Site icon Vistara News

Karnataka Election: ರಾಜ್ಯದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಮತದಾರರು ಇರುವ ಕ್ಷೇತ್ರಗಳ ಮಾಹಿತಿ ಇಲ್ಲಿದೆ

karnataka election more voters and less voters constituency details

#image_title

ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Election) ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆಯಾಗಲಿದೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 5,23,63,948 ಮತದಾರರಿದ್ದಾರೆ.
ಪುರುಷ ಮತದಾರರ ಸಂಖ್ಯೆ 2,63,32,445
ಮಹಿಳಾ ಮತದಾರರ ಸಂಖ್ಯೆ 2,60,26,752
ತೃತೀಯ ಲಿಂಗಿಗಳ ಸಂಖ್ಯೆ 4,751 ಇದೆ.
18-19 ವರ್ಷದ ಮತದಾರರ ಸಂಖ್ಯೆ 9,58,806
80 ವರ್ಷ ದಾಟಿದ ಮತದಾರರ ಸಂಖ್ಯೆ 12,15,142
ಅಂಗವಿಕಲ ಮತದಾರರ ಸಂಖ್ಯೆ 5,60,908 ಇದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಮತದಾರರನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿದ್ದು, 6,77,247 ಮತದಾರರಿದ್ದಾರೆ. ಕರ್ನಾಟಕದಲ್ಲಿ ಅತಿ ಕಡಿಮೆ ಮತದಾರರನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರ(1,68,564) ಹೊಂದಿದೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳಿದ್ದು, ಬೆಳಗಾವಿ ಜಿಲ್ಲೆಯು ಅತಿಹೆಚ್ಚು-4434- ಮತಗಟ್ಟೆಗಳನ್ನು ಹೊಂದಿದೆ. ಕೊಡಗು ಜಿಲ್ಲೆಯು ಅತಿ ಕಡಿಮೆ-542- ಮತಗಟ್ಟೆಗಳನ್ನು ಹೊಂದಿದೆ.

ಕನಿಷ್ಠ ಮೂಲಭೂತ ಸೌಕರ್ಯ

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಮತಗಟ್ಟೆಗಳಲ್ಲೂ ಕನಿಷ್ಠ ಮೂಲಭೂತ ಸೌಕರ್ಯ ನೀಡಲು ಚುನಾವಣಾ ಆಯೋಗ ಮುಂದಾಗಿದೆ. ಅಂಗವಿಕಲರು, ವೃದ್ಧರಿಗಾಗಿ ರ‍್ಯಾಂಪ್‌ ಸೌಲಭ್ಯವನ್ನು ಶೇ. 98.63 ಮತಗಟ್ಟೆಗಳಲ್ಲಿ ರೂಪಿಸಲಾಗಿದೆ. ಕುಡಿಯುವ ನೀರು ಶೇ.99.86, ವಿದ್ಯುತ್‌ ಸಂಪರ್ಕ ಶೇ. 99.55, ಪೀಠೋಪಕರಣಗಳು ಶೇ.99.84, ಕಾಯುವ ಕೊಠಡಿಗಳು ಶೇ.99.45, ಪುರುಷರ ಶೌಚಾಲಯ ಶೇ.98.41, ಮಹಿಳೆಯರ ಶೌಚಾಲಯ ಶೇ.98.10, ಮಾರ್ಗಸೂಚಿ ಫಲಕಗಳನ್ನು ಶೇ.98.36 ಮತಗಟ್ಟೆಗಳಲ್ಲಿ ಅಳವಡಿಸಲಾಗಿದೆ. ಮತಗಟ್ಟೆ ಸ್ಥಾಪನೆಗೆ ಇನ್ನೂ ಸಮಯ ಇರುವುದರಿಂದ ಶೇ. 100 ಮತಗಟ್ಟೆಗಳಲ್ಲೂ ಕನಿಷ್ಠ ಮೂಲಸೌಕರ್ಯ ನೀಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ

Exit mobile version