Site icon Vistara News

Karnataka Election: ಮತದಾನ ಮಾಡಿದ ರಾಜ್ಯದ ಪ್ರಮುಖ ಸ್ವಾಮೀಜಿಗಳು, ಇಲ್ಲಿವೆ ಫೋಟೊಗಳು

Karnataka Election: Swamijis of various mutts are casted their votes, here are some photos

Karnataka Election: Swamijis of various mutts are casted their votes, here are some photos

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನ ಮತದಾನ ಮಾಡುತ್ತಿದ್ದು, ಪ್ರಮುಖ ಮಠಗಳ ಸ್ವಾಮೀಜಿಗಳು ಕೂಡ ಮತಗಟ್ಟೆಗಳಿಗೆ ತೆರಳಿ ಹಕ್ಕುಚಲಾಯಿಸಿದರು. ಆ ಮೂಲಕ ಜನರಿಗೆ, ತಮ್ಮ ಅನುಯಾಯಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಎಲ್ಲರೂ ಮತದಾನ ಮಾಡಿ ಎಂದು ಬಳಕೆ ಕರೆಯನ್ನೂ ನೀಡಿದರು. ಮತದಾನ ಮಾಡಿದ ಪ್ರಮುಖ ಸ್ವಾಮೀಜಿಗಳ ಫೋಟೊಗಳು ಇಲ್ಲಿವೆ.

ಬೆಂಗಳೂರಿನಲ್ಲಿ ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಮತದಾನ ಮಾಡಿದರು
ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಹಕ್ಕು ಚಲಾಯಿಸಿದ ಶ್ರೀ ವಚನಾನಂದ ಸ್ವಾಮೀಜಿ
ತುಮಕೂರಿನಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಕ್ಕು ಚಲಾಯಿಸಿದರು
ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ ಹಾಕಿದರು
ಚಿತ್ರದುರ್ಗದ ಮಠದ ಶಾಲೆಯಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಮತದಾನ ಮಾಡಿದರು.
ಹಾಸನದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಮತ ಹಾಕಿದರು.
ನೆಲಮಂಗಲದಲ್ಲಿ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಕ್ಕು ಚಲಾಯಿಸಿದರು.
ಉಡುಪಿಯಲ್ಲಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ರಾಜರಾಜೇಶ್ವರ ತೀರ್ಥರು ಮತ ಚಲಾವಣೆ ಮಾಡಿದರು.

ಇದನ್ನೂ ಓದಿ: ‌Karnataka Election 2023: ಉತ್ತಮ ಮತದಾನ ದಾಖಲೆ, ಮೊದಲ 2 ಗಂಟೆಯಲ್ಲಿ ಶೇ.7 ದಾಟಿದ ವೋಟಿಂಗ್

Exit mobile version