Site icon Vistara News

Karnataka Election : ಬೂತ್‌ ರಿಪೋರ್ಟ್‌ ಪಡೆದ ಸಿದ್ದು; 32,000 ಮತಗಳ ಗೆಲುವು ನಿಜಾನಾ?

Siddaramaiah Somanna

#image_title

ಮೈಸೂರು: ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ (Former CM Siddaramaiah) ಅವರು ಮತ ಎಣಿಕೆಯ ಮುನ್ನಾದಿನ ನಿರಾಳವಾಗಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಾರಣ ಅವರು ಪಡೆದಿರುವ ಬೂತ್‌ ರಿಪೋರ್ಟ್‌ ಎಂದು ಹೇಳಲಾಗಿದೆ. ವರುಣ ಕ್ಷೇತ್ರದಲ್ಲಿ (Karnataka Election 2023) ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ವಿರುದ್ಧ ಜಿದ್ದಿನ ಸ್ಪರ್ಧೆಯಲ್ಲಿರುವ ಸಿದ್ದರಾಮಯ್ಯ ಅವರು ಮತದಾನದ ದಿನ ಸ್ವಲ್ಪ ಆತಂಕಿತರಾಗಿದ್ದರು. ಆದರೆ, ಶುಕ್ರವಾರ ಸಂಜೆಯ ಹೊತ್ತಿಗೆ ಎಲ್ಲ ಬೂತ್‌ಗಳಿಂದ ವರದಿ ಪಡೆದುಕೊಂಡ ಬಳಿಕ ನಿರಾಳರಾದರು ಎಂದು ಹೇಳಲಾಗುತ್ತಿದೆ.

ವರುಣ ಕ್ಷೇತ್ರದಲ್ಲಿ ಒಟ್ಟು 1,98,000 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ ಗೆಲುವಿನ ಗೆರೆ ದಾಟಬಹುದು ಎನ್ನುವ ಲೆಕ್ಕಾಚಾರ ಸಿದ್ದು ಕೈಗೆ ಸಿಕ್ಕಿದೆ ಎನ್ನಲಾಗಿದೆ. ಮುಖ್ಯವಾಗಿ ಜಾತಿಯ ಆಧಾರದಲ್ಲಿ ಮತಗಳ ಗಣನೆ ನಡೆಸಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಲಾಗಿದೆ.

ಕುರುಬ, ಮುಸ್ಲಿಂಮತ್ತು ಉಪ್ಪಾರ ಸಮುದಾಯದ ಮತಗಳು ಪ್ರಮುಖವಾಗಿ ಸಿದ್ದರಾಮಯ್ಯ ಕೈ ಹಿಡಿಯಲಿವೆ ಎಂದು ಲೆಕ್ಕ ಹಾಕಲಾಗಿದೆ. 32 ಸಾವಿರ ಕುರುಬ, ಪರಿಶಿಷ್ಟ ಜಾತಿ ಮತ್ತು ವರ್ಗದ 44 ಸಾವಿರ, 9 ಸಾವಿರ ಮುಸ್ಲಿಂ ಹಾಗೂ 11 ಸಾವಿರ ಉಪ್ಪಾರ ಮತಗಳು ಸಿದ್ದರಾಮಯ್ಯ ಗೆ ಬಂದಿವೆ ಅಂತ ಬೂತ್ ರಿಪೋರ್ಟ್ ನೀಡಲಾಗಿದೆ. ಇದರ ಜತೆಗೆ ಇತರ ಸಮುದಾಯಗಳಿಂದ 25 ಸಾವಿರ ವೋಟ್ ಬರುತ್ತದೆ ಎಂಬ ವರದಿಯನ್ನು ನೀಡಲಾಗಿದೆ.

ವರುಣ ಕ್ಷೇತ್ರದಲ್ಲಿ 52 ಸಾವಿರ ಲಿಂಗಾಯತ ಮತಗಳಿದ್ದು, ಇದರ ಶೇಕಡಾ 30ರಷ್ಟು ಸಿದ್ದರಾಮಯ್ಯ ಪರ ಬಂದಿದೆ ಎಂದು ಕಾಂಗ್ರೆಸ್‌ನ ಸ್ಥಳೀಯ ನಾಯಕರು ವರದಿ ನೀಡಿದ್ದಾರೆ. ಅಂದರೆ 10 ಸಾವಿರ ಮತ ಸಿದ್ದರಾಮಯ್ಯಗೆ ಬರಬಹುದು ಎನ್ನುವ ಲೆಕ್ಕವನ್ನು ಸಿದ್ದರಾಮಯ್ಯ ಅವರಿಗೆ ಒಪ್ಪಿಸಲಾಗಿದೆ.

ಕಾಂಗ್ರೆಸ್‌ನ ಬೂತ್‌ ವರದಿಗಳ ಪ್ರಕಾರ, ಸಿದ್ದರಾಮಯ್ಯ ಅವರಿಗೆ 1 ಲಕ್ಷ 15 ಸಾವಿರ ಮತ ಬಂದಿಯಂತೆ. ಇವರ ಪ್ರಕಾರ, ವಿ ಸೋಮಣ್ಣ ಅವರಿಗೆ 83 ಸಾವಿರ ಮತ ಬರಲಿದೆ. ಹೀಗಾಗಿ ಸುಮಾರು 32 ಸಾವಿರ ಅಂತರದಲ್ಲಿ ಗೆಲ್ಲುವ ವಿಶ್ವಾಸವನ್ನು ಸಿದ್ದರಾಮಯ್ಯ ಅವರಿಗೆ ಬೂತ್‌ ರಿಪೋರ್ಟ್‌ ತುಂಬಿದೆ.

ಇದೇ ವೇಳೆ ಬಿಜೆಪಿ ಕೂಡಾ ಅಷ್ಟೇ ಉತ್ಸಾಹದಲ್ಲಿದೆ. ವಿ. ಸೋಮಣ್ಣ ಅವರು ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಅಂತಿಮವಾಗಿ ಫಲಿತಾಂಶ ಏನಾಗಲಿದೆ ಎನ್ನುವುದು ಮಾರ್ಚ್‌ 13ರಂದು ತಿಳಿಯಲಿದೆ.

ಇದನ್ನೂ ಓದಿ: Karnataka Election : ಗೆಲ್ಲಬಲ್ಲ ಪಕ್ಷೇತರರಿಗೆ ಕಾಂಗ್ರೆಸ್‌ ಗಾಳ; ಫೀಲ್ಡಿಗೆ ಇಳಿದ ಸಿದ್ದರಾಮಯ್ಯ

Exit mobile version