ಬೆಂಗಳೂರು: ಬಂಡಾಯ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಜೊತೆಗಿನ ಮಾತುಕತೆ ಸಕ್ಸಸ್ ಆಗಿದ್ದು, ಇಂದು ಅವರ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶೆಟ್ಟರ್ ಅವರ ಬಹುತೇಕ ಬೇಡಿಕೆಗಳ ಈಡೇರಿಕೆಗೆ ಕಾಂಗ್ರೆಸ್ ನಾಯಕರು ಸಮ್ಮತಿಸಿದ್ದಾರೆ. ನಿನ್ನೆ ರಾತ್ರಿ ಶೆಟ್ಟರ್ ಜೊತೆ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್, ಎಸ್ ಎಸ್ ಮಲ್ಲಿಕಾರ್ಜುನ್ ಮಾತುಕತೆ ನಡೆಸಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಮುಗಿದ ಶೆಟ್ಟರ್ ಜೊತೆಗಿನ ಮಾತುಕತೆ ಮುಗಿದಿದೆ. ಜಗದೀಶ್ ಶೆಟ್ಟರ್ ಕೈ ಪಾಳ್ಯ ಸೇರಲು ಬೆಳಗ್ಗೆ 8.15ಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಬೆಳಗ್ಗೆ 8.30ಕ್ಕೆ ಕೆಪಿಸಿಸಿಗೆ ಬನ್ನಿ, ಜಗದೀಶ್ ಶೆಟ್ಟರ್ ಅಲ್ಲಿಗೆ ಬರುತ್ತಾರೆ. ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ಮುಖಂಡ ಎಸ್. ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶೆಟ್ಟರ್ ಅವರನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಭೇಟಿ ಮಾಡಿದ್ದರು. ಸ್ಕೈ ಗಾರ್ಡನ್ ಅಪಾರ್ಟ್ಮೆಂಟ್‌ನಲ್ಲಿರುವ ಜಗದೀಶ್ ಶೆಟ್ಟರ್ ನಿವಾಸಕ್ಕೆ ಒಂದೇ ಕಾರಿನಲ್ಲಿ ಸಿದ್ದರಾಮಯ್ಯ ಜೊತೆ ಜಮೀರ್ ಅಹ್ಮದ್ ಆಗಮಿಸಿದ್ದರು. ನಂತರ ಡಿಕೆಶಿ ಜೊತೆಗೆ ರಣದೀಪ್ ಸುರ್ಜೆವಾಲ ಆಗಮಿಸಿದ್ದರು.
ಮಾತು ಮುಗಿಸಿ ಹೊರ ಬಂದ ಕಾಂಗ್ರೆಸ್ ನಾಯಕರು ಬಳಿಕ ಹೊರಬಂದು ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆದಿದೆ. ಪಕ್ಷದೊಳಗಿನ ಸ್ಥಾನಮಾನ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ನಾಯಕರೊಂದಿಗೆ ಸಭೆ; ಇನ್ನೂ ನಿರ್ಧಾರ ತಿಳಿಸದ ಜಗದೀಶ್ ಶೆಟ್ಟರ್