Site icon Vistara News

Karnataka Election exit Poll: ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಕಾಂಗ್ರೆಸ್‌‌ಗೆ 122ರಿಂದ 140 ಸೀಟು, ಬಿಜೆಪಿಗೆ ಭಾರೀ ಹಿನ್ನಡೆ?

Karnataka Election exit Poll: In the India Today-Axis my India exit poll predicted huge victory for Congress

ಬೆಂಗಳೂರು, ಕರ್ನಾಟಕ: ಬಹುತೇಕ ಸಮೀಕ್ಷೆಗಳು ಕರ್ನಾಟಕ ವಿಧಾಸಭೆಗೆ ಅತಂತ್ರ ಫಲಿತಾಂಶವನ್ನು ಅಂದಾಜಿಸಿವೆ. ಆದರೆ, ಇಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ (India Today-Axis my India exit poll) ಮಾತ್ರ ಕಾಂಗ್ರೆಸ್‌ಗೆ ಭರ್ಜರಿಯವನ್ನು ನೀಡಿದೆ. ಈ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 122ರಿಂದ 140 ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ. ಇದೆ ಬಿಜೆಪಿ 62ರಿಂದ 80 ಮತ್ತು ಜೆಡಿಎಸ್ 20ರಿಂದ 25, ಇತರರಿಗೆ 3 ಸ್ಥಾನಗಳನ್ನು ನೀಡಿದೆ. ಇನ್ನು ಬಿಜೆಪಿ ಶೇ.35, ಕಾಂಗ್ರೆಸ್ ಶೇ.43 ಮತ್ತು ಜೆಡಿಎಸ್ ಶೇ.16ರಷ್ಟ ಮತಗಳನ್ನು ಪಡೆಯಲಿವೆ(Karnataka Election exit Poll).

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ನಿಜವೇ ಆದರೆ ಬಿಜೆಪಿಯು ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುವುದು ಶತಃಸಿದ್ಧ. ಮೇಲ್ನೋಟಕ್ಕೆ ಈ ಸಮೀಕ್ಷೆಯನ್ನು ನಂಬುವುದು ಕಷ್ಟವಾದರೂ, ಈ ರೀತಿಯ ನಂಬಲು ಸಾಧ್ಯವಿಲ್ಲದ ಹಲವು ಸಮೀಕ್ಷೆಗಳು ಈ ಹಿಂದೆ ನಿಜವಾದ ಉದಾಹರಣೆಗಳಿವೆ. 2014, 2019ರ ಲೋಕಸಭೆ ಚುನಾವಣೆ, ದಿಲ್ಲಿಯ ಇತ್ತೀಚಿನ ಎರಡು ವಿಧಾನಸಭೆ ಚುನಾವಣೆಗಳ ಕೆಲವು ಮತಗಟ್ಟೆ ಸಮೀಕ್ಷೆಗಳನ್ನು ಉದಾಹರಣೆ ನೀಡಬಹುದಾಗಿದೆ.

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಲೆಕ್ಕಾಚಾರ ಹೇಗೆ?

ಕರಾವಳಿ ಕರ್ನಾಟಕ

ಬಿಜೆಪಿಯ ಭದ್ರಕೋಟೆಯಾಗಿರುವ ಈ ಪ್ರದೇಶವಿದು. ಇಲ್ಲಿ ಬಿಜೆಪಿ ಶೇ.50 ಮತಗಳೊಂದಿಗೆ 16 ಸೀಟು ಪ ಡೆದುಕೊಂಡರೆ, ಕಾಂಗ್ರೆಸ್ ಶೇ.40 ಮತದೊಂದಿಗೆ 3 ಸ್ಥಾನಗಳನ್ನು ಪಡೆಯಲಿದೆ. ಶೇ.6ರಷ್ಟು ಮತಗಳನ್ನು ಕಳೆದುಕೊಳ್ಳಲಿರುವ ಜೆಡಿಎಸ್‌ ಸೊನ್ನೆ ಸುತ್ತಲಿದೆ.

ಕೇಂದ್ರ ಕರ್ನಾಟಕ

ಈ ಭಾಗದಲ್ಲೂ ಈವರೆಗೆ ಬಿಜೆಪಿ ಚೆನ್ನಾಗಿಯೇ ಪ್ರದರ್ಶನ ಮಾಡಿದೆ. ಮತಗಟ್ಟೇ ಸಮೀಕ್ಷೆಯ ಪ್ರಕಾರ, ಶೇ.41 ಮತದೊಂದಿಗೆ ಬಿಜೆಪಿ 10, ಶೇ.35 ಮತದೊಂದಿಗೆ ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದುಕೊಳ್ಳಬಹುದಾಗಿದೆ. ಜೆಡಿಎಸ್ ಕೂಡ ಒಂದು ಸ್ಥಾನ ಗೆಲ್ಲಬಹುದಾಗಿದೆ.

