Site icon Vistara News

Karnataka Election : 25 ಸಂಸದರು ನರ ಸತ್ತ ನಾಮರ್ದ ನನ್ಮಕ್ಳು; ಮಾತಿನ ಭರದಲ್ಲಿ ಆಕ್ಷೇಪಾರ್ಹ ಪದ ಬಳಸಿದ ಇಬ್ರಾಹಿಂ

karnataka jds president CM Ibrahim resigns

karnataka-election: JDS state Preident CM Ibrahim calls 25 BJP MPs impotent

ಮೈಸೂರು: “ಸಂಸದರು ನರ ಸತ್ತ ನಾಮರ್ದ ನನ್ನ ಮಕ್ಕಳು”- ಹೀಗೆಂದು ವಿವಾದಾತ್ಮಕ, ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (CM Ibrahim). ಮೈಸೂರು ಜಿಲ್ಲೆಯ ತಿ.ನರಸೀಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ (Karnataka Election 2023) ಅವರು ಮಾತನಾಡಿದರು.

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ (HD Devegowda) ಅವರು ಪ್ರಚಾರ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಬಂದಾಗ ಬರಲಿಲ್ಲ. ರಾಜ್ಯದಲ್ಲಿ ಮಳೆ ಬಂದು ಜನ, ಮನೆ ಕೊಚ್ಚಿಕೊಂಡು ಹೋದಾಗ ಬರಲಿಲ್ಲ. ರಾಜ್ಯದ ಸಂಕಷ್ಟಗಳ ಬಗ್ಗೆ ಸಂಸದರು ಲೋಕಸಭೆಯಲ್ಲಿ ಮಾತನಾಡುತ್ತಿಲ್ಲ. 25 ಸಂಸದರು ನರ ಸತ್ತ ನಾಮರ್ದ ನನ್ನ ಮಕ್ಕಳು. ಮುಂಡೆ ಮಕ್ಳು ಒಬ್ಬರೂ ಮಾತನಾಡುವುದಿಲ್ಲʼʼ ಎಂದು ಭಾಷಣದ ಭರದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದರು.

ಎಲ್ಲಿಂದಲೋ ಬಂದವರು ನಾಯಕರಲ್ಲ, ನಮಗಿರುವುದು ನಮ್ಮೂರ ನಾಯಕ

ʻʻಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಿಂತಲೂ ನಾಡು ಉಳಿಯಬೇಕಿರುವುದು ಮುಖ್ಯ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದರೂ ಮೂಲ ಸೌಕರ್ಯ ಸಮಸ್ಯೆ ಬಗೆಹರಿದಿಲ್ಲ. 11 ತಿಂಗಳಿಗೆ ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದರು. ಇಲ್ಲದಿದ್ದರೆ ದೇಶ ಇನ್ನಷ್ಟು ಅಭಿವೃದ್ಧಿ ಹೊಂದುತ್ತಿತ್ತುʼʼ ಎಂದು ಹೇಳಿದ ಅವರು, ʻʻನನಗೆ ನರೇಂದ್ರ ಮೋದಿ ಬಗ್ಗೆ ಸಿಟ್ಟಿಲ್ಲ. ಎಲ್ಲಿಂದಲೋ ಬಂದ ಮೋದಿ, ಸೋನಿಯಾ ಗಾಂಧಿ ನಮ್ಮ ನಾಯಕರಲ್ಲ. ನಮ್ಮ ನಾಯಕ, ನಮ್ಮೂರ ವೃಕ್ಷ ಎಚ್.ಡಿ.ದೇವೇಗೌಡʼʼ ಎಂದರು.

ಮದುವೆಗೆ ಹುಡುಗಿ ಬದಲು ಅಪ್ಪನ್ನ ತೋರಿಸ್ತಾರೆ ಅಂತ ಮೋದಿಗೆ ಗೇಲಿ!

ಹುಡುಗಿ ನೋಡಲು ಹೋದಾಗ ಮದುವೆ ಹುಡುಗನ ಮುಖ ತೋರಿಸಿ ವಧು ಕೇಳಬೇಕು. ಆದರೆ, ಇಲ್ಲಿ ಅವರ ಅಪ್ಪನನ್ನು ತೋರಿಸಿ ಹುಡುಗಿ ಕೇಳುತ್ತಿದ್ದಾರೆ- ಹೀಗೆ ಅವರು ಛೇಡಿಸಿದ್ದು ಬಿಜೆಪಿ ಮತ್ತು ಕಾಂಗ್ರೆಸನ್ನು. ಬಿಜೆಪಿ ಕಾಂಗ್ರೆಸ್‌ನವರು ತಮ್ಮ ಸ್ಥಳೀಯ ನಾಯಕರನ್ನು ತೋರಿಸೊಲ್ಲ. ಬಿಜೆಪಿಯವರು ಮೋದಿ, ಕಾಂಗ್ರೆಸ್‌ನವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ತೋರಿಸುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಎಚ್‌ಡಿಕೆ ಸಿಎಂ ಆದ್ರೆ ಮೊಹಮ್ಮದೀಯರಿಗೆ ಶಕ್ತಿ ಎಂದ ಇಬ್ರಾಹಿಂ

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಮೊಹಮ್ಮದೀಯರಿಗೆ ಶಕ್ತಿ ಬರುತ್ತದೆ ಎಂದು ಉರ್ದು ಭಾಷೆಯಲ್ಲಿ ಮಾತನಾಡುತ್ತಾ ಸಿ.ಎಂ. ಇಬ್ರಾಹಿಂ ಹೇಳಿದರು. ತಿ. ನರಸೀಪುರದಲ್ಲಿ ಅಶ್ವಿನ್ ಕುಮಾರ್ ಶಾಸಕರಾಗಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಆಗಲೇ ನಮಗೆ ಶಕ್ತಿ ಎಂದರು.

ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ದೇವೇಗೌಡರು

ಡಾ.ಎಚ್.ಸಿ.ಮಹದೇವಪ್ಪ ಬೆಳೆದಿದ್ದು ಜೆಡಿಎಸ್‌ನಿಂದಾಗಿ, ದೇವೇಗೌಡರು ಅವರಿಗೆ ದೊಡ್ಡ ಖಾತೆ ಕೊಟ್ಟರು. ಅವರಿಗೆ ಉಪಕಾರ ಸ್ಮರಣೆ ಇದೆಯಾ? ಎಂದು ಕೇಳಿದ ಇಬ್ರಾಹಿಂ, ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ದೇವೇಗೌಡ ಎಂದರು.

ʻʻಮಹದೇವಣ್ಣ, ಸಿದ್ದರಾಮಣ್ಣ ಹೇಳ್ರಣ್ಣ… ಜಿಲ್ಲಾ ಪಂಚಾಯಿತಿಯಲ್ಲಿ ಮೀಸಲಾತಿ ಜಾರಿ ಮಾಡಿವರು ಯಾರು?ʼ ಎಂದು ಕೇಳಿದರು. ದೇವೇಗೌಡರು ಬಸವಣ್ಣನ ಮಾದರಿಯಲ್ಲಿ ದಲಿತ, ಹಿಂದುಳಿದವರನ್ನು ಬೆಳೆಸಿದರು. ಮುಂದುವರಿದವರನ್ನು ತಂದು ಕೂರಿಸಲಿಲ್ಲ ಎಂದು ನೆನಪಿಸಿದರು.

ಇದನ್ನೂ ಓದಿ : Karnataka Election: ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ; ಡಿ.ಕೆ.ಶಿವಕುಮಾರ್ ಪ್ರಶ್ನೆ

Exit mobile version