Site icon Vistara News

Karnataka Election : ಬಿಜೆಪಿಗೆ ಬಹುಮತ ಬರಲ್ಲ; ಆದ್ರೆ ಸರ್ಕಾರ ಮಾಡೋದು ನಾವೇ: ಸಿಪಿವೈ ಆಡಿಯೊ ವೈರಲ್‌

cp yogeshwar

ರಾಮನಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಬಿಜೆಪಿಗೆ ಬಹುಮತ ಬರುವುದಿಲ್ಲ. ಜನಾಭಿಪ್ರಾಯದಿಂದ ಸರ್ಕಾರ ಬರಲಾರದು. ಆದರೆ, ಸರ್ಕಾರ ರಚನೆ ಮಾಡೋದು ಮಾತ್ರ ನಾವೇ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಮಾತನಾಡಿರು ಆಡಿಯೊ ವೈರಲ್‌ ಆಗಿದೆ. ಅಲ್ಲದೆ, ಆಪರೇಷನ್‌ ಕಮಲವನ್ನು ಈ ಬಾರಿ ಚುನಾವಣೆ ಬಳಿಕ ಮಾಡುವುದಿಲ್ಲ. ಚುನಾವಣೆಗೆ ಮೊದಲೇ ನಡೆಯುತ್ತದೆ ಎಂದೂ ಹೇಳಿಕೊಂಡಿದ್ದಾರೆ.

ಈ ಬಾರಿ ಬಿಜೆಪಿಗೆ ಜನಾಭಿಪ್ರಾಯ ಸಿಗದಿದ್ದರೂ, 2023ಕ್ಕೆ ಬಿಜೆಪಿ ಸರ್ಕಾರವನ್ನು ಮಾಡುತ್ತೇವೆ. ಮಾವು ಮರದಲ್ಲೇ ಹಣ್ಣು ಆಗುವುದಕ್ಕೂ, ಕೆಮಿಕಲ್ ಹಾಕಿ ಹಣ್ಣು ಮಾಡುವುದಕ್ಕೂ ವ್ಯತ್ಯಾಸ ಇದೆ. ಕಾಂಗ್ರೆಸ್ ಈಗ ಸ್ಟ್ರಾಂಗ್ ಇಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪಟ್ಟ ಕಟ್ಟಲು ದೊಡ್ಡ ನಾಯಕರಾದ ಮಾಜಿ ಡಿಸಿಎಂ ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಷ್ಟ ಇಲ್ಲ ಎಂದು ಸಿಪಿವೈ ಆಡಿಯೊದಲ್ಲಿ ಮಾತನಾಡಿಕೊಂಡಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಬ್ಬರೂ ನೇರ ಸ್ಪರ್ಧಿಯಾಗಿದ್ದಾರೆ. ಸಂಕ್ರಾಂತಿ ಹಬ್ಬ ಆದ ಮೇಲೆ ಮೈಸೂರು ಭಾಗದಲ್ಲಿ ಬಹಳ ಬದಲಾವಣೆಯಾಗಲಿದೆ. ಮೈಸೂರು ಭಾಗದಿಂದ ಕಾಂಗ್ರೆಸ್ ದೊಡ್ಡ ಲೀಡರ್‌ಗಳು ಬಿಜೆಪಿಗೆ ಬರಲಿದ್ದಾರೆ. ಅವರಿಂದ ನಾಲ್ಕೈದು ಕ್ಷೇತ್ರಗಳಲ್ಲಿ ಎರಡ್ಮೂರು ಸಾವಿರ ಮತಗಳು ಪ್ಲಸ್ ಆಗಲಿವೆ. ಮಂಡ್ಯದಲ್ಲಿ ಒಬ್ಬರು, ಕೋಲಾರದಲ್ಲಿ ಒಬ್ಬರು ಪಕ್ಷ ಸೇರ್ಪಡೆ ಆಗುತ್ತಾರೆ. ಅವರು ಏಳೆಂಟು ಬಾರಿ ಸಂಸದರಾಗಿ, ಸಚಿವರಾಗಿದ್ದವರು ಎಂದು ಸಿಪಿವೈ ಹೇಳಿದ್ದಾರೆ. ಆ ಮೂಲಕ ಕೇಂದ್ರ ಮಾಜಿ ಸಚಿವ ಕೆ.ಎಚ್.‌ ಮುನಿಯಪ್ಪ ಅವರ ಬಗ್ಗೆ ಹೆಸರನ್ನು ಹೇಳದೇ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ED raid | ಮಂಗಳೂರಿನ ಉದ್ಯಮಿಗೆ ಸೇರಿದ 17 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

ಈ ರೀತಿಯಾಗಿ ಹಲವಾರು ಮಂದಿ ಜನರ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವು ಸಾಧಿಸಬಹುದು. ಅಂತವರೆಲ್ಲ ರಾಜ್ಯ ರಾಜಕಾರಣದಲ್ಲಿ ಇರಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಗೆಲ್ಲಬೇಕು ಎಂದು ಯೋಗೇಶ್ವರ್‌ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಗೆದ್ದ ಮೇಲೆ ಮುಖ್ಯಮಂತ್ರಿ ಆಗಲೇಬೇಕು. ಆದರೆ ಕಾಂಗ್ರೆಸ್ ಪಕ್ಷದವರೇ ಬಿಡಲ್ಲ. ಕಾಂಗ್ರೆಸ್‌ನಲ್ಲಿ ಪಾಪ್ಯುಲರ್ ಲೀಡರ್ ಅಂದರೆ ಸಿದ್ದರಾಮಯ್ಯ ಎಂದು ಅವರ ಗೆಲುವಿನ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಸರ್ಕಾರ ರಚನೆ ಬಳಿಕ ಅಪರೇಷನ್ ಕಮಲವಿಲ್ಲ. ಚುನಾವಣೆ ಮೊದಲೇ ಆಪರೇಷನ್ ಕಮಲ ಎಂದು ಸಿ.ಪಿ. ಯೋಗೇಶ್ವರ್ ಮಾತನಾಡಿರುವ ಆಡಿಯೊ ಲೀಕ್ ಆಗಿದೆ.

