karnataka-election: I too can become CM if I have gods grace, says Basanaagowda patil yatnal Karnataka Election : ಯೋಗ ಬಂದರೆ ನಾನೇ ಸಿಎಂ, ಇಲ್ಲದಿದ್ದರೆ ಆರಾಂ ಎಂದ ಯತ್ನಾಳ್‌ - Vistara News

ಕರ್ನಾಟಕ

Karnataka Election : ಯೋಗ ಬಂದರೆ ನಾನೇ ಸಿಎಂ, ಇಲ್ಲದಿದ್ದರೆ ಆರಾಂ ಎಂದ ಯತ್ನಾಳ್‌

Basanagowda patil yatnal : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಯೋಗ ಬಂದರೆ ನಾನೇ ಸಿಎಂ ಆಗ್ತೇನೆ ಎಂದಿದ್ದಾರೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌.

VISTARANEWS.COM


on

karnataka-election: I too can become CM if I have gods grace, says Basanaagowda patil yatnal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯಪುರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಗೆಲ್ಲೋದು ಗ್ಯಾರಂಟಿ. ಯೋಗ ಒದಗಿಬಂದರೆ ನಾನೇ ಸಿಎಂ ಆಗ್ತೇನೆ ಎಂದು ಹೇಳಿದರು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ (Basanagowda pateel yatnal).

ವಿಜಯಪುರ ನಗರದ ಎಸ್ ಎಸ್ ಹೈಸ್ಕೂಲು ಆವರಣದಲ್ಲಿರುವ ಮತಗಟ್ಟೆ 61ರಲ್ಲಿ ಅವರು ಮತ ಚಲಾವಣೆ ಮಾಡಿದರು. ಪತ್ನಿ ಶೈಲಜಾ, ಪುತ್ರರಾದ ರಾಮನಗೌಡ, ಆದರ್ಶ ಹಾಗೂ ಬೆಂಬಲಿಗರೊಂದಿಗೆ ಅವರು ಆಗಮಿಸಿ ಮತ ಚಲಾಯಿಸಿದರು. ಯತ್ನಾಳ್‌ ಅವರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.

ಮತ ಚಲಾಯಿಸಿದ ಬಳಿಕ ಮಾತನಾಡಿದ ಯತ್ನಾಳ್‌ ಅವರು, ಬೆಳಿಗ್ಗೆಯಿಂದಲೇ ಮತದಾರರು ಮತಕೇಂದ್ರಗಳಿಗೆ ಬರ್ತಿದ್ದಾರೆ. ನಮ್ಮ ಲೀಡ್ ಹೆಚ್ಚಾಗಲಿದೆ ಎಂದರು.

ʻʻಅಭಿವೃದ್ಧಿ, ಸುರಕ್ಷೆ, ಹಿಂದುತ್ವದ ಆಧಾರದ ಮೇಲೆ ಜನರು ಜೈ ಭಜರಂಗಬಲಿ ಎಂದು ಮತದಾನ ಮಾಡ್ತಿದ್ದಾರೆ. ವಿಜಯಪುರದಲ್ಲಿ ಮತದಾನ ರಾಜ್ಯಕ್ಕೆ ಮಾದರಿಯಾಗಲಿದೆ. ವಿಜಯಪುರ ಜಿಲ್ಲೆಯಲ್ಲಿ 8 ಕ್ಕೆ 8 ಕ್ಷೇತ್ರ ಗೆಲ್ಲುತ್ತೇವೆ.. ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ನಾವೇ ಸರ್ಕಾರ ರಚಿಸುತ್ತೇವೆʼʼ ಎಂದು ಹೇಳಿಕೊಂಡರು.

ʻʻಬಿಜೆಪಿಗೆ 130ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಿಗಲಿದೆʼʼ ಎಂದು ಹೇಳಿದ ಯತ್ನಾಳ್‌, ʻʻಯೋಗ ಬಂದರೇ ಸಿಎಂ ಆಗ್ತೀನಿ, ಯೋಗ ಬರದೆ ಹೋದರೆ ಆರಾಮ್ ಆಗಿ ಇರ್ತೀನಿʼʼ ಎಂದರು. ʻʻಯಾರು ಸಿಎಂ ಆಗಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಮಂತ್ರಿ, ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಸಿಎಂ ಆಗುವ ಹುಚ್ಚುತನ ನನಗೆ ಇಲ್ಲʼʼ ಎಂದು ಹೇಳಿದರು.

