ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದಷ್ಟೂ ಬಿಜೆಪಿಯ ಮತಗಳು ಹೆಚ್ಚಾಗುತ್ತವೆ. ಮುಖ್ಯಮಂತ್ರಿ ಆದಾಗ ಬೈದರು, ಅವರು ಮೋದಿ ಮೂರು ಬಾರಿ ಮುಖ್ಯಮಂತ್ರಿ ಆದರು. ಪ್ರಧಾನ ಮಂತ್ರಿಯೂ ಆದರು ಇದೀಗ ವಿಷ ಸರ್ಪ ಎಂಬ ಹೇಳಿಕೆ ಮೂಲಕ ಜನರ ಭಾವನೆ ಕೆರಳುಸತ್ತಿದ್ದಾರೆ. ಜನರೇ ಅವರಿಗೆ ಈ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.
ಅವರು ಶುಕ್ರವಾರ ಹುಬ್ಬಳ್ಳಿಯ ತಮ್ಮ ಆದರ್ಶ ನಗರದ ನಿವಾಸ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನವರು ತಮ್ಮ ನೂರು ವರ್ಷಗಳ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ. ಇನ್ನೂ ಅಧಿಕಾರದ ಮದದಲ್ಲಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ಜನರನ್ನು ತಮ್ಮ ಗುಲಾಮರೆಂದು ತಿಳಿದುಕೊಂಡಿದ್ದಾರೆ. ಮತ ಬ್ಯಾಂಕ್ ಎಂದು ತಿಳಿದುಕೊಂಡು ಏನು ಬೇಕಾದರೂ ಮಾತಾಡಿದರೆ ನಡೆಯುತ್ತದೆ ಎಂಬ ಅಮಲಿನಲ್ಲಿ ಇದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು ಬೊಮ್ಮಾಯಿ.
ಸಿದ್ದರಾಮಯ್ಯ, ಖರ್ಗೆ ಮಾತಿನಿಂದ ನೋವಾಗಿದೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲಿಂಗಾಯತ ಭ್ರಷ್ಟ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತಾಡಿರೋದು ಎಲ್ಲಕಿಂತ ಹೆಚ್ಚು ನೋವು ಕೊಟ್ಟಿದೆ. ಸಿದ್ದರಾಮಯ್ಯ ಹಾಗೂ ಖರ್ಗೆ ಅವರು 50 ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ. ಕೊನೆಯ ಹಂತದಲ್ಲಿ ಗೌರವ ಯುತವಾಗಿ ನಡೆದುಕೊಂಡರೆ ಅವರಿಗೆ ಶೋಭೆ ತರುತ್ತದೆ ಎಂದರು. ಇಲ್ಲದಿದ್ದರೆ ಜನ ಇಷ್ಟು ವರ್ಷ ಇವರು ಏನು ಮಾಡಿದರು ಎಂದು ಜನ ಕೇಳುತ್ತಾರೆ ಎಂದರು.
ಕಾಂಗ್ರೆಸ್ ಮತ ಬ್ಯಾಂಕ್ ಛಿದ್ರವಾಗಿದೆ
ಸಿದ್ದರಾಮಯ್ಯ ಅವರು ನನ್ನನ್ನು ಗುರಿಯಾಗಿಸುವುದು ಸಹಜ. ಕಾಂಗ್ರೆಸ್ ನವರ ಮತ ಬ್ಯಾಂಕ್ ಆಗಿದೆ. ಅವರ ಮತ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು. ಅವರ ಕಾಲ ಕೆಳಗೆ ಇದ್ದ ಮತಗಳು ಸರಿದು ಹೋಗಿದೆ ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಅಣೆಕಟ್ಟು ಒಡೆದಿದೆ
ಎಸ್ಸಿ, ಎಸ್ಟಿ, ಒಬಿಸಿ ಮತಗಳು ಅವರ ಕೈ ತಪ್ಪಿ ಅವರ ಅಣೆಕಟ್ಟು ಒಡೆದಿದೆ ಎಂದ ಸಿಎಂ, ಸಿದ್ದರಾಮಯ್ಯ ಇದೀಗ ಡಿಕೆ ಶಿವಕುಮಾರ್ ಗೆ ಪೈಪೋಟಿ ಕೊಡುತ್ತಿದ್ದಾರೆ. ಆ ಮಟ್ಟಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ. ಆಂತರಿಕವಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಜೊತೆ ಪೈಪೋಟಿಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ 8 ಸಾವಿರ ಕೋಟಿ ರೂ.ಗಳ ಭ್ರಷ್ಟಾಚಾರದ ಆರೋಪ ಇದೆ. ಅದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ಹೀಗೆ ಮಾತನಾಡುತ್ತಿದ್ದಾರೆ ಎಂದರು.