Site icon Vistara News

Karnataka Election: ನಾಳೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ, ಕಾಂಗ್ರೆಸ್ ʼವೋಕಲ್‌ ಫಾರ್‌ ಲೋಕಲ್‌ʼ ಪ್ರಚಾರದ ಮೆಗಾ ಪ್ಲ್ಯಾನ್!‌ ‌

Priyanka Gandhi to visit karnataka for Vocal for Local campaign

ಬೆಂಗಳೂರು: ಚುನಾವಣಾ (Karnataka Election) ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ರಾಜ್ಯಕ್ಕೆ ಪ್ರವೇಶಿಸುತ್ತಿದ್ದಾರೆ.

ಇಂದು ಪ್ರಿಯಾಂಕ ಸಹೋದರ ರಾಹುಲ್ ಗಾಂಧಿ (Rahul Gandhi) ಅವರು ಎರಡು ದಿನದ ಪ್ರವಾಸ ಮುಗಿಸಿ ರಾಜ್ಯದಿಂದ ನಿರ್ಗಮಿಸುತ್ತಿದ್ದಾರೆ. ನಾಳೆ ಸಹೋದರಿ ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಪ್ರವೇಶಿಸುತ್ತಿದ್ದಾರೆ. ಹಳೇ ಮೈಸೂರು ಭಾಗದ ಟಿನರಸೀಪುರ, ಹನೂರು, ಕೆ.ಆರ್ ನಗರದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಮಹಿಳೆಯರ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಸೆಳೆಯಲು ಪ್ರಿಯಾಂಕ ಗಾಂಧಿ (Priyanka Gandhi) ಅವರ ಪ್ರಚಾರ ನೆರವಾಗಲಿದೆ ಎಂದು ಊಹಿಸಲಾಗಿದೆ. ಕಳೆ ಬಾರಿ ಪ್ರಿಯಾಂಕ ಭೇಟಿ ನೀಡಿದಾಗ ಗೃಹ ಲಕ್ಷ್ಮಿ ಗ್ಯಾರಂಟಿ ಘೋಷಣೆ ಮಾಡಿದ್ದರು. ಈ ಬಾರಿ ಯಾವ ಹೊಸ ಭರವಸೆ ನೀಡಲಿದ್ದಾರೆ ಎಂಬ ಕುತೂಹಲ ಮೂಡಲಿದೆ.

ಪ್ರಿಯಾಂಕ ಆಗಮನದೊಂದಿಗೆ ರಾಜ್ಯ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮೆಗಾ ಪ್ಲಾನ್‌ ಸಿದ್ಧಪಡಿಸಿದೆ. ಎಲ್ಲಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದು, 224 ಕ್ಷೇತ್ರಗಳಲ್ಲೂ ಪ್ರಚಾರ ಭರಾಟೆಯಿಂದ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ, ಯಾರ್ಯಾರು ಎಷ್ಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡಬೇಕು ಎಂದು ಯೋಜನೆ ರೂಪಿಸಿದೆ.

ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 30-32 ಕ್ಷೇತ್ರಗಳಲ್ಲಿ, ರಾಹುಲ್ ಗಾಂಧಿ 30 ಕ್ಷೇತ್ರಗಳಲ್ಲಿ ಹಾಗೂ ಇತರೆಡೆ ಅವಶ್ಯವಿರುವಲ್ಲಿ, ಪ್ರಿಯಾಂಕಾ ಗಾಂಧಿ 30 ಕ್ಷೇತ್ರಗಳಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ‌.ಕೆ ಶಿವಕುಮಾರ್ 63-66 ಕ್ಷೇತ್ರಗಳಲ್ಲಿ, ವಿಪಕ್ಷ ನಾಯಕ ಸಿದ್ದರಾಮಯ್ಯ 60-66 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಉಳಿದ ಹಿರಿಯ ನಾಯಕರು ಇವರಿಗೆ ಸಾಥ್‌ ನೀಡಲಿದ್ದಾರೆ. ಯಾವ ಜಿಲ್ಲೆಯಲ್ಲಿ ಪ್ರಚಾರ ಇರುತ್ತದೋ ಆ ಜಿಲ್ಲೆಯ ಪ್ರಭಾವಿ ಹಾಗೂ ಹಿರಿಯ ನಾಯಕರು ಭಾಗಿಯಾಗಬೇಕು. ಸ್ಟಾರ್ ಪ್ರಚಾರಕರು ಸಹ ತೊಡಗಬೇಕಿದೆ.

ಕೈ ಪ್ರಚಾರದ ಬ್ಲೂ ಪ್ರಿಂಟ್‌‌ನಲ್ಲಿ ʼವೋಕಲ್ ಫಾರ್ ಲೋಕಲ್ʼ ಮಾದರಿಯನ್ನೂ ಅಳವಡಿಸಲಾಗಿದೆಯಂತೆ. ಹಾಗೆಂದರೆ, ವೇದಿಕೆಯ ಮೇಲೆ ಅಭ್ಯರ್ಥಿಗೆ ಮೊದಲ ಆದ್ಯತೆ ಹಾಗೂ ಸ್ಥಳೀಯ ನಾಯಕರಿಗೆ ಹೆಚ್ಚಿನ ಒತ್ತು ನೀಡುವುದು. ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪ ಮಾಡುವುದು. ಜತೆಗೆ ಬಿಜೆಪಿಯ ಸ್ಥಳೀಯ ಎಡವಟ್ಟುಗಳ ಬಗ್ಗೆ ಪ್ರಸ್ತಾಪ ಮಾಡುವುದು. 40% ಕಮಿಷನ್ ಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಅಟ್ಯಾಕ್ ಮಾಡುವುದು, ವಿಶೇಷವಾಗಿ ಸಚಿವರ, ಬಿಜೆಪಿ ಪ್ರಭಾವಿ ನಾಯಕರ ಕ್ಷೇತ್ರಗಳಲ್ಲಿ ಈ ಅಸ್ತ್ರ ಪ್ರಯೋಗ ಮಾಡುವುದು, ರಾಷ್ಟ್ರೀಯ ವಿಷಯಗಳನ್ನು ಬಿಟ್ಟು ಸ್ಥಳೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು- ಇವುಗಳನ್ನು ಕೇಂದ್ರೀಕರಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Karnataka Election 2023: ವರುಣದಲ್ಲಿ ಸೋಮಣ್ಣಗೆ ಕಾಂಗ್ರೆಸ್‌ ಕಾರ್ಯಕರ್ತರ ಮುತ್ತಿಗೆ; ಸಿದ್ದರಾಮಯ್ಯ ಪರ ಘೋಷಣೆ

Exit mobile version