ʻʻವಿಜಯಪುರ ನಗರ ಕ್ಷೇತ್ರದಲ್ಲಿ ಶೇ. 90ಕ್ಕಿಂತ ಅಧಿಕ ಮತದಾನವಾಗಲಿದೆ. ನಿರೀಕ್ಷೆ ಮೀರಿ ಲೀಡ್ ಸಿಗಲಿದೆ. ಮತದಾರರು ಜಾಗೃತರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೂಂಡಾಗಿರಿಯಿಂದ ಜನರಲ್ಲಿ ಭಯ ಮೂಡಿದೆ. ಹೀಗಾಗಿ ನನ್ನನ್ನು ಜನರು ಬೆಂಬಲಿಸಲಿದ್ದಾರೆʼʼ ಎಂದು ಹೇಳಿದರು ಯತ್ನಾಳ್‌.

ಇದನ್ನೂ ಓದಿ : Karnataka Election : ವೋಟರ್‌ ಐಡಿ ಇಲ್ವಾ? ಡೋಂಟ್‌ ವರಿ, ಈ 11 ದಾಖಲೆಗಳಲ್ಲಿ ಯಾವುದು ಇದ್ದರೂ ಓಕೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಸಣ್‌ ಮಳೆಗೆ ಕೆರೆಯಂತಾದ ಬೆಂಗಳೂರಿನ ರಸ್ತೆಗಳು; ನಾಳೆಗೂ ಅಲರ್ಟ್‌

Karnataka Weather Forecast : ಬೆಂಗಳೂರು, ದೊಡ್ಡಬಳ್ಳಾಪುರದಲ್ಲಿ ಸುರಿದ ಮಳೆಗೆ (Rain News) ರಸ್ತೆಗಳು ಜಲಾವೃತಗೊಂಡು ಅವಾಂತರವೇ ಸೃಷ್ಟಿಯಾಗಿದೆ. ಆಗಸ್ಟ್‌ 23ರವರೆಗೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಸೋಮವಾರ ರಾಜಧಾನಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ (Bengaluru rain) ಸುರಿದಿದೆ. ಕೇವಲ10-15 ನಿಮಿಷ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಹೆಬ್ಬಾಳದ ರಸ್ತೆಗಳು ಕೆರೆಯಂತಾಗಿ ಸವಾರರು, ಸಾರ್ವಜನಿಕರು ಹೈರಣಾದರು. ಇತ್ತ ಮಳೆ ಕಡಿಮೆಯಾಗುತ್ತಿದ್ದಂತೆ ಸವಾರರು ಟ್ರಾಫಿಕ್‌ನಲ್ಲಿ (Karnataka Weather Forecast) ಸಿಲುಕಿದ್ದರು.

ಯಶವಂತಪುರ, ಹೆಬ್ಬಾಳ ಅಂಡರ್ ಪಾಸ್‌ನಲ್ಲಿ ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು. ಟ್ರಾಫಿಕ್ ಕ್ಲಿಯರ್ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಹೆಬ್ಬಾಳ ಸಂಪರ್ಕ ಕಲ್ಪಿಸುವ ಅಕ್ಕಪಕ್ಕದ ರಸ್ತೆಗಳು, ವಸಂತನಗರ, ರೈಲ್ವೆ ಪ್ಯಾರಲಲ್ ರಸ್ತೆ, ಪ್ಯಾಲೇಸ್ ಗುಟ್ಟಳ್ಳಿ ಸೇರಿದಂತೆ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಇತ್ತ ದೊಡ್ಡಬಳ್ಳಾಪುರದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಯ ಮೇಲೆ ನೀರು ತುಂಬಿ ಹರಿದಿತ್ತು. ದೊಡ್ಡಬಳ್ಳಾಪುರದ ತಾಲೂಕು ಕಚೇರಿ, ತೇರಿನ ಬೀದಿ ಸರ್ಕಲ್ ಬಳಿ ವಾಹನ ಸವಾರರು ಪರದಾಡಿದರು. ಒಂದು ಅಡಿಗೂ‌ ಹೆಚ್ಚು ನೀರು ನಿಂತು, ಜತೆಗೆ ಚರಂಡಿ ನೀರೆಲ್ಲಾ ತುಂಬಿ ರಸ್ತೆಯ ಮೇಲೆ ಹರಿದಿತ್ತು. ತಾಲೂಕು ಕಚೇರಿಯ ಮುಂದೆಯೇ ರಸ್ತೆ ಅವ್ಯವಸ್ಥೆಗೊಂಡಿತ್ತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ರಸ್ತೆಗಳು ನದಿಯಂತಾಗಿತ್ತು. ಬಾಳೆಹೊನ್ನೂರು-ಕಳಸ- ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿತ್ತು. ಎನ್ ಆರ್ ಪುರ ತಾಲೂಕಿನ ಬನ್ನೂರು ಬಳಿ ರಸ್ತೆ ಮುಳುಗಡೆಯಾಗಿದೆ. ರಸ್ತೆಯ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿವೆ.ವಿಜಯಪುರದ ನಾಲತವಾಡನಲ್ಲಿ ಭಾರಿ ಮಳೆಗೆ ಸಾರ್ವಜನಿಕರು, ಗ್ರಾಹಕರು ಪರದಾಡಿದರು. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮಾರ್ಕೆಟ್‌ಗೆ ಚರಂಡಿ ನೀರು ನುಗ್ಗಿತ್ತು.

