Site icon Vistara News

Karnataka Election: ಕಾಂಗ್ರೆಸ್‌ನ ಅಂತಿಮ ಹಾಗೂ 6ನೇ ಅಭ್ಯರ್ಥಿ ಪಟ್ಟಿ ಬಿಡುಗಡೆ

congress

ಬೆಂಗಳೂರು: ಕೊನೆಯ ಕ್ಷಣದವರೆಗೂ ಬಾಕಿ ಉಳಿಸಿಕೊಂಡಿದ್ದ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬುಧವಾರ ತಡರಾತ್ರಿ ಕಾಂಗ್ರೆಸ್‌ ಘೋಷಿಸಿದೆ. ಇದು ಕಾಂಗ್ರೆಸ್‌ನ 6ನೇ ಹಾಗೂ ಅಂತಿಮ ಪಟ್ಟಿಯಾಗಿದೆ.

5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿರುವ AICC ತಡರಾತ್ರಿ 2 ಗಂಟೆಗೆ ಲಿಸ್ಟ್ ಬಿಡುಗಡೆ ಮಾಡಿದೆ. ಅದು ಹೀಗಿದೆ:

ರಾಯಚೂರು – ಮೊಹಮ್ಮದ್ ಶಾಲಮ್

ಶಿಡ್ಲಘಟ್ಟ – ಬಿ. ವಿ ರಾಜೀವ್ ಗೌಡ

ಸಿ.ವಿ ರಾಮನ್ ನಗರ – ಎಸ್. ಆನಂದ್ ಕುಮಾರ್

ಅರಕಲಗೂಡು – ಎಚ್.ಪಿ ಶ್ರೀಪಾದ್ ಗೌಡ

ಮಂಗಳೂರು ಉತ್ತರ – ಇನಾಯತ್ ಅಲಿ

ನಿನ್ನೆ ಸಂಜೆಯಷ್ಟೇ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಬಳಿಕ ಮಧ್ಯರಾತ್ರಿ ಫೈನಲ್ ಪಟ್ಟಿ ಬಿಡುಗಡೆಗೊಳಿಸಿತು. ಇದರೊಂದಿಗೆ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಿದೆ. ಈಗಾಗಲೇ ಬಿಜೆಪಿ ಸಹ 224 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದು, ಅಷ್ಟೂ ಕ್ಷೇತ್ರಗಳ ಹಣಾಹಣಿ ಯಾರ ನಡುವೆ ಎಂಬುದು ಇತ್ಯರ್ಥಗೊಂಡಿದೆ.

ನಾಮಪತ್ರ ಸಲ್ಲಿಕೆ ಕಡೇ ದಿನದ ವರೆಗೂ ಕಾಂಗ್ರೆಸ್‌ ಟಿಕೆಟ್ ಫೈನಲ್ ಮಾಡುತ್ತಲೇ ಇತ್ತು. ಶಿಡ್ಲಘಟ್ಟ ಕ್ಷೇತ್ರದಿಂದ ಆರು ಬಾರಿ ಸ್ಪರ್ಧೆ ಮಾಡಿ ಗೆದ್ದಿದ್ದ ಹಾಲಿ ಶಾಸಕ ವಿ. ಮುನಿಯಪ್ಪಗೆ ಈ ಬಾರಿ ಟಿಕೆಟ್ ಮಿಸ್ ಆಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ರಾಜೀವ್ ಗೌಡರಿಗೆ ಮಣೆ ಹಾಕಿದ್ದಾರೆ. ಸಿ.ವಿ ರಾಮನ್ ನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕೈಬಿಟ್ಟು ಎಸ್. ಆನಂದ್ ಕುಮಾರ್ ಅವರಿಗೆ ಕೊಡಲಾಗಿದೆ. ಡಿಕೆಶಿ ಶಿಷ್ಯರಾಗಿರುವ ಸಂಪತ್ ರಾಜ್, ಅಖಂಡ ಶ್ರೀನಿವಾಸ ಮನೆ ಮೇಲೆ ಬೆಂಕಿ ಇಟ್ಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಸಂಪತ್ ರಾಜ್‌ಗೆ ಟಿಕೆಟ್ ಕೊಡುವ ವಿಚಾರದಲ್ಲಿ ಕೈ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಯಚೂರು ಸಿಟಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಎಸ್ ಬೋಸರಾಜ್‌ಗೆ ಟಿಕೆಟ್‌ ಮಿಸ್‌ ಆಗಿದೆ. ಬೋಸರಾಜ್ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದರು. ರಾಯಚೂರು ಸಿಟಿಯಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿದ್ದು, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಪಟ್ಟು ಹಿಡಿದಿದ್ದರು. ಅರಕಲಗೂಡು ಹಾಗೂ ಮಂಗಳೂರು ಉತ್ತರದಲ್ಲಿ ಡಿಕೆಶಿ ಆಪ್ತರಿಗೆ ಟಿಕೆಟ್ ದೊರೆತಿದೆ. ಅರಕಲಗೂಡು ಶ್ರೀಧರಗೌಡ ಹಾಗೂ ಇನಾಯತ್ ಅಲಿ ಡಿಕೆಶಿ ಬೆಂಬಲಿಗರು. ಸಿದ್ದರಾಮಯ್ಯ ಆಪ್ತರಾದ ಮೋಹಿಯುದ್ದೀನ್ ಭಾವ ಹಾಗೂ ಕೃಷ್ಣೇಗೌಡಗೆ ಟಿಕೆಟ್ ಮಿಸ್ ಆಗಿದೆ.

ಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯ ಅವರ ಪತ್ನಿಯೇ ಶ್ರೀಮಂತೆ; 5 ವರ್ಷದಲ್ಲಿ ಆಸ್ತಿ ದುಪ್ಪಟ್ಟು

Exit mobile version