Site icon Vistara News

Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಭಾರಿ ಸೋಲು

BJP karnataka

BJP lose in karnataka

ಬೆಂಗಳೂರು: ರಾಜ್ಯ ವಿಧಾನಸಭೆಯ (Karnataka Election results 2023) 224 ಕ್ಷೇತ್ರಗಳಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಕೇವಲ 65 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಜೆಡಿಎಸ್‌ 19 ಸ್ಥಾನ ಪಡೆದಿದ್ದರೆ ನಾಲ್ವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಹಾಲಿ ವಿಧಾನಸಭೆಯಲ್ಲಿ 120 ಬಿಜೆಪಿ ಶಾಸಕರಿದ್ದರು. ಇವರ ಪೈಕಿ 61 ಮಂದಿ ಸೋಲು ಕಂಡಿದ್ದಾರೆ. ಇದು ಆಡಳಿತ ವಿರೋಧಿ ಅಲೆಯ ಸ್ಪಷ್ಟ ಸೂಚನೆಯಾಗಿದ್ದು, ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ. ಬಿಜೆಪಿ ಸುಮಾರು 20 ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿರಲಿಲ್ಲ. ಅಂದರೆ,‌ ಹಾಲಿ ಶಾಸಕರು ಕಣಕ್ಕಿಳಿದದ್ದು ಕೇವಲ 100 ಕ್ಷೇತ್ರಗಳಲ್ಲಿ ಮಾತ್ರ. ಅದರಲ್ಲೇ 61 ಮಂದಿಗೆ ಸೋಲಾಗಿದೆ.

ಸೋತಿರುವ ಹಾಲಿ ಬಿಜೆಪಿ ಶಾಸಕರು
1. ಅಥಣಿ – ಮಹೇಶ್ ಕುಮಟಳ್ಳಿ
2. ಕುಡಚಿ – ಪಿ. ರಾಜೀವ್
3. ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
4. ಕಾಗವಾಡ – ಶ್ರೀಮಂತ ಪಾಟೀಲ್
5. ಮುದೋಳ್ – ಗೋವಿಂದ ಕಾರಜೋಳ
6. ಬೀಳಗಿ – ಮುರುಗೇಶ್‌ ನಿರಾಣಿ
7. ಬಾಗಲಕೋಟೆ – ವೀರಣ್ಣ ಚರಂತಿಮಠ
8. ಹುನಗುಂದ – ದೊಡ್ಡನಗೌಡ ಪಾಟೀಲ್
9. ಮುದ್ದೇಬಿಹಾಳ – ನಡಹಳ್ಳಿ
10. ದೇವರಹಿಪ್ಪರಗಿ – ಸೋಮನ ಗೌಡ ಪಾಟೀಲ್
11. ಸಿಂದಗಿ – ರಮೇಶ್ ಭೂಸನೂರು
12. ಸುರಪುರ – ರಾಜುಗೌಡ
13. ಯಾದಗಿರಿ – ಮುದ್ನಾಳ್
14. ಸೇಡಂ – ರಾಜಕುಮಾರ್ ಪಾಟೀಲ್ ಸೇಡಂ
15- ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರು

16-ಆಳಂದ – ಸುಭಾಷ್ ಗುತ್ತೇದಾರ್
17. ದೇವದುರ್ಗ – ಶಿವನಗೌಡ ನಾಯಕ್
18.-ಕನಕಗಿರಿ – ಬಸವರಾಜ್ ದಡೇಸುಗೂರ್
19. ಗಂಗಾವತಿ – ಪರಣ್ಣ ಮುನವಳ್ಳಿ
20. ಯಲಬುರ್ಗಾ – ಹಾಲಪ್ಪ ಆಚಾರ್
21. ರೋಣ – ಕಳಕಪ್ಪ ಬಂಡಿ
22- ನವಲಗುಂದ – ಶಂಕರ್ ಪಾಟೀಲ್ ಮುನೇನಕೊಪ್ಪ
23- ಧಾರವಾಡ – ಅಮೃತ್ ದೇಸಾಯಿ
24- ಕಾರವಾರ – ರೂಪಾಲಿ ನಾಯಕ್
25- ಸಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
26- ಭಟ್ಕಳ – ಸುನೀಲ್ ನಾಯ್ಕ್
27-ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
28-ಹಿರೇಕೆರೂರು – ಬಿ.ಸಿ ಪಾಟೀಲ್
29. ರಾಣೇಬೆನ್ನೂರು – ಅರುಣ್ ಕುಮಾರ್ ಪೂಜಾರ್
30. ಶಿರಗುಪ್ಪ – ಎಂ ಎಸ್ ಸೋಮಲಿಂಗಪ್ಪ