ಇದನ್ನೂ ಓದಿ: Namma Metro : ನಾಳೆಯಿಂದ ಸೆಪ್ಟೆಂಬರ್‌ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್‌!

ಬಾಗಲಕೋಟೆಯಲ್ಲಿ ಅಬ್ಬರಿಸಿದ ಮಳೆ

ತಡರಾತ್ರಿ ಬಾಗಲಕೋಟೆಯ ರಬಕವಿ ಬನಹಟ್ಟಿ ನಗರದಲ್ಲಿ ಮಳೆಯು ಅಬ್ಬರಿಸಿದೆ. ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಇಡೀ ಬನಹಟ್ಟಿ ನಗರ ನದಿಯಂತೆ ಕಂಡು ಬಂತು. ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಿದ್ದೆಗೆಟ್ಟು ಬಕೆಟ್ ಮೂಲಕ ನೀರು ಹೊರ ಹಾಕಿದರು. ಬ್ಯಾರೆಲ್, ಮನೆ ಮುಂಭಾಗದ ಬೈಕ್‌ಗಳು ಜಲಾವೃತಗೊಂಡಿದ್ದವು. 1 ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಬನಹಟ್ಟಿ ಜನರು ತತ್ತರಿಸಿ ಹೋಗಿದ್ದರು.

ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರ

ರಾತ್ರಿ ಸುರಿದ ಮಳೆಗೆ ಕೆರೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿದ್ದರಿಂದ ಸುಮಾರು 30 ಎಕರೆ ಬೆಳೆ ನಾಶವಾಗಿದೆ. ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಕೊಚ್ಚಿ ಹೋಗಿವೆ. ಕೂಡಲೇ ಏರಿ ದುರಸ್ತಿ ಮಾಡಿ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಇತ್ತ ಚಿಕ್ಕಮಗಳೂರು ನಗರದ ಕಲ್ಲು ದೊಡ್ಡಿ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿ ಪರದಾಟ ಅನುಭವಿಸಿದರು. ರಸ್ತೆ ನೀರು ಹಳ್ಳದಂತೆ ಮನೆಗೆ ನುಗ್ಗಿತ್ತು. ನೀರು ಹೊರ ಹಾಕಲಾಗದೆ ಜನರು ಪರದಾಡಿದರು. ಮನೆಯಲ್ಲಿದ್ದ ಆಹಾರ ಪದಾರ್ಥ ಹಾಗೂ ವಸ್ತುಗಳು ಹಾನಿಯಾಗಿದ್ದವು. ನಗರ ಸಭೆ ವಿರುದ್ಧ ಸ್ಥಳೀಯ ನಾಗರಿಕರು ಇಡಿ ಶಾಪ ಹಾಕಿದ್ದರು.

ಆಗಸ್ಟ್‌ 23ರವರಗೆ ಭಾರಿ ಮಳೆ ಎಚ್ಚರ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದಿನಿಂದ (ಆ.19) ಆಗಸ್ಟ್ 23ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಅರಬ್ಬೀ ಸಮುದ್ರದ ಕರಾವಳಿ ಪ್ರದೇಶದಿಂದ ಮಾಲ್ಡಿವ್ಸ್ ದ್ವೀಪದವರೆಗೆ 1.5 ಮತ್ತು 1.8ಕಿ.ಮೀ ಟ್ರಪ್ ಎದ್ದಿದೆ. ಹೀಗಾಗಿ ಆಗಸ್ಟ್ 19 ರಿಂದ 23 ರ ವರೆಗೆ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಆಗಸ್ಟ್ 19 ಮತ್ತು 20 ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಆಗಸ್ಟ್ 19 ರಿಂದ 23 ರ ವರೆಗೆ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ಬೆಂಗಳೂರು, ಚಿಕ್ಕಮಗಳೂರು, ಕೋಲಾರ್, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kannada New Movie: ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್‌ನ ʼಫಾರೆಸ್ಟ್ʼ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್‌

ಅಡ್ವೆಂಚರಸ್ ಕಾಮಿಡಿ (Kannada New Movie) ಕಥಾಹಂದರ ಒಳಗೊಂಡಿರುವ “ಫಾರೆಸ್ಟ್” ಚಿತ್ರದ ಟ್ರೈಲರ್ ಸದ್ದದಲ್ಲೇ ರಿಲೀಸ್‌ ಆಗಲಿದೆ. ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂತ ಸ್ಟಾರ್ ಕಲಾವಿದರೇ ಅಭಿನಯಿಸಿದ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ “ಫಾರೆಸ್ಟ್” ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಎನ್.ಎಂ.ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್. ಎಂ. ಕಾಂತರಾಜ್ ಅವರು ಚಿತ್ರವನ್ನು (Kannada New Movie) ನಿರ್ಮಿಸಿದ್ದಾರೆ.