ಜೆಡಿಎಸ್‌ ಬಗ್ಗೆ ಭವಿಷ್ಯ
ಎಷ್ಟು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಎಂಬ ಸಂಗತಿಯನ್ನೂ ಆಡಿಯೊದಲ್ಲಿ ಸಿ.ಪಿ. ಯೋಗೇಶ್ವರ್‌ ಚರ್ಚೆ ನಡೆಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಮೂರು ಸ್ಥಾನಗಳಲ್ಲಿ ಒಂದನ್ನು ಜೆಡಿಎಸ್‌ ಸೋಲಲಿದೆ. ಸ್ವತಃ ತಮ್ಮ ಕ್ಷೇತ್ರದಲ್ಲಿ ನಾನು ಸೋಲಬಹುದು, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಗೆಲ್ಲಬಹುದು. ಆದರೆ, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಸೋಲಲಿದೆ ಎಂದು ಹೇಳಿದ್ದಾರೆ. ಜೆಡಿಎಸ್‌ನ ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಡಾ. ಶ್ರೀನಿವಾಸ್ ಮೂರ್ತಿ ನೆಲಮಂಗಲ, ಬೆಂಗಳೂರು ಗನ್ ಮಂಜು, ಅನ್ನದಾನಿ, ಮಂಡ್ಯ ಶ್ರೀನಿವಾಸ್, ಟಿ. ನರಸೀಪುರ, ಸಾರಾ ಮಹೇಶ್ ಅವರಲ್ಲಿ ಕೆಲವಷ್ಟು ಮಂದಿ ಸೋಲುತ್ತಾರೆ. ಮತ್ತೆ ಕೆಲವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಸಿಪಿವೈ ಹೇಳಿದ್ದಾರೆ.

ಇದನ್ನೂ ಓದಿ | Karnataka Election | ಮಾಜಿ ಸಚಿವ ಎಚ್.ನಾಗೇಶ್ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಸ್ಪರ್ಧೆ ಎಲ್ಲಿಂದ?

ಹಾಲಿ ಜೆಡಿಎಸ್‌ ಶಾಸಕರಲ್ಲಿ ಒಟ್ಟು 12 ಜನರ ಸೋಲು ಖಚಿತ. ಉತ್ತರ ಕರ್ನಾಟಕದಲ್ಲಿ ಐವರು ಜೆಡಿಎಸ್ ಶಾಸಕರು ಇದ್ದಾರೆ. ಐದು ಕ್ಷೇತ್ರಗಳಲ್ಲಿ ಮೂರು ಜನ ಈಗಾಗಲೇ ವಾಷ್ಔಟ್ ಆಗಿದ್ದಾರೆ.‌ ಉಳಿದವರು ಬಂಡೆಪ್ಪ ಕಾಶೆಂಪೂರ್ ಹಾಗೂ ಇನ್ನೊಬ್ಬರು. ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ಇದೆ. ವೀರಭದ್ರಯ್ಯ ಮಧುಗಿರಿಯವರು. ಬೇಲೂರು ಲಿಂಗೇಶ್ ಸೋಲುತ್ತಾನೆ. ನಮ್ಮ ಜಿಲ್ಲಾಧ್ಯಕ್ಷ ಸುರೇಶ್ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಇನ್ನು ಚಿಂತಾಮಣಿಯಲ್ಲಿ ಸುಧಾಕರ್ ರೆಡ್ಡಿ ಔಟ್ ಎಂದೂ ಆಡಿಯೊದಲ್ಲಿ ಸಿಪಿವೈ ಹೇಳಿದ್ದಾರೆ.

ಸಕಲೇಶಪುರದಲ್ಲಿ ಎಚ್‌.ಕೆ. ಕುಮಾರಸ್ವಾಮಿ ನಮ್ಮಿಂದ ಕಳೆದ ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಅಲ್ಲಿಗೆ ಒಳ್ಳೆಯ ಕ್ಯಾಂಡಿಡೇಟ್‌ ಹಾಕುತ್ತೇವೆ. ಅವರು ಸೋಲುತ್ತಾರೆ. ಜೆಡಿಎಸ್‌ ಒಟ್ಟು 25 ಸ್ಥಾನದಲ್ಲಿ ಸೋಲುತ್ತದೆ ಎಂದು ಸಿ.ಪಿ. ಯೋಗೇಶ್ವರ್‌ ಮಾತನಾಡಿರುವ ಆಡಿಯೊ ವೈರಲ್ ಆಗಿದೆ.

ಇದನ್ನೂ ಓದಿ | Water Contamination | ಹೊಸಪೇಟೆಯಲ್ಲಿ ಕಲುಷಿತ ನೀರು ಸೇವನೆ, ಮತ್ತೆ 25 ಮಂದಿ ಅಸ್ವಸ್ಥ

Exit mobile version