Site icon Vistara News

Karnataka Election : ಬಿಟ್ಟು ಹೋದವರಿಂದ ಟೀಮ್‌ಗೆ ಸಮಸ್ಯೆ ಇಲ್ಲ, ಈ ಸಲ ಕಪ್‌ ನಮ್ದೇ ಎಂದ ಪ್ರಲ್ಹಾದ್‌ ಜೋಶಿ!

Absolutely no: Pralhad Joshi denies Karnataka CM aspirations, prefers to work under PM Modi

ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ : ʻʻಹಳೇ ಪ್ಲೇಯರ್‌ಗೆ ರಿಟೈರ್ಡ್ ಆಗಿ ಅಂದ್ವಿ. ಅದರೆ ಅವರು ನಮ್ಮ ಟೀಮ್‌ ಮತ್ತೊಂದು ಟೀಮ್‌ನಲ್ಲಿ ಆಡೋಕೆ ಹೋಗಿದ್ದಾರೆ. ಇದರಿಂದ ನಮಗೆ ಏನೂ ಸಮಸ್ಯೆ ಇಲ್ಲ. ಈ ಸಲ ಕಪ್ ನಮ್ದೇʼʼ ಎಂದು ವಿಧಾನಸಭಾ ಚುನಾವಣೆಯ (Karnataka Election) ಹೊಸ್ತಿಲಲ್ಲಿ ಪಕ್ಷದಿಂದ ಹಿರಿಯ ನಾಯಕ ಜಗದೀಶ್‌ ಶೆಟ್ಟರ್‌ (Jagadish Shettar) ಅವರ ನಿರ್ಗಮನವನ್ನು ಕ್ರಿಕೆಟ್‌ ಸ್ಟೈಲ್‌ನಲ್ಲಿ ವಿಶ್ಲೇಷಿಸಿದರು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad joshi). ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಜಗದೀಶ್‌ ಶೆಟ್ಟರ್‌ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಹಳ‌ ಬಹುಮತದಿಂದ ಗೆಲ್ಲಲಿದೆ. ನಾವು ಸೆಂಟ್ರಲ್ ಕ್ಷೇತ್ರದ ಬಗ್ಗೆ ನಾವು ಜಾಸ್ತಿ ತಲೆಕೆಡಿಸಿಕೊಂಡಿಲ್ಲ ಎಂದರು.

ಟಿಕೆಟ್‌ ಫೈನಲ್‌ ಮಾಡಿದ್ದು ಸಂತೋಷ್‌ ಅಲ್ಲ; ಅಮಿತ್‌ ಶಾ, ಮೋದಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್ ಸಂತೋಷ್ ಅವರು ತನಗೆ ಟಿಕೆಟ್‌ ತಪ್ಪಿಸಿದರು ಎಂಬ ಜಗದೀಶ್‌ ಶೆಟ್ಟರ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಗದೀಶ್‌ ಶೆಟ್ಟರ್‌ ಅವರ ಟಿಕೆಟ್‌ ಬಗ್ಗೆ ಅಮಿತ್ ಶಾ, ನರೇಂದ್ರ ಮೋದಿ ಮಟ್ಟದಲ್ಲಿ ನಿರ್ಧಾರವಾಗಿದೆ. ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಜೊತೆ ಮಾತಾಡಿದ್ದಾರೆ. ಹೊಸ ಜನರೇಷನ್ ಬರಬೇಕು, ನಾವು ನಿಮಗೆ ದೊಡ್ಡ ರೋಲ್ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ಜಗದೀಶ್‌ ಶೆಟ್ಟರ್‌ ಅವರು ಒಪ್ಪಿಲ್ಲ ಎಂದು ಪ್ರಲ್ಹಾದ್‌ ಜೋಶಿ ವಿವರಿಸಿದರು.

ʻʻನರೇಂದ್ರ ಮೋದಿ ಅವರ ಬಗ್ಗೆ ಉಲ್ಟಾ ಮಾತನಾಡಿದರೆ ವೋಟ್ ಸಿಗಲ್ಲ ಅನ್ನೋ ಕಾರಣಕ್ಕೆ ಹೀಗೆ ಮಾತಾಡ್ತಿದಾರೆ. ಬಿಎಲ್ ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ. ಪ್ರತಿಭಾನ್ವಿತ ಕಾರ್ಯಕರ್ತ, ಅವರಿಗೆ ಸಂಸಾರ ಮನೆ ಇಲ್ಲʼʼ ಎಂದ ಪ್ರಲ್ಹಾದ್‌ ಜೋಶಿ, ʻʻಶೆಟ್ಟರ್ ತರಹ ಯಾರೂ ಬಿಎಲ್ ಸಂತೋಷ ಬಗ್ಗೆ ಮಾತನಾಡಿಲ್ಲʼʼ ಎಂದು ಹೇಳಿದರು.