ಇದನ್ನೂ ಓದಿ: Namma Metro : ನಾಳೆಯಿಂದ ಸೆಪ್ಟೆಂಬರ್‌ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್‌!

ಈ ಸಿನಿಮಾ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿರುವ ನಿರ್ಮಾಪಕರು ಕ್ವಾಲಿಟಿ ವಿಷಯದಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ, ಬಜೆಟ್ ಬಗ್ಗೆ ಯೋಚಿಸದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ, ಡಬಲ್ ಇಂಜಿನ್ , ಬ್ರಹ್ಮಚಾರಿಯಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ, ಕಾಡಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂತ ಸ್ಟಾರ್ ಕಲಾವಿದರೇ ಅಭಿನಯಿಸಿದ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಫಾರೆಸ್ಟ್‌ನಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್ ಇರುವ ಈ ಚಿತ್ರದ ಬಹುತೇಕ ಕಥೆ ಕಾಡಿನಲ್ಲಿಯೇ ನಡೆಯೋದು ಚಿತ್ರದ ಮತ್ತೊಂದು ವಿಶೇಷ. ಸದ್ಯದಲ್ಲೇ ಈ ಸಿನಿಮಾದ ಮೊದಲಪ್ರತಿ ಹೊರಬರಲಿದೆ. ಅತಿದೊಡ್ಡ ಕಳ್ಳತನವೊಂದರ ಸುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಕೆಲವು ಕಡೆ ಡಬಲ್ ಕಾಲ್‌ಶೀಟ್ ಆಗಿದ್ದರಿಂದ ಶೂಟಿಂಗ್ ದಿನಗಳು ಹೆಚ್ಚಾಗಿದೆ ಎಂದು ನಿರ್ಮಾಪಕ ಕಾಂತರಾಜು ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಸಿದ್ದವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ರಿಲೀಸ್ ಮಾಡವುದಾಗಿಯೂ ಹಾಗೂ ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ನಿರ್ಮಾಪಕ ಕಾಂತರಾಜು ಅವರು ಯೋಜನೆ ಹಾಕಿಕೊಂಡಿದ್ದಾರೆ.

ಅಲ್ಲದೆ ಚಿತ್ರದ ಮತ್ತೊಂದು ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿಯೂ ನಿರ್ಮಾಪಕರು ಹೇಳಿದ್ದಾರೆ, ಚೇತನ್ ಕುಮಾರ್ ಅವರ ರಚನೆಯ ಈ ಹಾಡಿಗೆ ಗಾಯಕ ಚಂದನ್ ಶೆಟ್ಟಿ ದನಿಯಾಗಿದ್ದಾರೆ.

ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಅಲ್ಲದೆ ಸತ್ಯಶೌರ್ಯ ಸಾಗರ್ ಸಂಭಾಷಣೆ ರಚಿಸಿದ್ದಾರೆ. ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: Fake Garlic: ಎಚ್ಚರ..ಎಚ್ಚರ.. ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ ಸಿಮೆಂಟ್‌ ಬೆಳ್ಳುಳ್ಳಿ! ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದ ಹಿರಿಯ ಹಾಗೂ ಕಿರಿಯ ಕಲಾವಿದರು ಫಾರೆಸ್ಟ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

Continue Reading

ಕರ್ನಾಟಕ

Muda Scam: ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್‌; ರಿಟ್‌ ಅರ್ಜಿ ವಿಚಾರಣೆ ಆ.29ಕ್ಕೆ ಮುಂದೂಡಿದ ಹೈಕೋರ್ಟ್‌

Muda Scam: ಮುಡಾ ಹಗರಣದಲ್ಲಿ (Muda Scam) ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆ.29ಕ್ಕೆ ಹೈಕೋರ್ಟ್‌ ಮುಂದೂಡಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸುದೀರ್ಘ ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ಮುಂದೂಡಿದರು.

