Site icon Vistara News

Karnataka Election: ಸಿದ್ದರಾಮಯ್ಯ, ಡಿಕೆಶಿ ಜತೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ 26 ಸಚಿವರು; ಯಾರವರು?

Priyanka and Rahul gandhi invited to swearing in ceremony by Siddaramaiah and DK Shivakumar

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಹೊಸ ಸರ್ಕಾರ (Congress government) ಶನಿವಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava stadium) ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತ್ಯಾವರಚಂದ್‌ ಗೆಹ್ಲೋಟ್‌ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಲಿದ್ದಾರೆ. ಈ ನಡುವೆ, ಅವರ ಜತೆ ಸುಮಾರು 26 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇ 10ರಂದು ಮತದಾನ ನಡೆದು, ಮೇ 13ರಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಬಿಜೆಪಿ 66, ಜೆಡಿಎಸ್‌ 19 ಮತ್ತು ಇತರರು ನಾಲ್ಕು ಸ್ಥಾನಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಲ್ಲಿ ಸಿಎಂ ಯಾರಾಗಬೇಕು ಎನ್ನುವ ಕುರಿತು ಐದು ದಿನಗಳ ಕಾಲ ತೀವ್ರ ಸಮಾಲೋಚನೆಗಳು ನಡೆದು ಸಿದ್ದರಾಮಯ್ಯ ಅವರಿಗೆ ಪಟ್ಟ ಒಲಿದಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಡಿಸಿಎಂ ಹುದ್ದೆ ನೀಡಲು ನಿರ್ಧರಿಸಲಾಗಿದೆ. ಗುರುವಾರ ದಿಲ್ಲಿಯಿಂದ ಬಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಶಾಸಕಾಂಗ ಪಕ್ಷ ಸಭೆ ನಡೆಸಿ ಅದರಲ್ಲಿ ಶಾಸಕಾಂಗ ಪಕ್ಷ ನಾಯಕನ ಆಯ್ಕೆ ಮಾಡಲಾಯಿತು. ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಲಾಯಿತು.

ಮಂತ್ರಿಗಳ ಪಟ್ಟಿ ಅಂತಿಮಕ್ಕಾಗಿ ಸಿದ್ದು, ಡಿಕೆಶಿ ದೆಹಲಿಗೆ

ಸಿಎಂ, ಡಿಸಿಎಂ ಆಯ್ಕೆಯ ಬಳಿಕ ಅತ್ಯಂತ ಮಹತ್ವದ್ದಾದ ಮಂತ್ರಿಗಳು ಯಾರು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಶುಕ್ರವಾರ ಮಧ್ಯಾಹ್ನ ದಿಲ್ಲಿಗೆ ತೆರಳಿದ್ದರು. ಅವರ ಜತೆಗೆ ಮಂತ್ರಿ ಪಟ್ಟದ ಆಕಾಂಕ್ಷಿಗಳ ದೊಡ್ಡ ತಂಡವೇ ಅಲ್ಲಿಗೆ ಧಾವಿಸಿತ್ತು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಜತೆಯಾಗಿ ಮತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಇದಾದ ಬಳಿಕ ಮಂತ್ರಿಗಳ ಒಂದು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದಾದ ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರೂ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಇಬ್ಬರೂ ಬರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಹಾಗಿದ್ದರೆ ಸಂಪುಟ ಸೇರಲಿರುವ ಶಾಸಕರು ಯಾರು?

ಸಿದ್ದರಾಮಯ್ಯ ಅವರ ಸಂಪುಟಕ್ಕ ಮೊದಲ ಹಂತದಲ್ಲಿ 25 ಶಾಸಕರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಐಸಿಸಿ ಮೂಲಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ 34 ಮಂದಿಗೆ ಹುದ್ದೆ ನೀಡಲು ಅವಕಾಶವಿದೆ. ಇದೀಗ ಸಿಎಂ, ಡಿಸಿಎಂ ಹಾಗು 25 ಸಚಿವರು ಶನಿವಾರದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರ ಎಂಬ ಮಾತು ಕೇಳಿಬಂದಿದೆ.