29ರಂದು ಕುಡಚಿಗೆ ಮೋದಿ

ಏಪ್ರಿಲ್‌ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುಡಚಿಗೆ ಬರಲಿದ್ದಾರೆ. ಇದಾದ ಮೇಲೆ ಇನ್ನೊಂದು ಕಾರ್ಯಕ್ರಮ ಮಾಡುವಂತೆ ನಾನು ವಿನಂತಿ ಮಾಡಿದ್ದೇನೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡಾ ಬರಲಿದ್ದಾರೆ ಎಂದು ಜೋಶಿ ಹೇಳಿದರು.

ಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ

ʻʻಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ. ಲಿಂಗಾಯತರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ʼʼ ಎಂದು ಹೇಳಿರುವ ಜೋಶಿ ಅವರು, ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯವನ್ನು ಭ್ರಷ್ಟ ಎಂದು ಹೇಳಿದ್ದಕ್ಕೆ ಕ್ಷಮೆ ಯಾಚಿಸಬೇಕುʼʼ ಎಂದು ಒತ್ತಾಯಿಸಿದರು.

ʻʻಕಾಂಗ್ರೆಸ್‌ನವರಿಗೆ, ರಾಹುಲ್ ಗಾಂಧಿ ಅವರಿಗೆ ಪ್ರೀತಿ ಇದ್ರೆ ಲಿಂಗಾಯತ ಮುಖ್ಯಮಂತ್ರಿ ಮಾಡ್ತೀವಿ ಎಂದು ಹೇಳಲಿ ನೋಡೋಣ. ನಾವು ಮೂರು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಚುನಾವಣೆಯ ನಂತರ ಲೀಡರ್ ಶಿಪ್ ಡಿಸೈಡ್ ಮಾಡ್ತೀವಿʼʼ ಎಂದು ಅವರು ಹೇಳಿದರು.

ಜೋಶಿ ಹೇಳೋದು ಸುಳ್ಳು, ನಾವು ಶೆಟ್ಟರ್‌ ಹೇಳೋದು ನಂಬ್ತೇವೆ ಎಂದ ಸಿದ್ದು

ಈ ನಡುವೆ ಪ್ರಹ್ಲಾದ್‌ ಜೋಶಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು, ʻʻಜಗದೀಶ್‌ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಪಕ್ಷ ಬಿಟ್ಟಿದ್ದು ಸಮುದ್ರದಲ್ಲಿನ ಒಂದು ಲೋಟ ನೀರು ತೆಗೆದಂತೆ ಎಂಬ ಬಿಜೆಪಿಗರ ಹೇಳಿಕೆ ಹತಾಶೆಯಿಂದ ಕೂಡಿದ್ದುʼʼ ಎಂದರು.

ʻʻಶೆಟ್ಟರ್ ಟಿಕೆಟ್ ಕೈ ತಪ್ಪಲು ಬಿ.ಎಲ್‌. ಸಂತೋಷ್‌ ಕಾರಣರಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನಿರ್ಧಾರ ಮಾಡಿದ್ದಾರೆʼʼ ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ʻʻಶೆಟ್ಟರ್ ಹೇಳೋದು ನಂಬಬೇಕೊ? ಜೋಶಿ ಹೇಳೋದು ನಂಬಬೇಕೊ? ಎಂದು ಪ್ರಶ್ನೆ ಮಾಡಿದರು. ʻʻನಾನು ನಂಬೋದು ಶೆಟ್ಟರ್ ಹೇಳೋದನ್ನು. ಜೋಶಿ ಸುಳ್ಳು ಹೇಳ್ತಾನೆ ಎಂದರು.

ಯಾರು ಟೀಮ್‌ ಬಿಟ್ಟರೂ ತೊಂದರೆ ಇಲ್ಲ, ಈ ಸಲ ಕಪ್‌ ನಮ್ದೇ ಎಂದ ಜೋಶಿ

Exit mobile version