VISTARANEWS.COM


on

Muda Scam
Koo

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆದಿದೆ. ಸುದೀರ್ಘ ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಆ.29ರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ದೂರುದಾರರು ಹಾಗೂ ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಪಿಸಿ ಆಕ್ಟ್ 17ಎ ಅಡಿ ಅನುಮತಿ ಪ್ರಶ್ನಿಸಲಾಗಿದ್ದು, ರಿಟ್ ಅರ್ಜಿಯೊಂದಿಗೆ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯಪಾಲರು ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಇನ್ನು ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಪ್ರಭುಲಿಂಗ ನಾವದಗಿ ವಾದಿಸಿದ್ದಾರೆ. ಎಲ್ಲಾ ವಾದವನ್ನು ಕೋರ್ಟ್‌ ಆಲಿಸಿದ್ದು,
ಹೈಕೋರ್ಟ್ ಮುಂದಿನ ಆದೇಶ ನೀಡುವವರೆಗೂ ಅಂದರೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಬೇಕು ಎಂದು ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದರು.

ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಾದ ಮಂಡಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬಾಕಿ ಇದೆ. ಗವರ್ನರ್ ಆದೇಶ ನೀಡುವ ಮುನ್ನ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಆದರೆ, ಗವರ್ನರ್ ಯಾವ ಆಧಾರ ಇಲ್ಲದೆಯೂ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಕೊಟ್ಟ ಉತ್ತರವನ್ನು ಅವರು ಹೇಳಿಲ್ಲ. ಇಲ್ಲಿ ರಾಜ್ಯಪಾಲರಿಗೆ ಸಿಎಂ ರಾಜೀನಾಮೆ ಕೊಡುವುದು ಮಾತ್ರ ಬೇಕಿದೆ. ಅದಕ್ಕೆ ಒಂದೇ ಒಂದು ಸರಿಯಾದ ಕಾರಣ ನೀಡದೇ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರಿ 17ಎ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಇದಕ್ಕೆ ಕನಿಷ್ಠ ಎರಡು ನಿಯಮಗಳಿವೆ. ನೂರು ಪುಟಗಳ ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೇವಲ ಎರಡು ಪುಟಗಳ ಉತ್ತರ ನೀಡಿದ್ದಾರೆ. ಸಂಪುಟದ ನಿರ್ಧ ರ ಪರಿಗಣಿಸಲ್ಲ ಎಂದಿದ್ದಾರೆ. ಯಾವ ತನಿಖಾಧಿಕಾರಿ ಕೇಳಿದ್ದಾರೆ ಅನ್ನೋದು ಮುಖ್ಯ. ಅಲ್ಲದೆ ಯಾವ ಆರೋಪವಿದೆ ಅನ್ನೋದು ಅವರು ಹೇಳಬೇಕಿತ್ತು? ಬಿಎನ್‌ಎಸ್ ಎಸ್ 218 ಅಡಿಯೂ ಅನುಮತಿ ನೀಡಿದ್ದಾರೆ ಎಂದರು.

ಗವರ್ನರ್ ತಮ್ಮ ಆದೇಶದಲ್ಲಿ ಮಧ್ಯಪ್ರದೇಶ ಸರ್ಕಾರ & ಮಧ್ಯಪ್ರದೇಶ ಪೊಲೀಸ್ ಎಸ್ಟಾಬ್ಲಿಷ್ ಕೇಸ್ ಉಲ್ಲೇಖ ಮಾಡಿದ್ದಾರೆ ಎಂದು ಆರ್ಟಿಕಲ್ 163 ಬಗ್ಗೆ ಮನು ಸಿಂಘ್ವಿ ಉಲ್ಲೇಖಿಸಿ, ಹೌದು, ರಾಜ್ಯಪಾಲರಿಗೆ ಅಧಿಕಾರ ಇದೆ. ಆದರೆ ಒಂದು ಲೈನ್‌ನಲ್ಲಿ ಕ್ಯಾಬಿನೆಟ್ ನಿರ್ಧಾರ ತಿರಸ್ಕರಿಲು ಸಾಧ್ಯವಿಲ್ಲ. ಹಗರಣ ಸಂಬಂಧ ಮೂವರು ಅನುಮತಿ ಕೇಳಿದ್ದಾರೆ. ಟಿ.ಜೆ. ಅಬ್ರಹಾಂ ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡಿದ್ದಾರೆ. ಸಾಮಾನ್ಯವಾಗಿ ಒಂದು ದೂರು ನೀಡಿದರೆ ಅದನ್ನು ಪರಿಶೀಲನೆ ಮಾಡಲು ಸಮಯ ಬೇಕು. ಆದರೆ ದೂರು ನೀಡಿದ ದಿನವೇ ಶೋಕಾಸ್ ನೊಟೀಸ್ ನೀಡಿದ್ದಾರೆ. ಅಲ್ಲದೇ ಗವರ್ನರ್ ಮುಂದೆ 12 ಪ್ರಕರಣಗಳಲ್ಲಿ ಅನುಮತಿ ಕೇಳಲಾಗಿದೆ. ಆದರೆ ಅವುಗಳನ್ನು ಇನ್ನೂ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ | CM Siddaramaiah: ನಾನು ಡಲ್‌ ಆಗಿಲ್ಲ, ನನ್ನ ಹೋರಾಟದ ಜೋಶ್‌ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ

