ಬೆಂಗಳೂರು: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಅಲ್ಪ ಮುನ್ನಡೆಯಲ್ಲಿದೆ. ಬಿಜೆಪಿ ಸನಿಹದಲ್ಲೇ ಇದೆ.
ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿ 95 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 105 ಸ್ಥಾನಗಳಲ್ಲಿ ಮುಂದಿದೆ. ಜೆಡಿಎಸ್ 16 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಪಕ್ಷೇತರರು ಐದು ಕಡೆ ಆರಂಭಿಕ ಮುನ್ನಡೆ ಪಡೆದಿದ್ದಾರೆ.
ರಾಜ್ಯದ 34 ಮತ ಎಣಿಕೆ ಕೇಂದ್ರಗಳಲ್ಲಿ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ಕೆಲವು ಕಡೆ ಮುಕ್ತಾಯದ ಹಂತಕ್ಕೆ ಬರುತ್ತಿದೆ. ಇನ್ನು ಕೆಲವು ಕಡೆ ಇನ್ನೂ ಮತ ಎಣಿಕೆ ಆರಂಭವಾಗಿಯೇ ಇಲ್ಲ.
ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಮುನ್ನಡೆಯಲ್ಲಿದ್ದಾರೆ.
ಬಿಜೆಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿವೈ ವಿಜಯೇಂದ್ರ ಆರಂಭಿಕ ಮುನ್ನಡೆಯಲ್ಲಿದ್ದಾರೆ. ಅಂಚೆ ಮತಗಳ ಆರಂಭಿಕ ಲೆಕ್ಕಾಚಾರದಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹಿನ್ನಡೆಯಲ್ಲಿದ್ದಾರೆ.
ಇದೆಲ್ಲವೂ ತುಂಬ ಪ್ರಾಥಮಿಕ ಹಂತದ ಮಾಹಿತಿಯಾಗಿದ್ದು, ಇವಿಎಂ ಮೆಷಿನ್‌ಗಳನ್ನು ತೆಗೆದು ಮತ ಎಣಿಕೆ ಆರಂಭ ಮಾಡಿದಾಗಲೇ ನಿಜವಾದ ಲೆಕ್ಕಾಚಾರ ಶುರುವಾಗುವುದು.
ಇದನ್ನೂ ಓದಿ: Karnataka Election 2023 : ಇನ್ನು ಕೆಲವೇ ಕ್ಷಣಗಳಲ್ಲಿ ಕೌಂಟಿಂಗ್ ಶುರು : ಮತ ಎಣಿಕೆ ಹೇಗೆ ಗೊತ್ತೇ?