Site icon Vistara News

Karnataka Election 2023: ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿ, ರಾಜಧಾನಿಯಲ್ಲಿ ಇಂದು ನಮೋ, ರಾಹುಲ್‌, ಪ್ರಿಯಾಂಕ

Rama Krishna mutt Swamijis gifted narendra Modi During Roadshow in bengaluru

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದೆ. ಹೀಗಾಗಿ ಇಂದು ಮತ್ತು ನಾಳೆ ಕಣದಲ್ಲಿ ಇರುವ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯಲಿದೆ.

ರಾಜಧಾನಿಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಸುತ್ತಿನ ಮೆಗಾ ರೋಡ್‌ ಶೋ ನಡೆಯಲಿದೆ. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೂಡ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅದಕ್ಕೂ ಮುನ್ನವೇ ಪ್ರಚಾರ ಅಂತ್ಯವಾಗಬೇಕಿದೆ. ಇಂದಿನಿಂದ ಝಣಝಣ ಕಾಂಚನ ಪಾಲಿಟಿಕ್ಸ್ ಶುರುವಾಗಲಿದೆ.

ರಾಜ್ಯ ವಿಧಾನ ಸಭಾ ಚುನಾವಣೆಯನ್ನ ಮೋದಿ ಮತ್ತು ಅಮಿತ್ ಶಾ ಪ್ರತಿಷ್ಠೆಯಾಗಿ ತೆಗೆದುಕೊಂಡಂತಿದೆ. ರಾಜ್ಯದಲ್ಲಿ 113 ಸ್ಥಾನಗಳ ಗಡಿ ದಾಟಿಸಲು ಬೆಂಗಳೂರಿನಲ್ಲಿ 20 ಕ್ಷೇತ್ರಗಳನ್ನಾದರೂ ಗೆಲ್ಲುವ ಪ್ಲಾನ್ ಮಾಡಿದ್ದಾರೆ ಉಭಯ ನಾಯಕರು. ಬೆಂಗಳೂರಿನಲ್ಲಿ ಇಪ್ಪತ್ತು ಸ್ಥಾನ ಗೆದ್ದರೆ ನೂರರ ಗಡಿ ದಾಟುವುದು ಸುಲಭ. ನೂರು ದಾಟಿದರೆ ನಮ್ಮದೇ ಸರ್ಕಾರ ಎನ್ನುತ್ತಿದ್ದಾರೆ ಅಮಿತ್ ಶಾ.

ಹೀಗಾಗಿ ಉಭಯ ನಾಯಕರೂ ರಾಜಧಾನಿ ನಗರವನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಇಂದು ಮೂರನೇ ರೋಡ್ ಶೋ ಮಾಡುತ್ತಿದ್ದಾರೆ. ಏಪ್ರಿಲ್ 29ರಂದು ಸುಂಕದಕಟ್ಟೆವರೆಗೂ ರೋಡ್ ಶೋ ನಡೆಸಿದ್ದರು. ನಿನ್ನೆ ಬೊಮ್ಮನಹಳ್ಳಿಯಿಂದ ಮಲ್ಲೇಶ್ವರಂ ವರೆಗೂ 26 ಕಿ.ಮೀ ಐತಿಹಾಸಿಕ ರೋಡ್ ಶೋ ಮಾಡಿದ್ದರು.

ಇಂದು ಕೆ.ಆರ್ ಪುರಂ, ಸಿ.ವಿ ರಾಮನ್ ನಗರ, ಶಿವಾಜಿನಗರ, ಶಾಂತಿನಗರದಲ್ಲಿ ರಸ್ತೆ ಸಂಚಲನ ನಡೆಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯಿಂದ 11.30ರವರೆಗೂ ಮೋದಿ ರೋಡ್‌ ಶೋ ನಡೆಸಲಿದ್ದು, ಸುಮಾರು 8 ಕಿ.ಮೀ ಓಡಾಡಲಿದ್ದಾರೆ. ನಗರದಲ್ಲಿ ಎಲೆಕ್ಷನ್ ಟ್ರೆಂಡ್ ಬದಲಿಸಲು ಮೋದಿ ಮಾಸ್ಟರ್ ಪ್ಲಾನ್ ಇದು ಎನ್ನಲಾಗಿದೆ. ಬಹಿರಂಗ ಪ್ರಚಾರಕ್ಕೆ ಒಂದು ದಿನ‌ ಮೊದಲೇ ಬೆಂಗಳೂರು ರೋಡ್ ಶೋ ಮುಗಿಯಲಿದೆ.

ರಾಹುಲ್‌, ಪ್ರಿಯಾಂಕ ಆಗಮನ

ಪ್ರಧಾನಿ ಮೋದಿಯವರ ಮೆಗಾ ರೋಡ್ ಶೋಗೆ ತಿರುಗೇಟು ಕೊಡಲು ಕಾಂಗ್ರೆಸ್‌ ಕೂಡ ಸ್ಕೆಚ್‌ ಹಾಕಿದೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕೂಡ ಇಂದು ರೋಡ್‌ ಶೋ ನಡೆಸಲಿದ್ದಾರೆ. ಮಹಾದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿ ಅವರ ರೋಡ್ ಶೋ ನಡೆಯಲಿದೆ.

ಪುಲಕೇಶಿ ನಗರದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಶಿವಾಜಿನಗರ ಬಹಿರಂಗ ಸಮಾವೇಶದಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Top 10 Cities In the World With Most Millionaires: ಹೆಚ್ಚು ಮಿಲಿಯನೇರ್‌ಗಳನ್ನು ಹೊಂದಿರುವ ವಿಶ್ವದ ಟಾಪ್‌ 10 ನಗರಗಳು

Exit mobile version