ಲ್ಯಾಂಡ್ ಡಿನೋಟಿಫಿಕೇಷನ್ ಪ್ರಕ್ರಿಯೆ ಹಾಗೂ ಭೂ ಪರಿವರ್ತನೆ ಸೇರಿ ಇಲ್ಲಿಯವರೆಗೆ ನಡೆದ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, 2004 ರಿಂದ 2010ರ ತನಕ ಸಿದ್ದರಾಮಯ್ಯ ಪಾತ್ರವೇ ಇಲ್ಲ. 1992ರಲ್ಲಿ ಮುಡಾ ಸ್ವಾಧೀನವನ್ನು 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. 2004ರಲ್ಳಿ ಸಿಎಂ ಬಾಮೈದನಿಗೆ ಮಾರಾಟ ಆಗಿದೆ. 2005ರಲ್ಲಿ ಕೃಷಿ ಜಮೀನಾಗಿ ಪರಿವರ್ತನೆ ಮಾಡಲಾಗಿದ್ದು, 2010ರಲ್ಲಿ ಸಿಎಂ ಪತ್ನಿಗೆ ದಾನಪತ್ರ ಮಾಡಲಾಗಿದೆ. ಬಹುತೇಕ ಸಮಯದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ. ಯಾವುದೂ ತರಾತುರಿಯಲ್ಲಿ ನಡೆದಿಲ್ಲ. 2020ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನಗಳನ್ನು ಹಂಚಲಾಗಿದೆ. 2022ರಲ್ಲಿ ಸೈಟ್‌ಗಳ ಕ್ರಯ ಆಗಿದೆ ಎಂದು ತಿಳಿಸಿದರು.

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಸೇರಿ ಹಲವರ ವಿರುದ್ದ ಅನುಮತಿ ಕೇಳಲಾಗಿದೆ.
ಈ ವಿಚಾರಗಳು ಪ್ರಾಸಿಕ್ಯೂಷನ್ ಅನುಮತಿ ನೀಡಲು ಮುಖ್ಯವೇ ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ ಉತ್ತರಿಸಿ, ರಾಜ್ಯಪಾಲರ ಶೋಕಾಸ್‌ ನೋಟಿಸ್‌ ಗೆ ಉತ್ತರ ನೀಡಲಾಗಿದೆ. ಅಲ್ಲದೇ ಈ ಬಗ್ಗೆ ಒಂದು ಆಯೋಗ ಸಹ ರಚನೆಯಾಗಿದೆ. ಆ ಕಮಿಟಿ ಈಗಾಗಲೇ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಸೇರಿ ಹಲವರ ವಿರುದ್ದ ಅನುಮತಿ ಕೇಳಲಾಗಿದೆ.
ಈ ವಿಚಾರಗಳು ಪ್ರಾಸಿಕ್ಯೂಷನ್ ಅನುಮತಿ ನೀಡಲು ಮುಖ್ಯವೇ ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ ಉತ್ತರಿಸಿ, ರಾಜ್ಯಪಾಲರ ಶೋಕಾಸ್‌ ನೋಟಿಸ್‌ ಗೆ ಉತ್ತರ ನೀಡಲಾಗಿದೆ. ಅಲ್ಲದೇ ಈ ಬಗ್ಗೆ ಒಂದು ಆಯೋಗ ಸಹ ರಚನೆಯಾಗಿದೆ. ಆ ಕಮಿಟಿ ಈಗಾಗಲೇ ತನಿಖೆ ನಡೆಸುತ್ತಿದೆ. ಟಿ.ಜೆ. ಅಬ್ರಾಹಂ ಒಬ್ಬ ಬ್ಲ್ಯಾಕ್ ಮೇಲರ್, ಆತನಿಗೆ ಸುಪ್ರೀಂ ಕೋರ್ಟ್ ದಂಡ ಹಾಕಿದೆ ಎಂದರು. ಆದರೆ, ಅದೆಲ್ಲಾ ಈಗ ಅವಶ್ಯಕತೆ ಇಲ್ಲ ಎಂದು ಜಡ್ಜ್ ನಾಗಪ್ರಸನ್ನ ಹೇಳಿದರು.

