ಬೆಂಗಳೂರು, ಕರ್ನಾಟಕ: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ಮುಗಿದ ಬೆನ್ನಲ್ಲೇ ಹಲವು ಮಾಧ್ಯಮ ಮತ್ತು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಯನ್ನು ಬಹಿರಂಗ ಮಾಡಿದ್ದು, ಅತಂತ್ರ ವಿಧಾನಸಭೆ ಫಲಿತಾಂಶ ದೊರೆಯಬಹುದು ಎಂದು ಹೇಳಿವೆ. ಮತಗಟ್ಟೆಗಳ ಸಮೀಕ್ಷೆ ನಿಜವಾದರೆ ಜೆಡಿಎಸ್ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಎಲ್ಲ ಸಾಧ್ಯತೆಗಳಿವೆ. ಈ ಮಧ್ಯೆ ವಿಸ್ತಾರ ನ್ಯೂಸ್ ಪೋಲ್ ಆಫ್ ಪೋಲ್ ಲೆಕ್ಕಾಚಾರ ಕೂಡ ಅತಂತ್ರ ವಿಧಾನಸಭೆಯನ್ನು ಊಹೆ ಮಾಡಿದ್ದು, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ(Vistara News Poll of Polls).
ವಿಸ್ತಾರ್ ನ್ಯೂಸ್ ಪೋಲ್ ಆಫ್ ಪೋಲ್ಸ್ ಹೀಗಿದೆ….
ಬಿಜೆಪಿ: 84 – 97
ಕಾಂಗ್ರೆಸ್: 95- 108
ಜೆಡಿಎಸ್: 22- 30
ಇತರರು: 02- 05
ರಿಪಬ್ಲಿಕ್ ಮತ್ತು ಝೀ ನ್ಯೂಸ್ ಮತಗಟ್ಟೆ ಸಮೀಕ್ಷೆ ಹೀಗಿದೆ….
ಝೀ ನ್ಯೂಸ್
ಬಿಜೆಪಿ: 79 – 89
ಕಾಂಗ್ರೆಸ್: 108-118
ಜೆಡಿಎಸ್: 25-35
ಇತರ: 2- 4
ರಿಪಬ್ಲಿಕ್ ಟಿವಿ
ಬಿಜೆಪಿ: 85 – 100
ಕಾಂಗ್ರೆಸ್: 94- 108
ಜೆಡಿಎಸ್: 24-32
ಇತರ: 2-6
ನ್ಯೂಸ್ ನೇಷನ್ ಮತ್ತು ಸಿಜಿಎಸ್ ಮತಗಟ್ಟೆ ಸಮೀಕ್ಷೆ
ಬಿಜೆಪಿ- 114
ಕಾಂಗ್ರೆಸ್- 86
ಜೆಡಿಎಸ್- 21
ಇತರ-3
ಎಬಿಪಿ-ಸಿ ವೋಟರ್ ಮತಗಟ್ಟೆ ಸಮೀಕ್ಷೆ
ಬಿಜೆಪಿ: 66 – 86
ಕಾಂಗ್ರೆಸ್: 81- 101
ಜೆಡಿಎಸ್: 20- 27
ಇತರರು: 0-3
ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ
ಬಿಜೆಪಿ-85
ಕಾಂಗ್ರೆಸ್-113
ಜೆಡಿಎಸ್-23
ಇತರ-3
ಟಿವಿ9-ಸಿವೋಟರ್ ಸಮೀಕ್ಷೆ ಹೇಳುವುದೇನು?
ಟಿವಿ 9 ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಯು 83-95, ಕಾಂಗ್ರೆಸ್ 100-112, ಜೆಡಿಎಸ್ 21-29 ಹಾಗೂ ಪಕ್ಷೇತರರು 02-06 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.
ಬಿಜೆಪಿಗೆ ಹೆಚ್ಚು ಕ್ಷೇತ್ರ ಎಂದ ಜನ್ ಕೀ ಬಾತ್
ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಬಿಜೆಪಿಯು 94-117, ಕಾಂಗ್ರೆಸ್ 91-106, ಜೆಡಿಎಸ್ 14-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ, ಇಲ್ಲೂ ಕಾಂಗ್ರೆಸ್ 100ರ ಗಡಿ ದಾಟುತ್ತದೆ ಎಂದು ಸಮೀಕ್ಷೆ ತಿಳಿಸಿರುವುದು ಜಿದ್ದಾಜಿದ್ದಿಯ ಕದನ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪೋಲ್ ಸ್ಟ್ರ್ಯಾಟ್ (POLLSTRAT) ಸಮೀಕ್ಷೆ
ಪೋಲ್ ಸ್ಟ್ರ್ಯಾಟ್ ಮತಗಟ್ಟೆ ಸಮೀಕ್ಷೆ ಕೂಡ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂದು ತಿಳಿಸಿದೆ. ಆಡಳಿತಾರೂಢ ಬಿಜೆಪಿಯು 88-98, ಕಾಂಗ್ರೆಸ್ 99-109, ಜೆಡಿಎಸ್ 21-26 ಹಾಗೂ ಜೆಡಿಎಸ್ 2-4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ತಿಳಿಸಿದೆ.
ಟೈಮ್ಸ್ ನೌ ಪೋಲ್ ಆಫ್ ಪೋಲ್ಸ್
ಟೈಮ್ಸ್ ನೌ ವಾಹಿನಿಯ ಪೋಲ್ ಆಫ್ ಪೋಲ್ಸ್ ಮತಗಟ್ಟೆ ಸಮೀಕ್ಷೆಯೂ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಲಭಿಸಲಿವೆ ಎಂದು ತಿಳಿಸಿದೆ. ಬಿಜೆಪಿ 94, ಕಾಂಗ್ರೆಸ್ 103, ಜೆಡಿಎಸ್ 25 ಹಾಗೂ ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದೆ. ಆದರೆ, ಯಾವ ಪಕ್ಷವೂ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿಲ್ಲ ಎಂಬುದು ಗಮನಾರ್ಹವಾಗಿದೆ.
ರಿಪಬ್ಲಿಕ್ ಟಿವಿ ಪೋಲ್ ಆಫ್ ಪೋಲ್ಸ್
ರಿಪಬ್ಲಿಕ್ ಟಿವಿಯ ಪೋಲ್ ಆಫ್ ಪೋಲ್ಸ್‌ನಲ್ಲಿಯೂ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ. ಆದರೆ, ಬಹುಮತಕ್ಕೆ ಬೇಕಾದ ಸಂಖ್ಯೆ ದಾಟುವಲ್ಲಿ ಕಾಂಗ್ರೆಸ್ ವಿಫಲವಾಗಲಿದೆ ಎಂಬುದು ಪೋಲ್ ಆಫ್ ಪೋಲ್ಸ್ ತಿಳಿಸಿದೆ. ಬಿಜೆಪಿ 91, ಕಾಂಗ್ರೆಸ್ 105, ಜೆಡಿಎಸ್ 27 ಹಾಗೂ ಜೆಡಿಎಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ: 62 – 80
ಕಾಂಗ್ರೆಸ್: 122- 140
ಜೆಡಿಎಸ್: 20- 25
ಇತರರು: 00- 03