ಮೈಸೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರ ಕ್ಷೇತ್ರವೇ ಫೈನಲ್ ಅಲ್ಲ. ಕೊನೆಯ ಕ್ಷಣದಲ್ಲಿ ಕ್ಷೇತ್ರ ಬದಲಾವಣೆ ಆಗಬಹುದು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡುವ ಮೂಲಕ ಇನ್ನೂ ಯಾವುದೂ ತೀರ್ಮಾನ ಆಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಸಿದ್ದರಾಮಯ್ಯ ಅವರ ಸ್ಪರ್ಧಾ ಕ್ಷೇತ್ರ ಇನ್ನೂ ನಿಗೂಢವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಈಚೆಗೆ ಅಲ್ಲಿ ನಡೆದಿದ್ದ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು. ಆದರೆ, ಹೈಕಮಾಂಡ್ ತೀರ್ಮಾನವೇ ಅಂತ ಎಂದೂ ಸಹ ಹೇಳಿಕೊಂಡಿದ್ದರು. ಈಗ ಈ ಹೇಳಿಕೆಗೆ ಪುಷ್ಟಿ ನೀಡುವಂತೆ ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಇನ್ನೂ ತೀರ್ಮಾನವಾಗಿಲ್ಲ- ಯತೀಂದ್ರ
ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಂಡ್ಯದಲ್ಲಿ ಮನೆದೇವರ ಅರ್ಚಕರು ಎರಡು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ, ಎರಡೂ ಕಡೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿರುವುದನ್ನು ನಾನು ಯಾವ ರೀತಿ ಸ್ವೀಕರಿಸಬೇಕು ಎಂದೇ ಯೋಚಿಸಿಲ್ಲ. ಇದನ್ನು ತಂದೆಯವರ ಬಳಿಯೂ ಚರ್ಚೆ ಮಾಡಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ | PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ
ಅಲ್ಲದೆ, ಅರ್ಚಕರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ. ಎರಡೂ ಕ್ಷೇತ್ರದಲ್ಲಿ ನಿಲ್ಲುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟಿದೆ. ಹೈಕಮಾಂಡ್ ಇದನ್ನು ತೀರ್ಮಾನ ಮಾಡುತ್ತದೆ. ಚುನಾವಣೆ ದಿನಾಂಕ ಘೋಷಣೆ ಇನ್ನೂ ತಿಂಗಳ ಮೇಲಿದೆ. ಆ ಕ್ಷಣದ ರಾಜಕೀಯ ಸನ್ನಿವೇಶ ನೋಡಿ ತೀರ್ಮಾನ ಮಾಡುತ್ತಾರೆ. ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರವೇ ಅಂತಿಮ ಅಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಯಾವುದೇ ಚುನಾವಣೆ ಗೆಲ್ಲಲು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಆಗಲೇ ಚುನಾವಣೆಯನ್ನು ಸರಿಯಾಗಿ ನಡೆಸಲು ಆಗುತ್ತದೆ. ಅದಕ್ಕಾಗೇ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಅರ್ಥ ಅವರು ನೂರರಷ್ಟು ಕೋಲಾರದಲ್ಲೇ ನಿಲ್ಲುತ್ತಾರೆ ಎಂದು ಅರ್ಥ ಅಲ್ಲ. ಬೇರೆ ಕಡೆಯೂ ಸ್ಪರ್ಧೆ ಮಾಡಬಹುದು. ಅಂದಿನ ರಾಜಕೀಯ ಸನ್ನಿವೇಶವನ್ನು ಗಮನಿಸಿ ತೀರ್ಮಾನ ಮಾಡುತ್ತಾರೆ ಎಂದು ಯತೀಂದ್ರ ಹೇಳಿದರು.
ಇದನ್ನೂ ಓದಿ | Supreme Court | ನಿಮ್ಮದೇ ಅಧಿಕಾರ ನಡೆಯಬೇಕು ಎಂದಾದ್ರೆ, ಚುನಾಯಿತ ಸರ್ಕಾರ ಏಕೆ ಬೇಕು? ಕೇಂದ್ರಕ್ಕೆ ಸುಪ್ರೀಂ