ಬೆಂಗಳೂರು ಮಹಾನಗರ

28 ಕ್ಷೇತ್ರಗಳನ್ನು ಹೊಂದಿರುವ ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲವನ್ನು ಈ ಹಿಂದೆ ತೋರಿಸಿವೆ. ಆದರೆ, ಈ ಬಾರಿ ಶೇ.38 ಮತದೊಂದಿಗೆ ಬಿಜೆಪಿ 10, ಶೇ.44 ಮತದೊಂದಿಗೆ ಕಾಂಗ್ರೆಸ್ 17 ಹಾಗೂ, ಶೇ.15 ಮತದೊಂದಿಗೆ ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ.

ಕಲ್ಯಾಣ ಕರ್ನಾಟಕ

ಈ ಭಾಗದಲ್ಲಿ ಕಾಂಗ್ರೆಸ್ ಶೇ. 47 ಮತಗಳೊಂದಿಗೆ 32, ಶೇ.36 ಮತದೊಂದಿಗೆ ಬಿಜೆಪಿ 7 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ ಜೆಡಿಸ್ ಒಂದು ಸ್ಥಾನಕ್ಕೆ ತೃಪ್ತಿಪಡಬಹುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ಭಾಗದವರೇ ಆಗಿದ್ದಾರೆ.

ಕಿತ್ತೂರು ಕರ್ನಾಟಕ

ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಈ ಪ್ರದೇಶದಲ್ಲಿ ಬಿಜೆಪಿ ಬಲಶಾಲಿಯಾಗಿತ್ತು. ಆದರೆ, ಈ ಸಮೀಕ್ಷೆಯಲ್ಲಿ ಒಂದಿಷ್ಟು ವ್ಯತ್ಯಾಸವನ್ನು ಉಹಿಸಲಾಗಿದೆ. ಕಾಂಗ್ರೆಸ್ ಶೇ.45 ಮತದೊಂದಿಗೆ 28 ಹಾಗೂ, ಶೇ.42 ಮತದೊಂದಿಗೆ ಬಿಜೆಪಿ 21, ಶೇ.8ಮತದೊಂದಿಗೆ ಜೆಡಿಎಸ್ 1 ಸ್ಥಾನವನ್ನು ಗೆಲ್ಲುಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Karnataka Election Exit Poll: ಕಾಂಗ್ರೆಸ್‌ ಅಧಿಕಾರಕ್ಕೆ ಸನಿಹ; ಟಿವಿ9-ಸಿವೋಟರ್‌ ಮತಗಟ್ಟೆ ಸಮೀಕ್ಷೆ; ಬೇರೆ ಎಕ್ಸಿಟ್‌ ಪೋಲ್‌ ಹೇಳುವುದೇನು?

ಹಳೆ ಮೈಸೂರು

ಇದು ಸಾಂಪ್ರದಾಯಿಕವಾಗಿ ಜೆಡಿಎಸ‌ನ ಭದ್ರಕೋಟೆ. ಆದರೆ, ಈ ಮತಗಟ್ಟೆ ಸಮೀಕ್ಷೆ ಪ್ರಕಾರ, ಈ ಕೋಟೆ ಛಿದ್ರವಾಗುವ ಸಾಧ್ಯತೆ ಇದೆ. ಜೆಡಿಎಸ್ ನಷ್ಟ ಕಾಂಗ್ರೆಸ್‌ ಲಾಭವಾಗುವ ಲಕ್ಷಣಗಳಿವೆ. ಜೆಡಿಎಸ್ ಶೇ. 28 ಮತದೊಂದಿಗೆ 18 ಸೀಟು ಗೆದ್ದರೆ, ಶೇ.40 ಮತದೊಂದಿಗೆ ಕಾಂಗ್ರೆಸ್ 36 ಹಾಗೂ ಶೇ.25 ಮತದೊಂದಿಗೆ ಬಿಜೆಪಿ 6 ಕ್ಷೇತ್ರಗಳನ್ನು ಗೆಲ್ಲುವ ಊಹೆ ಮಾಡಲಾಗಿದೆ.

ಕರ್ನಾಟಕ ವಿಧಾನಸಭೆಯ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version