ಮುರುಗೇಶ್ ನಿರಾಣಿ, ಜೊಲ್ಲೆ, ಜನಾರ್ದನ ರೆಡ್ಡಿ ಸೇರಿ ಹಲವ ವಿರುದ್ಧದ ಅರ್ಜಿಗಳು ಬಾಕಿ ಇದೆ. ಈ ಎಲ್ಲಾ ವಿಚಾರವನ್ನ ಕ್ಯಾಬಿನೆಟ್ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ. ಹೊಸ‌ ಬಿಎನ್‌ಎಸ್ ಕಾಯ್ದೆಯಡಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಹೊಸ‌ ಕಾಯಿದೆಯ ಬದಲಾವಣೆ ಎಂದರೆ 420, ಈಗ ವಂಚನೆ ಅಲ್ಲ. 17ಎ ಅಡಿ ಯಾವುದೇ ಪೊಲೀಸ್ ಅಧಿಕಾರಿ ಪ್ರಾಸಿಕ್ಯೂಷನ್‌ಗೆ ಅನುಮತಿ‌ ಕೇಳಿಲ್ಲ. ಕರ್ತವ್ಯದ ಭಾಗವಾಗಿ ಸಿಎಂ ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ತೀರ್ಮಾನ ಮಾಡಿಲ್ಲ. ವಿವೇಚನಾರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಮೂಲಕ ಸಂವಿಧಾನದ 163ನೇ ವಿಧಿಯನ್ನು ಉಲ್ಲಂಘನೆ ಮಾಡಿದ್ದಾರೆ.

ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ

ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಕ್ಯಾಬಿನೆಟ್ ನಿರ್ಣಯದ ಉದ್ದೇಶ ಸಿಎಂ ಅನ್ನು ರಕ್ಷಿಸುವುದಾಗಿರಬಹುದು. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ವಿಚಾರದಲ್ಲಿ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರವಿದೆ ಎಂದು ತಿಳಿಸಿದರು.

ಇದೇ ವೇಳೆ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದರು. ಈ ವೇಳೆ ಅಭಿಷೇಕ್ ಸಿಂಘ್ವಿ ಮಧ್ಯೆ ಪ್ರವೇಶಿಸಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಆದೇಶ ಕಾಯ್ಡಿರಿಸಿದೆ. ಆದೇಶ ನೀಡಿದರೆ ಸಮಸ್ಯೆ ಆಗಲಿದೆ ಎಂದರು. ಈ ವೇಳೆ ಜಡ್ಜ್‌ ಪ್ರತಿಕ್ರಿಯಿಸಿ, ರಾಜ್ಯಪಾಲರ ಆದೇಶದ ಬಗ್ಗೆ ಸೆಷನ್ಸ್ ಕೋರ್ಟ್ ತೀರ್ಮಾನ ಮಾಡಲು ಸಾಧ್ಯವೇ? ಸಾಂವಿಧಾನಿಕ ವಿಚಾರವನ್ನು ಹೈಕೋರ್ಟ್ ತೀರ್ಮಾನ ಮಾಡಬೇಕು ಎಂದು ಹೇಳಿದರು. ಬಳಿಕ ಅರ್ಜಿ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದರು.

Continue Reading

ಬೆಂಗಳೂರು

Namma Metro : ನಾಳೆಯಿಂದ ಸೆಪ್ಟೆಂಬರ್‌ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್‌!

Namma Metro: ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣದ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜತೆಗೆ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರ ಮೆಟ್ರೋ ಓಡಾಟ ಬಂದ್‌ ಆಗಲಿದೆ.

VISTARANEWS.COM


on

By

Namma Metro
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ನಮ್ಮ ಮೆಟ್ರೋ ಕೈಗೆತ್ತಿಕೊಂಡಿದೆ. ಹೀಗಾಗಿ ಕೆಲವು ದಿನಗಳ ಕಾಲ ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ಹೊರಡಿಸಿದೆ. ಈ ಮೂಲಕ ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣದ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ

ಸೆಪ್ಟೆಂಬರ್‌ 11ರವರೆಗೆ ರೈಲು ಓಡಾಟ ಬಂದ್‌

ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆಗಸ್ಟ್‌ 20, 23, 30 ರಂದು ಹಾಗೂ ಸೆಪ್ಟೆಂಬರ್ 6 ಮತ್ತು 11ರಂದು ಪೂರ್ಣ ದಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇನ್ನೂ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆಗಸ್ಟ್ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಪ್ರಾರಂಭವಾಗಲಿದೆ. ಇನ್ನೂ 25ರಂದು ಮೊದಲ ರೈಲು ಸೇವೆಯು ಬೆಳಗ್ಗೆ 5ರ ಬದಲಾಗಿ 06.00 ಕ್ಕೆ ಪ್ರಾರಂಭವಾಗಲಿದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ ಆಗಸ್ಟ್‌ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.12 ಕ್ಕೆ ಪ್ರಾರಂಭವಾಗಲಿದೆ. 25 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ 05.00 ಕ್ಕೆ ಪ್ರಾರಂಭವಾಗಲಿದೆ. ಇನ್ನೂ ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಇದನ್ನೂ ಓದಿ: Murder case : ಪಿತ್ರಾರ್ಜಿತ ಆಸ್ತಿಗಾಗಿ ತಾರಕಕ್ಕೇರಿದ ಗಲಾಟೆ; ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

