Site icon Vistara News

Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಮೇನಿಯಾ, ಹರಿದುಬಂದ ಜನಸಾಗರ

Modi Roadshow

Modi Roadshow

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ (Modi In Karnataka) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್‌ ರೋಡ್‌ ಶೋ ನಡೆಸುತ್ತಿದ್ದಾರೆ. ನೈಸ್‌ ರೋಡ್‌ ಜಂಕ್ಷನ್‌ನಿಂದ ಮೋದಿ ರೋಡ್‌ ಶೋ ಆರಂಭವಾಗಿದ್ದು, ಲಕ್ಷಾಂತರ ಜನ ಪ್ರಧಾನಿ ಅವರನ್ನು ಸ್ವಾಗತಿಸಿದ್ದಾರೆ. ‌

ಮೋದಿಗೆ ಜನರಿಂದ ಹೂಮಳೆ

ಮೋದಿ ರೋಡ್‌ ಶೋ ಸಾಗುವ ರಸ್ತೆಗಳುದ್ದಕ್ಕೂ ಜನ ನಿಂತಿದ್ದು, ಹೂಮಳೆಯ ಮೂಲಕ ಪ್ರಧಾನಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ತೆರೆದ ವಾಹನದಲ್ಲಿ ಸುಮಾರು 5.3 ಕಿ.ಮೀ ರೋಡ್‌ ಶೋ ಸಾಗಿದ್ದು, ಪ್ರಧಾನಿಗೆ ಡಿ.ವಿ.ಸದಾನಂದಗೌಡ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಸಾಥ್‌ ನೀಡಿದರು.

ರೋಡ್‌ ಶೋ ವೇಳೆ ಯುವತಿಯರ ಮಸ್ತ್‌ ಡ್ಯಾನ್ಸ್

ಮೋದಿ ಅವರ ರೋಡ್‌ ಶೋ ಮೂರು ವಿಧಾನಸಭೆ ಕ್ಷೇತ್ರಗಳ ಮೂಲಕ ಸಾಗಿದೆ. ಹಾಗೆಯೇ, 9 ವಿಧಾನಸಭೆ ಕ್ಷೇತ್ರಗಳ ಜನರು ಭಾಗವಹಿಸಿದ್ದಾರೆ. ಮೋದಿ ಅವರ ರೋಡ್‌ ವೀಕ್ಷಿಸಲು ರಾಜಸ್ಥಾನ ಬಿಜೆಪಿ ಶಾಸಕ ಅವಿನಾಶ್‌ ಗೆಹ್ಲೋಟ್‌ ಅವರು ಆಗಮಿಸಿರುವುದು ವಿಶೇಷವಾಗಿದೆ.

ಪುಟಾಣಿ ಮೋದಿ

ಮೋದಿ ರೋಡ್‌ ಶೋ ಉದ್ದಕ್ಕೂ ಜನ ಜೈಕಾರ ಹಾಕಿದ್ದಾರೆ. ಇದರೊಂದಿಗೆ ಬೆಂಗಳೂರಿನ ಹಲವು ವಿಧಾನಸಭೆ ಕ್ಷೇತ್ರಗಳ ಮತದಾರರ ಮೇಲೆ ಪ್ರಭಾವ ಬೀರುವುದು ರೋಡ್‌ ಶೋ ಉದ್ದೇಶವಾಗಿದೆ. ಸುಮನಹಳ್ಳಿ ಜಂಕ್ಷನ್‌ವರೆಗೆ ರೋಡ್‌ ಶೋ ಸಾಗಿದೆ.

ಇದನ್ನೂ ಓದಿ: Modi in Karnataka : ತನ್ನ ವಿರುದ್ಧದ 91 ಬೈಗುಳಗಳ ಲೆಕ್ಕ ಇಟ್ಟ ಮೋದಿ; ಮೊದಲ ದಿನ 9 ಟಾರ್ಗೆಟ್‌

Exit mobile version