25 ಸಂಭಾವ್ಯ ಸಚಿವರಲ್ಲಿ ಹಳಬರಿಗೇ ಹೆಚ್ಚಿನ ಆದ್ಯತೆ ಸಿಕ್ಕಿದಂತೆ ಕಾಣಿಸುತ್ತಿದೆ. ಹೊಸರಕ್ತಕ್ಕೆ ಅವಕಾಶ ಇದ್ದಂತಿಲ್ಲ. ವರ್ಚಸ್ಸು ಮತ್ತು ಸಂಘಟನೆಗಿಂತ ಜಾತಿಗೇ ಮಣೆ ನೀಡಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರು ಸ್ಪೀಕರ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಭಾವ್ಯ ಸಚಿವರು ಇವರು

1.ರಾಮಲಿಂಗಾರೆಡ್ಡಿ
2.ಕೆ.ಜೆ ಜಾರ್ಜ್
3.ಕೃಷ್ಣಬೈರೇಗೌಡ
4.ದಿನೇಶ್ ಗುಂಡೂರಾವ್
5.ಜಮೀರ್ ಅಹಮದ್ ಖಾನ್
6.ಶರತ್ ಬಚ್ಚೇಗೌಡ
7.ಚಲುವರಾಯಸ್ವಾಮಿ
8. ಎಂ.ಸಿ. ಸುಧಾಕರ್‌
9. ಎಚ್ ಸಿ ಮಹಾದೇವಪ್ಪ
10.ಪುಟ್ಟರಂಗ ಶೆಟ್ಟಿ
11. ಯುಟಿ ಖಾದರ್
12. ಮಧುಬಂಗಾರಪ್ಪ
13. ಆರ್ ವಿ ದೇಶಪಾಂಡೆ
14.ಶಾಮನೂರು ಮಲ್ಲಿಕಾರ್ಜುನ
15.ಸಲೀಂ ಅಹಮದ್
16. ಜಗದೀಶ್ ಶೆಟ್ಟರ್
17. ಸಂತೋಷ್ ಲಾಡ್
18.ಸತೀಶ್ ಜಾರಕಿಹೊಳಿ
19.ಲಕ್ಷ್ಮೀ ಹೆಬ್ಬಾಳ್ಕರ್
20.ಲಕ್ಷ್ಮಣ ಸವದಿ
21. ಕೆ.ಎಚ್ ಮುನಿಯಪ್ಪ
22.ಡಾ.ಜಿ ಪರಮೇಶ್ವರ್
23.ಕೆ.ಎನ್ ರಾಜಣ್ಣ
24.ಎಂಬಿ ಪಾಟೀಲ್
25.ಶರಣು ಪ್ರಕಾಶ್ ಪಾಟೀಲ್
26.ಪ್ರಿಯಾಂಕಾ ಖರ್ಗೆ

ಯಾವ ಜಾತಿಗೆ ಎಷ್ಟು ಸ್ಥಾನ?

ಲಿಂಗಾಯತ-6, ಒಕ್ಕಲಿಗ- 4, ಬ್ರಾಹ್ಮಣ – 2, ಮುಸ್ಲಿಂ – 3,
ಕ್ರಿಶ್ಚಿಯನ್ – 1, ಎಸ್ಸಿ – ಬಲ – 2, ಎಸ್ಸಿ ಎಡ – 2, ಬೋವಿ – 1,
ಉಪ್ಪಾರ – 1, ನಾಯಕ – 1, ಎಸ್‌ಟಿ-2

ಇದನ್ನೂ ಓದಿ: Karnataka CM : ನಾಳೆ ಸಿಎಂ ಪದಗ್ರಹಣ; ರಸ್ತೆ ಸಂಚಾರ ಬದಲಾವಣೆಯ ಫುಲ್‌ ಡಿಟೇಲ್ಸ್‌ ಇಲ್ಲಿದೆ

karnataka-election: 26 Ministers to be sworn in along with CM and DCM?

Exit mobile version