31. ಬಳ್ಳಾರಿ ಗ್ರಾಮೀಣ – ಶ್ರೀರಾಮಲು
32. ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ
33. ಚಿತ್ರದುರ್ಗ – ತಿಪ್ಪಾರೆಡ್ಡಿ
34. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
35.ಜಗಳೂರು – ಎಸ್ ವಿ ರಾಮಚಂದ್ರ
36. ಹರಪನಹಳ್ಳಿ – ಕರುಣಾಕರ್ ರೆಡ್ಡಿ..
37. ಹೊನ್ನಾಳಿ – ರೇಣುಕಾಚಾರ್ಯ
38. ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
39.- ಸೊರಬ – ಕುಮಾರ್ ಬಂಗಾರಪ್ಪ
40- ಸಾಗರ – ಹರತಾಳು ಹಾಲಪ್ಪ.
41.- ಚಿಕ್ಕಮಗಳೂರು – ಸಿಟಿ ರವಿ..
42.- ತರಿಕೆರೆ – ಡಿ ಎಸ್ ಸುರೇಶ್
43.- ಕಡೂರು – ಬೆಳ್ಳಿಪ್ರಕಾಶ್
44- ಚಿಕ್ಕನಾಯಕನಹಳ್ಳಿ – ಮಾಧುಸ್ವಾಮಿ.
45- ತಿಪಟೂರು – ಬಿ ಸಿ ನಾಗೇಶ್

46- ತುರುವೆಕೆರೆ – ಮಸಾಲಾ ಜಯರಾಂ
47-ಶಿರಾ – ಡಾ. ರಾಜೇಶ್ ಗೌಡ
48. ಚಿಕ್ಕಬಳ್ಳಾಪುರ – ಡಾ. ಸುಧಾಕರ್
49. ಹೊಸಕೋಟೆ – ಎಂಟಿಬಿ ನಾಗರಾಜ್
50- ಕನಕಪುರ – ಆರ್ ಅಶೋಕ್
51. ಚನ್ನಪಟ್ಟಣ – ಸಿಪಿ ಯೋಗಿಶ್ವರ್
52. ಕೆ ಆರ್ ಪೇಟೆ – ನಾರಾಯಣ್ ಗೌಡ
53. ಹಾಸನ – ಪ್ರೀತಮ್ ಗೌಡ
54. ಮಡಿಕೇರಿ – ಅಪ್ಪಚ್ಚು ರಂಜನ್
55. ವಿರಾಜಪೇಟೆ – ಬೋಪಯ್ಯ
56. ನಂಜನಗೂಡು – ಹರ್ಷವರ್ಧನ
57. ಚಾಮರಾಜನಗರ – ನಾಗೇಂದ್ರ
58. ವರುಣಾ – ವಿ ಸೋಮಣ್ಣ
59. ಕೊಳ್ಳೆಗಾಲ – ಎನ್ ಮಹೇಶ್.
60. ಚಾಮರಾಜನಗರ – ವಿ ಸೋಮಣ್ಣ
61. ಗುಂಡ್ಲುಪೇಟೆ – ನಿರಂಜನ್ ಕುಮಾರ್

ಗಮನಿಸಿ: ಈ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಆರ್‌ ಅಶೋಕ್‌ ಅವರು ಕನಕಪುರದಲ್ಲಿ ಸೋತಿದ್ದರೂ ಪದ್ಮನಾಭ ನಗರದಲ್ಲಿ ಗೆದ್ದಿದ್ದಾರೆ. ಮತ್ತು ವಿ. ಸೋಮಣ್ಣ ಅವರು ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರದಲ್ಲಿ ಸೋತಿದ್ದಾರೆ. ಹೀಗಾಗಿ ಸೋತ ಕ್ಷೇತ್ರಗಳು 61 ಆಗಿದ್ದರೂ ಸೋತ ಶಾಸಕರ ಸಂಖ್ಯೆ 59 ಆಗುತ್ತದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version