Site icon Vistara News

ಯಾವ ಬೂತ್‌ನಲ್ಲಿ ಮತ ಹಾಕಬೇಕು? ರೂಟ್‌ ಯಾವುದು? ಎಲ್ಲ ಮಾಹಿತಿಗೂ ಇದೊಂದು App ಸಾಕು

Karnataka Election: ‘Chunavana’ App For All Queries Related To Polling, Voting Booths

Karnataka Election: ‘Chunavana’ App For All Queries Related To Polling, Voting Booths

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಜನರು ಕೂಡ ಮತದಾನಕ್ಕೆ ಸಜ್ಜಾಗಿದ್ದಾರೆ. ಆದರೆ, ತುಂಬ ಜನರಿಗೆ ತಮ್ಮ ಮತಗಟ್ಟೆ ಎಲ್ಲಿದೆ? ಅಲ್ಲಿಗೆ ಹೇಗೆ ಹೋಗಬೇಕು ಎಂಬುದು ಸೇರಿ ಹಲವು ಮಾಹಿತಿ ಇರುವುದಿಲ್ಲ. ನಗರಗಳಲ್ಲಿ ವಾಸಿಸುವವರಿಗಂತೂ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಲು, ಮತದಾರರ ಗೊಂದಲವನ್ನು ಬಗೆಹರಿಸಲೆಂದೇ ಚುನಾವಣೆ ಆಯೋಗವು ‘ಚುನಾವಣಾ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ. ಮೊಬೈಲ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು, ಮತಗಟ್ಟೆ, ಲೊಕೇಷನ್‌, ನ್ಯಾವಿಗೇಷನ್‌ನಿಂದ ಹಿಡಿದು ಎಲ್ಲ ಮಾಹಿತಿ ಒದಗಿಸುತ್ತದೆ. ಚುನಾವಣಾ App ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಬಳಕೆ ಹೇಗೆ? ಏನೆಲ್ಲ ಮಾಹಿತಿ ಲಭ್ಯ?

App ಡೌನ್‌ಲೋಡ್‌ ಮಾಡಿಕೊಂಡು, ಹೋಮ್‌ಪೇಜ್‌ನಲ್ಲಿಯೇ ಹೆಸರು ಅಥವಾ ವೋಟರ್‌ ಐಡಿಯ ಸಂಖ್ಯೆ ನಮೂದಿಸಿದರೆ ಮಾಹಿತಿ ಲಭ್ಯ

ಮತಗಟ್ಟೆ ಎಲ್ಲಿದೆ, ಅದರ ಲೊಕೇಷನ್‌ ಸೇರಿ ನ್ಯಾವಿಗೇಷನ್‌ ಸಹ ಸಿಗಲಿದೆ

ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಮಾಹಿತಿ ಕೂಡ App ನೀಡುತ್ತದೆ

ಮತಗಟ್ಟೆ ಸಮೀಪ ಇರುವ ಮೂಲ ಸೌಕರ್ಯ, ಪಾರ್ಕಿಂಗ್‌ ವ್ಯವಸ್ಥೆ ಮಾಹಿತಿ ಕೂಡ ಲಭ್ಯ

ಮತಗಟ್ಟೆಯಲ್ಲಿ ಸದ್ಯ ಎಷ್ಟು ಜನ ಕ್ಯೂನಲ್ಲಿ ನಿಂತಿದ್ದಾರೆ, ಜನಸಂದಣಿ ಎಷ್ಟಿದೆ ಎಂಬುದರ ಮಾಹಿತಿ ಅಡಕ

ವಿಶೇಷ ಚೇತನರಿಗೆ ವ್ಹೀಲ್‌ಚೇರ್‌ ಬುಕ್ಕಿಂಗ್‌ ಸಹ App ಮೂಲಕವೇ ಮಾಡಬಹುದು

ಆ್ಯಪ್ ಅಥವಾ ಚುನಾವಣೆ ಆಯೋಗದ ವೆಬ್‌ಸೈಟ್‌ ಸೌಲಭ್ಯ ಇಲ್ಲದವರು 1950 / 180042551950ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು

ವೋಟರ್‌ ಐಡಿ ಇಲ್ಲದವರಿಗೆ ಯಾವ ದಾಖಲೆ ಬೇಕು?

ಚುನಾವಣೆ ಆಯೋಗದ ಗುರುತಿನ ಚೀಟಿ ಅಥವಾ ವೋಟರ್‌ ಐಡಿ ಇಲ್ಲದಿದ್ದರೆ ಮತದಾನ ಮಾಡಲು ಆಗುವುದಿಲ್ಲ ಎಂಬ ಗೊಂದಲವೇ ಬೇಡ. ವೋಟರ್‌ ಐಡಿ ಇಲ್ಲದಿದ್ದರೂ, ಅಧಿಕಾರಿಗಳಿಗೆ ಈ ಗುರುತಿನ ಚೀಟಿಗಳನ್ನು ನೀಡಿ ಮತದಾನ ಮಾಡಬಹುದಾಗಿದೆ.

ಇವುಗಳಲ್ಲಿ ಒಂದು ಐಡಿ ಇದ್ದರೂ ಸಾಕು

ಪ್ಯಾನ್‌ ಕಾರ್ಡ್
‌ಆಧಾರ್‌ ಕಾರ್ಡ್
‌ನರೇಗಾ ಜಾಬ್‌ ಕಾರ್ಡ್
‌ಫೋಟೊ ಅಂಟಿಸಿರುವ ಬ್ಯಾಂಕ್‌ ಪಾಸ್‌ಬುಕ್
ಫೋಟೊ ಇರುವ ಪಿಂಚಣಿ ಡಾಕ್ಯುಮೆಂಟ್
ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಕಂಪನಿಗಳ ಐಡಿ
ಡ್ರೈವಿಂಗ್‌ ಲೈಸೆನ್ಸ್‌
ಕಾರ್ಮಿಕ ಸಚಿವಾಲಯ ನೀಡಿದ ವಿಮೆಯ ಸ್ಮಾರ್ಟ್‌ ಕಾರ್ಡ್

ಇದನ್ನೂ ಓದಿ: ಸೆಲ್ಫಿ ಅಪ್‌ಲೋಡ್‌ ಮಾಡಿ, ಕ್ಯೂನಲ್ಲಿ ನಿಲ್ಲದೆ ನೇರವಾಗಿ ಹೋಗಿ ಮತ ಹಾಕಿ; ಏನಿದು ಫೇಷಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನ?

Exit mobile version