ಮೆಟ್ರೋ ಹಳಿ ಮೇಲೆ ಬಿದ್ದ ವ್ಯಕ್ತಿ; ಹಸಿರು ಮಾರ್ಗದ ರೈಲು ಸಂಚಾರ ಸ್ಥಗಿತ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಅವಘಡಗಳು (Namma Metro) ಮುಂದುವರಿದಿದೆ. ಆ.19ರ ಮಧ್ಯಾಹ್ನ 1:30ರ ಸುಮಾರಿಗೆ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಬಿದ್ದಿದ್ದಾನೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ವ್ಯಕ್ತಿ ಮೆಟ್ರೋ ಹಳಿ ಮೇಲೆ ಬಿದ್ದ ಪರಿಣಾಮ ಸುಮಾರು 15 ನಿಮಿಷಗಳ ಕಾಲ‌ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು.

ವ್ಯಕ್ತಿ ಹಸಿರು ಮಾರ್ಗದ ಮೆಟ್ರೋ ಹಳಿಯ ಮೇಲೆ ಬಿದ್ದ ಕೂಡಲೆ ಸೆಕ್ಯೂರಿಟಿ ತಕ್ಷಣ ಎಮರ್ಜೆನ್ಸಿ ಬಟನ್ ಉಪಯೋಗಿಸಿದ್ದಾರೆ. ಹಳಿ ಮೇಲೆ ಬಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆಕಸ್ಮಿಕವಾಗಿ ಬಿದ್ದಿದ್ದ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ತಿಳಿದು ಬಂದಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
BSNL 4G Plan
ಗ್ಯಾಜೆಟ್ಸ್4 mins ago

BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

Viral Video
Latest20 mins ago

Viral Video: ಎಲ್ಲ ಬಿಟ್ಟು ಟ್ರಾನ್ಸ್‌ಫಾರ್ಮರ್‌ ಏರಿ ಸತ್ತ ಕರಡಿ; ಮೃತ ದೇಹದ ಮೇಲೆ ಕೂತ ಲೈನ್‌ಮನ್!

Karnataka Weather Forecast
ಮಳೆ37 mins ago

Karnataka Weather : ಸಣ್‌ ಮಳೆಗೆ ಕೆರೆಯಂತಾದ ಬೆಂಗಳೂರಿನ ರಸ್ತೆಗಳು; ನಾಳೆಗೂ ಅಲರ್ಟ್‌

Kannada New Movie
ಬೆಂಗಳೂರು47 mins ago

Kannada New Movie: ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್‌ನ ʼಫಾರೆಸ್ಟ್ʼ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್‌

ಕ್ರೀಡೆ58 mins ago

Ishan Kishan : ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದು ಮೂಲಕ ಬಿಸಿಸಿಐಗೆ ಪ್ರತ್ಯುತ್ತರ ಕೊಟ್ಟ ಇಶಾನ್ ಕಿಶನ್​

Shiva Rajkumar new look with Yash on the movie set Why did the rocking star visit?
ಸ್ಯಾಂಡಲ್ ವುಡ್59 mins ago

Shiva Rajkumar: ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ; ರಾಕಿಂಗ್‌ ಸ್ಟಾರ್‌ ಭೇಟಿ ಮಾಡಿದ್ದೇಕೆ?

Muda Scam
ಕರ್ನಾಟಕ1 hour ago

Muda Scam: ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್‌; ರಿಟ್‌ ಅರ್ಜಿ ವಿಚಾರಣೆ ಆ.29ಕ್ಕೆ ಮುಂದೂಡಿದ ಹೈಕೋರ್ಟ್‌

Namma Metro
ಬೆಂಗಳೂರು1 hour ago

Namma Metro : ನಾಳೆಯಿಂದ ಸೆಪ್ಟೆಂಬರ್‌ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್‌!

Viral Video
ವಿದೇಶ2 hours ago

Viral Video: ತ್ರಿವರ್ಣ ಧ್ವಜ ಹರಿದು, ಗೋ ಬ್ಯಾಕ್‌ ಇಂಡಿಯಾ ಘೋಷಣೆ- ಖಲಿಸ್ತಾನಿಗಳ ಅಟ್ಟಹಾಸ; ವಿಡಿಯೋ ವೈರಲ್‌

Viral Video
Latest2 hours ago

Viral Video: ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ಕಾನ್‌ಸ್ಟೇಬಲ್‌ ತಾನೇ ಚಕ್ಕಂದ ಶುರು ಮಾಡಿದ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