂಕಿನ ಮಳಗಾಳು ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಡಿಕೆಶಿಗೆ ಮಳಗಾಳು ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು. ಬೆಳಗ್ಗೆ 10 ಗಂಟೆಗೆ ಅವರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿ ಶ್ರೀ ಮಂಜುನಾಥನ ದರ್ಶನ ಮಾಡಲಿದ್ದು, ಬಳಿಕ ಶೃಂಗೇರಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ʼʼಬಿಜೆಪಿಯ ಐಟಿ ಸೆಲ್‌ ನನ್ನ ನಾಮಪತ್ರದಲ್ಲಿ ಲೋಪದೋಷ ಹುಡುಕುತ್ತಿದೆ ಎಂಬುದು ಗೊತ್ತಾಗಿದೆ. ಬಿಜೆಪಿ ನನ್ನ ಉಮೇದುವಾರಿಕೆ ತಡೆಯಲು ಷಡ್ಯಂತ್ರ ನಡೆಸುತ್ತಿದೆ. ಹೀಗಾಗಿ ಸುರೇಶ್‌ ಅರ್ಜಿ ಸಲ್ಲಿಸಿದ್ದಾರೆʼʼ ಎಂದು ಡಿಕೆಶಿ ಹೇಳಿದ್ದರು. ಅವರ ಈ ನಡೆ ತೀವ್ರ ಕುತೂಹಲ ಕೆರಳಿಸಿತ್ತು. ಇದು, ಕೇಂದ್ರ ಸರ್ಕಾರ ತನ್ನನ್ನು ಹಣಿಯಲು ಯತ್ನಿಸುತ್ತಿದೆ ಎಂಬ ಮೆಸೇಜ್‌ ರವಾನಿಸಿ ಜನತೆಯ ಸಹಾನುಭೂತಿ ಗಿಟ್ಟಿಸುವ ತಂತ್ರವಾಗಿದೆ ಎಂದು ಬಿಜೆಪಿ ವ್ಯಾಖ್ಯಾನಿಸಿತ್ತು. ಇತ್ತೀಚೆಗೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಶಿವಕುಮಾರ್ ಅವರನ್ನು ಮತ್ತೆ ವಿಚಾರಣೆಗೆ ಕರೆದಿದ್ದರು.

ಇದನ್ನೂ ಓದಿ: Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕಣ ಕ್ಷಣಕ್ಷಣದ ಸುದ್ದಿಗಳು: ಬಿಜೆಪಿ ಸಭೆ ನಡೆಸಿದ ಅಮಿತ್‌ ಶಾ

Exit mobile version