Site icon Vistara News

Karnataka Election : ಯೋಗ ಬಂದರೆ ನಾನೇ ಸಿಎಂ, ಇಲ್ಲದಿದ್ದರೆ ಆರಾಂ ಎಂದ ಯತ್ನಾಳ್‌

karnataka-election: I too can become CM if I have gods grace, says Basanaagowda patil yatnal

karnataka-election: I too can become CM if I have gods grace, says Basanaagowda patil yatnal

ವಿಜಯಪುರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಗೆಲ್ಲೋದು ಗ್ಯಾರಂಟಿ. ಯೋಗ ಒದಗಿಬಂದರೆ ನಾನೇ ಸಿಎಂ ಆಗ್ತೇನೆ ಎಂದು ಹೇಳಿದರು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ (Basanagowda pateel yatnal).

ವಿಜಯಪುರ ನಗರದ ಎಸ್ ಎಸ್ ಹೈಸ್ಕೂಲು ಆವರಣದಲ್ಲಿರುವ ಮತಗಟ್ಟೆ 61ರಲ್ಲಿ ಅವರು ಮತ ಚಲಾವಣೆ ಮಾಡಿದರು. ಪತ್ನಿ ಶೈಲಜಾ, ಪುತ್ರರಾದ ರಾಮನಗೌಡ, ಆದರ್ಶ ಹಾಗೂ ಬೆಂಬಲಿಗರೊಂದಿಗೆ ಅವರು ಆಗಮಿಸಿ ಮತ ಚಲಾಯಿಸಿದರು. ಯತ್ನಾಳ್‌ ಅವರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.

ಮತ ಚಲಾಯಿಸಿದ ಬಳಿಕ ಮಾತನಾಡಿದ ಯತ್ನಾಳ್‌ ಅವರು, ಬೆಳಿಗ್ಗೆಯಿಂದಲೇ ಮತದಾರರು ಮತಕೇಂದ್ರಗಳಿಗೆ ಬರ್ತಿದ್ದಾರೆ. ನಮ್ಮ ಲೀಡ್ ಹೆಚ್ಚಾಗಲಿದೆ ಎಂದರು.

ʻʻಅಭಿವೃದ್ಧಿ, ಸುರಕ್ಷೆ, ಹಿಂದುತ್ವದ ಆಧಾರದ ಮೇಲೆ ಜನರು ಜೈ ಭಜರಂಗಬಲಿ ಎಂದು ಮತದಾನ ಮಾಡ್ತಿದ್ದಾರೆ. ವಿಜಯಪುರದಲ್ಲಿ ಮತದಾನ ರಾಜ್ಯಕ್ಕೆ ಮಾದರಿಯಾಗಲಿದೆ. ವಿಜಯಪುರ ಜಿಲ್ಲೆಯಲ್ಲಿ 8 ಕ್ಕೆ 8 ಕ್ಷೇತ್ರ ಗೆಲ್ಲುತ್ತೇವೆ.. ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ನಾವೇ ಸರ್ಕಾರ ರಚಿಸುತ್ತೇವೆʼʼ ಎಂದು ಹೇಳಿಕೊಂಡರು.

ʻʻಬಿಜೆಪಿಗೆ 130ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಿಗಲಿದೆʼʼ ಎಂದು ಹೇಳಿದ ಯತ್ನಾಳ್‌, ʻʻಯೋಗ ಬಂದರೇ ಸಿಎಂ ಆಗ್ತೀನಿ, ಯೋಗ ಬರದೆ ಹೋದರೆ ಆರಾಮ್ ಆಗಿ ಇರ್ತೀನಿʼʼ ಎಂದರು. ʻʻಯಾರು ಸಿಎಂ ಆಗಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಮಂತ್ರಿ, ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಸಿಎಂ ಆಗುವ ಹುಚ್ಚುತನ ನನಗೆ ಇಲ್ಲʼʼ ಎಂದು ಹೇಳಿದರು.

ʻʻವಿಜಯಪುರ ನಗರ ಕ್ಷೇತ್ರದಲ್ಲಿ ಶೇ. 90ಕ್ಕಿಂತ ಅಧಿಕ ಮತದಾನವಾಗಲಿದೆ. ನಿರೀಕ್ಷೆ ಮೀರಿ ಲೀಡ್ ಸಿಗಲಿದೆ. ಮತದಾರರು ಜಾಗೃತರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೂಂಡಾಗಿರಿಯಿಂದ ಜನರಲ್ಲಿ ಭಯ ಮೂಡಿದೆ. ಹೀಗಾಗಿ ನನ್ನನ್ನು ಜನರು ಬೆಂಬಲಿಸಲಿದ್ದಾರೆʼʼ ಎಂದು ಹೇಳಿದರು ಯತ್ನಾಳ್‌.

ಇದನ್ನೂ ಓದಿ : Karnataka Election : ವೋಟರ್‌ ಐಡಿ ಇಲ್ವಾ? ಡೋಂಟ್‌ ವರಿ, ಈ 11 ದಾಖಲೆಗಳಲ್ಲಿ ಯಾವುದು ಇದ್ದರೂ ಓಕೆ!

Exit mobile version